ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಪ್ರಾಣ ಉಳಿಸಿದ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್‌: ಯುವಕನ ಸಮಯಪ್ರಜ್ಞೆಗೆ ಹ್ಯಾಟ್ಯಾಫ್‌ ಎಂದ ನೆಟ್ಟಿಗರು

Viral Video: ಬ್ಲಿಂಕ್‌ಇಟ್‌ ಡೆಲಿವರಿ ಏಜೆಂಟ್ ಒಬ್ಬರು ಮಹಿಳೆಯೊಬ್ಬಳ ಪ್ರಾಣ ಉಳಿಸಿರುವ ಸುದ್ದಿ ಈಗ ಗಮನ ಸೆಳೆದಿದೆ. ತಡರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ್ದ ಮಹಿಳೆಯ ಮನವೊಲಿಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಮೂಲಕ ಡೆಲಿವರಿ ಬಾಯ್‌ ಹೀರೋ ಎನಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಪ್ರಾಣ ಉಳಿಸಿದ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್‌

ಚೆನ್ನೈ, ಜ. 9: ಇತ್ತೀಚೆಗೆ ತಂತ್ರಜ್ಞಾನ ಅಭಿವೃದ್ದಿಯಾಗಿದ್ದು ಆನ್‌ಲೈನ್ ಶಾಪಿಂಗ್ ಬಳಕೆ ವ್ಯಾಪಕವಾಗಿ ಹೆಚ್ಚಿದೆ. ಬಟ್ಟೆಯಿಂದ ಹಿಡಿದು ದಿನಸಿ, ಔಷಧಗಳವರೆಗೆ ಹೆಚ್ಚಿನವರು ಆನ್‌ಲೈನ್‌ನಲ್ಲೇ ಖರೀದಿಸುತ್ತಾರೆ. ಬ್ಲಿಂಕ್‌ಇಟ್, ಜಿಯೋ ಮಾರ್ಟ್, ರಿಲಯನ್ಸ್ ಡಿಜಿಟಲ್ ಮಾರ್ಟ್ ಸೇರಿದಂತೆ ಅನೇಕ ಆನ್‌ಲೈನ್‌ ಶಾಪಿಂಗ್‌ ಆ್ಯಪ್‌ ಬಳಕೆ ಹೆಚ್ಚಾಗಿದೆ. ಇತ್ತೀಚೆಗೆ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್‌ ಒಬ್ಬರು ಬಾಲ್ಕನಿಯಲ್ಲಿ ಸಿಲುಕಿದ್ದ ಯುವಕರನ್ನು ರಕ್ಷಿಸಿದ ಸುದ್ದಿ ಗಮನ ಸೆಳೆದಿತ್ತು. ಇದೀಗ ಮತ್ತೊಬ್ಬ ಬ್ಲಿಂಕ್‌ಇಟ್‌ ಡೆಲಿವರಿ ಏಜೆಂಟ್ ಒಬ್ಬರು ಮಹಿಳೆಯೊಬ್ಬಳ ಪ್ರಾಣ ಉಳಿಸಿದ್ದಾರೆ. ತಡರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ್ದ ಮಹಿಳೆಯ ಮನವೊಲಿಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಮೂಲಕ ಡೆಲಿವರಿ ಬಾಯ್‌ ಹೀರೋ ಎನಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ತಮಿಳುನಾಡಿನಲ್ಲಿ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್‌ ಒಬ್ಬರು ಮಹಿಳೆಯ ಪ್ರಾಣ ಉಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರಿಗೆ ತಡರಾತ್ರಿ ಮೂರು ಪ್ಯಾಕೆಟ್ ಇಲಿ ವಿಷದ ಆರ್ಡರ್ ಸಿಕ್ಕಿತ್ತು. ಅದನ್ನು ತೆಗೆದುಕೊಂಡು ವಿಳಾಸಕ್ಕೆ ತಲುಪಿದರು. ಆದಾಗ್ಯೂ ಮನೆ ತಲುಪಿದ ನಂತರ, ಏನೋ ತಪ್ಪಾಗಿದೆ ಎಂದು ಅವರಿಗೆ ಅನಿಸಿತು. ಬಾಗಿಲು ತೆರೆದ ಮಹಿಳೆ ದುಃಖದಲ್ಲಿರುವುದು ಕಾಣಿಸಿತು. ಜತೆಗೆ ಕಣ್ಣೀರು ಸುರಿಸುತ್ತಿದ್ದಳು. ಹಾಗಾಗಿ ಅಲ್ಲಿನ ಪರಿಸ್ಥಿತಿ ಕಂಡು ಡೆಲಿವರಿ ಬಾಯ್‌ಗೆ ಅನುಮಾನ ಶುರುವಾಗಿದೆ.

