ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬರಿಗೈಯಲ್ಲಿ ಶೌಚಾಲಯ ಕ್ಲೀನ್‌ ಮಾಡಿದ ಬಿಜೆಪಿ ಸಂಸದ; ವಿಡಿಯೋ ನೋಡಿದ ಜನರು ಹೇಳಿದ್ದೇನು?

Viral Video: ಮಧ್ಯಪ್ರದೇಶದ ರೇವಾ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಂಸದ ಜನಾರ್ದನ ಮಿಶ್ರಾ ಅವರು ಬರಿಗೈಯಿಂದ ಶೌಚಾಲಯದ ಸೀಟನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಂಗ್ರಹ ಚಿತ್ರ

ಭೋಪಾಲ್‌: ಮಧ್ಯಪ್ರದೇಶದ ರೇವಾ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ (BJP) ಸಂಸದ ಜನಾರ್ದನ ಮಿಶ್ರಾ ಅವರು ಬರಿಗೈಯಿಂದ ಶೌಚಾಲಯದ ಸೀಟನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಂಸದರು ಕೇವಲ ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್ 'ರೀಲ್' (Viral Video) ಹಾಗೂ ಪ್ರಚಾರದ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, ಹಲವರು ಇದನ್ನು ಕೇವಲ ಸೋಶಿಯಲ್ ಮೀಡಿಯಾ 'ರೀಲ್ಸ್'ಗಾಗಿ ಮಾಡಿದ ಗಿಮಿಕ್ ಎಂದು ಕಟುವಾಗಿ ಟೀಕಿಸಿದ್ದಾರೆ. ಸಾರ್ವಜನಿಕರ ಗಮನ ಸೆಳೆಯಲು ಮತ್ತು ರಾಜಕೀಯ ಲಾಭಕ್ಕಾಗಿ ಸಂಸದರು ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ, ಸಂಸದ ಜನಾರ್ದನ ಮಿಶ್ರಾ ಅವರಿಗೆ ಈ ರೀತಿಯ ಸ್ವಚ್ಛತಾ ಕಾರ್ಯ ಹೊಸದೇನಲ್ಲ.

ವಿಡಿಯೋ ನೋಡಿ



ಈ ಹಿಂದೆ 2018 ಮತ್ತು 2022 ರಲ್ಲೂ ಅವರು ಬಾಲಕಿಯರ ಶಾಲೆಯೊಂದರ ಕೊಳಕು ಶೌಚಾಲಯವನ್ನು ಯಾವುದೇ ಬ್ರಷ್ ಅಥವಾ ಗ್ಲೌಸ್ ಬಳಸದೇ ಬರಿಗೈಯಿಂದ ಉಜ್ಜಿ ತೊಳೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ 'ಸ್ವಚ್ಛ ಭಾರತ ಅಭಿಯಾನ'ದಿಂದ ಪ್ರೇರಿತರಾಗಿ, ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ತಾವು ನಿರಂತರವಾಗಿ ಈ ಕಾರ್ಯ ಮಾಡುತ್ತಿರುವುದಾಗಿ ಮಿಶ್ರಾ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.

ವಿಶೇಷ ಚೇತನ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿಯಿಂದ ಮಾರಣಾಂತಿಕ ಹಲ್ಲೆ; ಹೂ ಕುಂಡದಿಂದ ಥಳಿಸಿದ ವಿಡಿಯೊ ವೈರಲ್‌

ಸಂಸದರ ಬೆಂಬಲಿಗರು ಇದನ್ನು ಸ್ವಚ್ಛತೆಯ ಸಂದೇಶ ಸಾರುವ ಪ್ರಾಮಾಣಿಕ ಪ್ರಯತ್ನ ಎಂದು ಶ್ಲಾಘಿಸುತ್ತಿದ್ದರೆ, ಮತ್ತೊಂದೆಡೆ ತೀವ್ರ ಆಕ್ಷೇಪಗಳೂ ವ್ಯಕ್ತವಾಗಿವೆ. ಸ್ವಚ್ಛತೆಯ ಸಂದೇಶ ನೀಡುವಾಗ ಕನಿಷ್ಠ ಗ್ಲೌಸ್, ಮಾಸ್ಕ್ ಅಥವಾ ಬ್ರಷ್‌ಗಳನ್ನು ಬಳಸದೆ, ಬರಿಗೈಯಿಂದ ಶೌಚಾಲಯ ತೊಳೆಯುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಮತ್ತು ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ವೈದ್ಯಕೀಯ ಹಾಗೂ ಸಾಮಾಜಿಕ ವಲಯದ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

Vishakha Bhat Heggar

View all posts by this author