ಮುಂಬೈ,ಅ.31: ಇತ್ತೀಚೆಗೆ ಹಿಟ್ ಆ್ಯಂಡ್ ರನ್ ಪ್ರಕರಣ, ರೋಡ್ ರೇಜ್‌ಗಳು ಹೆಚ್ಚಾಗಿ ಬಿಟ್ಟಿವೆ. ಇದೀಗ ಮುಂಬೈನಲ್ಲಿ ಬಿಎಂಡಬ್ಲ್ಯೂ ಕಾರಿನ ಚಾಲಕಿಯೊಬ್ಬಳು ತಡೆಯಲು ಬಂದ ಸಂಚಾರ ಪೊಲೀಸ್ ಅಧಿಕಾರಿಯ ಮೇಲೆಯೇ ಕಾರ್ ಚಲಾಯಿಸಲು ಯತ್ನಿಸಿದ ಘಟನೆಯೊಂದು ನಡೆದಿದೆ. ಮಹಿಳೆಯೂ ಮುಂಬೈ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರನ್ನು ಗುದ್ದಲು ಪ್ರಯತ್ನಿಸಿದ ದೃಶ್ಯವ ನ್ನೊಳಗೊಂಡ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಕಾರ್ ನ ನೋಂದಣಿ ಸಂಖ್ಯೆ MH 02 GJ 8704 ಆಗಿದ್ದು ಕಪ್ಪು ಬಣ್ಣದ ಬಿಎಂಡಬ್ಲ್ಯೂ ಕಾರಿನ ಮುಂದೆ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ನಿಂತು ಕಾರನ್ನು ನಿಲ್ಲಿಸುವಂತೆ ಸೂಚಿಸುತ್ತಿದ್ದಾರೆ. ಆದಾಗ್ಯೂ ಚಾಲಕಿ ಕಾರನ್ನು ನಿಲ್ಲಿಸದೆ ಮುಂದಕ್ಕೆ ಹೋಗುತ್ತಾಳೆ.
ವಿಡಿಯೋ ನೋಡಿ:
ಮಾಹಿತಿಯ ಪ್ರಕಾರ ಬಿಎಂಡಬ್ಲ್ಯೂ ಕಾರ್ ನ ಯುವತಿ ಯೊಬ್ಬಳು ಜುಹು ಪ್ರದೇಶದಲ್ಲಿ ಸ್ಕೂಟರ್, ಬೈಕ್ ಮತ್ತು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾಳೆ. ಈ ಎಲ್ಲಾ ಅಪಘಾತಗಳ ನಂತರವೂ ಮಹಿಳಾ ಚಾಲಕಿ ಕಾರನ್ನು ನಿಲ್ಲಿಸದೆ, ಸ್ಥಳದಿಂದ ಪರಾರಿ ಯಾಗಲು ಪ್ರಯತ್ನಿಸಿದ್ದಾರೆ.
Viral Video: ಮೈ ಜುಮ್ಮೆನಿಸುವ ದೃಶ್ಯ; ಸ್ಮಶಾನದಲ್ಲಿ ಸುಡುತ್ತಿದ್ದ ಹೆಣದ ಮಾಂಸ ತಿಂದ ಮಹಿಳೆ!
ಪೊಲೀಸ್ ಅಧಿಕಾರಿ ವಾಹನದ ಮುಂದೆ ನಿಂತು ಚಾಲಕಿಗೆ ಪದೇ ಪದೇ ಕಾರು ನಿಲ್ಲಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.ಆದರೂ, ಆ ಮಹಿಳೆ ವಾಹನ ದಟ್ಟಣೆಯ ನಡುವೆಯೂ ಕಾರನ್ನು ನಿಧಾನ ವಾಗಿ ಮುಂದಕ್ಕೆ ಚಲಾಯಿಸುತ್ತಲೇ ಇದ್ದಾಳೆ. ಕೊನೆಗೆ ರಸ್ತೆಯಲ್ಲಿದ್ದ ಸಾರ್ವಜನಿಕರು ಮತ್ತು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿ ಕಾರನ್ನು ತಡೆಯಲು ಯತ್ನಿಸಿದ್ದಾರೆ.. ಕಾರು ನಿಲ್ಲಿಸಿದ ನಂತರ ಚಾಲಕಿ ತನ್ನ ಮೊಬೈಲ್ ತೆಗೆದು ಸಾರ್ವಜನಿಕರ ವಿಡಿಯೋ ಮಾಡಲು ಪ್ರಾರಂಭಿಸಿತನಗೆ ರಸ್ತೆಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆಕೆ ಹೇಳಿಕೊಳ್ಳುತ್ತಾಳೆ.
ಮುಂಬೈ ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು ಪೊಲೀಸ್ ಅಧಿಕಾರಿಯ ಜೀವಕ್ಕೆ ಅಪಾಯ ತಂದೊಡ್ಡಿದ ಮತ್ತು ಸಂಚಾರ ನಿಯಮ ಉಲ್ಲಂಘಿಸಿದ ಚಾಲಕಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ ಕೇಳಿಬಂದಿದೆ.