ವಿಡಿಯೊ ನೋಡಿ:



ಇಲಿ ಕಾಟವಿದ್ದರೆ ಸಂಜೆ ಅಥವಾ ಮರುದಿನ ಆರ್ಡರ್ ಮಾಡಬಹುದಿತ್ತು. ತಡರಾತ್ರಿ ಇಲಿ ಪಾಷಾಣ ಬೇಕೆಂದರೆ ಏನೋ ತೊಂದರೆಯಿದೆ ಎಂದು ಯೋಚಿಸಿದರು. ಹೀಗಾಗಿ ಆಕೆಯ ಭಾವನಾತ್ಮಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಅವರ ಬಳಿ ಪ್ರೀತಿಯಿಂದ ಮಾತನಾಡಿ ‘ʼನೀವು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದರಿಂದ ಇದನ್ನು ಆರ್ಡರ್ ಮಾಡಿದ್ದೀರಾ?’ʼ ಎಂದು ಕೇಳಿದರು. ʼʼಇಲ್ಲ ಬ್ರೋ, ಅದು ಹಾಗಲ್ಲ’ʼ ಎಂದು ಹೇಳಿದರೂ ಅಲ್ಲಿಂದ ಕದಲಿರಲಿಲ್ಲ. ʼʼನಿಮಗೆ ಇಲಿ ಸಮಸ್ಯೆ ಇದ್ದರೆ, ನೀವು ಅದನ್ನು ಏಳು ಗಂಟೆಯ ಸುಮಾರಿಗೆ ಅಥವಾ ಅದಕ್ಕಿಂತ ಮುಂಚೆಯೇ ಆರ್ಡರ್ ಮಾಡಬಹುದಿತ್ತು. ಈ ಸಮಯದಲ್ಲಿ ಅದನ್ನು ಆರ್ಡರ್ ಮಾಡಲು ಯಾವುದೇ ಕಾರಣವಿಲ್ಲʼʼ ಎಂದು ಪ್ರಶ್ನಿಸಿದರು.

ಅಯ್ಯೊಯ್ಯೋ ಹಸಿಯಾಗಿ ಇದೆಲ್ಲಾ ತಿಂತಾರಾ? ರೈಲಿನಲ್ಲಿ ವಿಚಿತ್ರ ಆಹಾರ ಸೇವನೆ ಮಾಡಿದ ವ್ಯಕ್ತಿ!

ʼʼಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಸಾವು ಪರಿಹಾರ ಅಲ್ಲ. ದಯವಿಟ್ಟು ಇಂತಹ ನಿರ್ಧಾರ ತೆಗೆದುಕೊಳ್ಳಬೇಡಿʼʼ ಎಂದು ಧೈರ್ಯ ತುಂಬಿದರು. ʼʼಅಂತಿಮವಾಗಿ ಆ ಆರ್ಡರ್ ಕ್ಯಾನ್ಸಲ್ ಮಾಡಿ, ವಿಷದ ಪ್ಯಾಕೆಟ್‌ಗಳನ್ನು ವಾಪಸ್ ನೀಡಿದರುʼʼ ಎಂದು ಡೆಲಿವರಿ ಬಾಯ್‌ ಹೇಳಿಕೊಂಡಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ನೆಟ್ಟಿಗರೊಬ್ಬರು, ʼʼಯುವಕನ ಸಮಯ ಪ್ರಜ್ಞೆ ಮೆಚ್ಚುವಂತದ್ದು. ಮಾನವೀಯತೆಯನ್ನು ನಂಬಿದ್ದಕ್ಕಾಗಿ ನಿಮಗೆ ಧನ್ಯವಾದಗಳುʼʼ ಎಂದು ಬರೆದುಕೊಂಡಿದ್ದಾರೆ. ʼʼಇಂತಹ ಮಾನವೀಯತೆ ಮೆರೆದ ಡೆಲಿವರಿ ಬಾಯ್‌ಗೆ ಬ್ಲಿಂಕ್‌ಇಟ್‌ ಕಂಪನಿ ಸೂಕ್ತ ಬಹುಮಾನ ನೀಡಬೇಕುʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.