ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಡುರಸ್ತೆಯಲ್ಲೇ ಮಹಿಳೆ ಜೊತೆ ಬಿಜೆಪಿ ನಾಯಕನ ಅಶ್ಲೀಲ ಕೃತ್ಯ- ವಿಡಿಯೊ ಫುಲ್‌ ವೈರಲ್

ಮಂದ್ಸೌರ್‌ನ ಬಿಜೆಪಿ ನಾಯಕ ಮನೋಹರ್ ಧಕಾಡ್ ಮಹಿಳೆಯೊಬ್ಬಳ ಜೊತೆಗಿನ ಅಶ್ಲೀಲ ದೃಶ್ಯವೊಂದು ಹೈ ಸೆಕ್ಯುರಿಟಿ ಕ್ಯಾಮೆರಾಗಳಲ್ಲಿ ಸೆರೆಯಾಗಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ನಾಯಕನೊಬ್ಬ ತಡರಾತ್ರಿ ದೆಹಲಿ-ಮುಂಬೈ ಹೆದ್ದಾರಿಯಲ್ಲಿ ಮಹಿಳೆಯೊಬ್ಬಳೊಂದಿಗೆ 'ಆಕ್ಷೇಪಾರ್ಹ' ಕೃತ್ಯದಲ್ಲಿ ತೊಡಗಿಕೊಂಡಿರುವ ವಿವಾದಾತ್ಮಕ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್(Viral Video) ಆಗಿದೆ. ಮಂದ್ಸೌರ್‌ನ ಬಿಜೆಪಿ ನಾಯಕ ಮನೋಹರ್ ಧಕಾಡ್(Manohar Dhakad) ಮಹಿಳೆಯೊಬ್ಬಳ ಜೊತೆಗಿನ ಅಶ್ಲೀಲತೆಯಲ್ಲಿ ತೊಡಗಿದ್ದ ದೃಶ್ಯ ಎಕ್ಸ್‌ಪ್ರೆಸ್‌ವೇಯಲ್ಲಿ ಅಳವಡಿಸಲಾದ ಹೈ ಸೆಕ್ಯುರಿಟಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

ವಿಡಿಯೊದಲ್ಲಿ ಮನೋಹರ್ ಧಕಾಡ್ ಎಕ್ಸ್‌ಪ್ರೆಸ್‌ವೇಯಲ್ಲಿ ನಿಲ್ಲಿಸಿದ್ದ ಬಿಳಿ ಬಣ್ಣದ ಬಲೆನೊ ಕಾರಿನೊಳಗೆ ಮಹಿಳೆಯೊಂದಿಗೆ ಆಕ್ಷೇಪ ಕೃತ್ಯದಲ್ಲಿ ತೊಡಗಿರುವುದು ಸೆರೆಯಾಗಿದೆ. ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ವಿಡಿಯೊ ಲೀಕ್ ಆದ ನಂತರ ಧಕಾಡ್ ಫೋನ್ ಸ್ವಿಚ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ. ಹಾಗಾಗಿ ಪೊಲೀಸರು ಆತನನ್ನು ಮತ್ತು ಇನ್ನೊಬ್ಬ ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಹಾಗೂ ಭಾನ್ಪುರ ಪೊಲೀಸರು ಮನೋಹರ್ ಧಕಾಡ್ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 296, 285 ಮತ್ತು 3(5) ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಸರಿಯಾದ ಕ್ರಮ ಕೈಗೊಳ್ಳಲು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಢಕಾಡ್ ಮಹಾಸಭಾ ಯುವ ಸಂಘ ಅವನನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದೆ ಎನ್ನಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಡಾ. ಅರ್ಜುನ್ ಢಕಾಡ್ ಅವರು ಈ ವಿವಾದದಿಂದ ಸಂಘಟನೆಯನ್ನು ದೂರವಿಡಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಾಗೇ ಈ ವಿಷಯವನ್ನು ಖಂಡಿಸಿದ ರತ್ಲಂ ವಲಯದ ಡಿಐಜಿ ಮನೋಜ್ ಕುಮಾರ್ ಸಿಂಗ್, "ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಶ್ಲೀಲ ಕೃತ್ಯ ಅತ್ಯಂತ ನಾಚಿಕೆಗೇಡಿನ ಸಂಗತಿ. ಈ ವಿಷಯವು ಗಂಭೀರವಾಗುವ ಸಾಧ್ಯತೆಗಳಿದ್ದು, ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ, ಈ ವಿಷಯ ತನಿಖೆಯಲ್ಲಿದೆ" ಎಂದು ಹೇಳಿದ್ದಾರೆ.

ಮನೋಹರ್ ಧಕಾಡ್ ಪತ್ನಿ ಮಂದ್ಸೌರ್‌ನ ಬನಿ ಗ್ರಾಮದ ವಾರ್ಡ್ ಸಂಖ್ಯೆ 8 ರ ಸರ್ಪಂಚ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾದ್ದಾಳೆ. ಈ ಸಂಬಂಧವು ಪ್ರಕರಣದ ಬಗ್ಗೆ ಹೆಚ್ಚಿನ ಗಮನ ಸೆಳೆದಿದೆ.

ಈ ಸುದ್ದಿಯನ್ನೂ ಓದಿ:‌Viral Video: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ತಲೆಗೆ ಬಂದು ಗುದ್ದಿದ ವ್ಯಕ್ತಿ; ವಿಡಿಯೊ ವೈರಲ್

ಬಿಜೆಪಿ ನಾಯಕರ ಇಂತಹ ಅಶ್ಲೀಲ ವಿಡಿಯೊ ಲೀಕ್ ಆಗಿ ಪಕ್ಷದ ಘನತೆಗೆ ಧಕ್ಕೆ ತಂದಿದ್ದು ಇದೇ ಮೊದಲಲ್ಲಾ. ಈ ಹಿಂದೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನರ್ತಕಿಯೊಂದಿಗೆ ಅಶ್ಲೀಲ ಕೃತ್ಯಗಳಲ್ಲಿ ತೊಡಗಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ವೈರಲ್ ಆದ ನಂತರ ಭಾರತೀಯ ಜನತಾ ಪಕ್ಷವು ಹಿರಿಯ ನಾಯಕ ಬಬ್ಬನ್ ಸಿಂಗ್ ರಘುವಂಶಿ ಅವರನ್ನು ಹುದ್ದೆಯಿಂದ ತೆಗೆದುಹಾಕಿತ್ತು. ಮದುವೆ ಸಂಭ್ರಮಾಚರಣೆಯಲ್ಲಿ ತೆಗೆದಿರುವಂತೆ ಕಾಣುವ ಈ ವಿಡಿಯೊದಲ್ಲಿ, ಬನ್ಸ್ದಿಹ್ ವಿಧಾನಸಭಾ ಕ್ಷೇತ್ರದ ಮಾಜಿ ಬಿಜೆಪಿ ಅಭ್ಯರ್ಥಿ ರಘುವಂಶಿ, ಮಹಿಳಾ ನರ್ತಕಿಯೊಂದಿಗೆ ತನ್ನ ತೊಡೆಯ ಮೇಲೆ ಕುಳಿತು ಅಸಭ್ಯ ವರ್ತನೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿತ್ತು.