ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೇಕೆ ಪ್ರಾಣ ಉಳಿಸಲು ಜೀವ ಪಣಕ್ಕಿಟ್ಟ ಬಾಲಕ; 40 ಅಡಿ ಆಳದ ಬಾವಿಗಿಳಿದು ರಕ್ಷಣೆ!

Viral Video: ಬಿಹಾರದ ಬಾಲಕನೊಬ್ಬ ಮಾನವೀಯತೆಯನ್ನು ಮೆರೆದಿರುವ ಘಟನೆ ಎಲ್ಲರನ್ನು ಮೆಚ್ಚುಗೆ ಗೊಳಿಸುವಂತೆ ಮಾಡಿದೆ. ಆಳವಾದ ಬಾವಿಗೆ ಬಿದ್ದ ಮೇಕೆ ಮರಿಯನ್ನು ಬಾಲಕನೊಬ್ಬ ಧೈರ್ಯದಿಂದ ರಕ್ಷಿಸಿದ ಘಟನೆ ಮೋತಿಹಾರಿ ಜಿಲ್ಲೆಯ ಪಹಾರ್‌ಪುರದಲ್ಲಿ ನಡೆದಿದೆ. ಬಾಲಕನು ತನ್ನ ಜೀವವನ್ನು ಲೆಕ್ಕಿಸದೆ 40 ಅಡಿ ಆಳದ ಬಾವಿಗೆ ಇಳಿದು ಮೇಕೆ ಮರಿಯನ್ನು ರಕ್ಷಣೆ ಮಾಡಿದ್ದಾನೆ..

ಮೇಕೆಯನ್ನು ರಕ್ಷಿಸಲು 40 ಅಡಿ ಆಳದ ಬಾವಿಗಿಳಿದ ಬಾಲಕ

ಬಿಹಾರ,ಫೆ.26: ಕಷ್ಟಕಾಲದಲ್ಲಿ ನೆರವಾದ ಅನೇಕ ಮಾನವೀಯ ಘಟನೆಗಳನ್ನು ನೀವು ಕಂಡಿರಬಹುದು.ಇತ್ತೀಚೆಗಷ್ಟೇ ಲಿಫ್ಟ್‌ ನೊಳಗೆ ಸಿಲುಕಿಕೊಂಡಿರುವ ಇಬ್ಬರು ಮಕ್ಕಳನ್ನು ಪುಟ್ಟ ಬಾಲಕಿ‌ ಯೊಬ್ಬಳು ರಕ್ಷಿಸಿದ ದೃಶ್ಯವೊಂದು ಭಾರೀ ವೈರಲ್ (Viral Video) ಆಗಿತ್ತು‌. ಇದೀಗ ಬಿಹಾರದ ಬಾಲಕನೊಬ್ಬ ಮಾನವೀಯತೆಯನ್ನು ಮೆರೆದಿರುವ ಘಟನೆ ಎಲ್ಲರನ್ನು ಮೆಚ್ಚುಗೆಗೊಳಿಸುವಂತೆ ಮಾಡಿದೆ. ಆಳವಾದ ಬಾವಿಗೆ ಬಿದ್ದ ಮೇಕೆ ಮರಿಯನ್ನು ಬಾಲಕನೊಬ್ಬ ಧೈರ್ಯದಿಂದ ರಕ್ಷಿಸಿದ ಘಟನೆ ಮೋತಿಹಾರಿ ಜಿಲ್ಲೆಯ ಪಹಾರ್‌ಪುರದಲ್ಲಿ ನಡೆದಿದೆ.

ಬಾಲಕನು ತನ್ನ ಜೀವವನ್ನು ಲೆಕ್ಕಿಸದೆ 40 ಅಡಿ ಆಳದ ಬಾವಿಗೆ ಇಳಿದು ಮೇಕೆ ಮರಿಯನ್ನು ರಕ್ಷಣೆ ಮಾಡಿದ್ದಾನೆ. ಬಾವಿಯ ಬಳಿ ಆಟವಾಡುತ್ತಿದ್ದ ಮೇಕೆ ಆಕಸ್ಮಿಕವಾಗಿ ಬಾವಿಯೊಳಗೆ ಜಾರಿ ಬಿದ್ದಿದೆ. ಬಿದ್ದ ಕೂಡಲೇ ಅದು ಜೋರಾಗಿ ಕಿರುಚಾಡಿದೆ. ಇದನ್ನು ಗಮನಿಸಿ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಅದನ್ನು ಮೇಲೆತ್ತಲು ಹರಸಾಹಸ ಪಟ್ಟರು. ಆದರೆ ಬಾವಿ ಅತ್ಯಂತ ಆಳ ಇರುವುದರಿಂದ ಯಾರೂ ಕೂಡ ಇಳಿಯಲು ಧೈರ್ಯ ಮಾಡಲಿಲ್ಲ.

ಹಲವಾರು ಪ್ರಯತ್ನಗಳ ನಂತರವೂ ಗ್ರಾಮಸ್ಥರು ಪ್ರಾಣಿಯನ್ನು ಹೊರತೆಗೆಯಲು ಸಾಧ್ಯ ವಾಗಲಿಲ್ಲ. ಈ ಸಂದರ್ಭದಲ್ಲಿ ಆ ಪುಟ್ಟ ಬಾಲಕ ತಾನೇ ಮುಂದೆ ಬಂದಿದ್ದಾನೆ‌.ರಕ್ಷಣೆಗೆ ಸ್ವಯಂ ಪ್ರೇರಿತರಾಗಿ ಬಂದ ಬಾಲಕನ ಸೊಂಟಕ್ಕೆ ಹಗ್ಗವನ್ನು ಸುರಕ್ಷಿತವಾಗಿ ಕಟ್ಟಲಾಯಿತು. ನಂತರ ಅವನನ್ನು ನಿಧಾನವಾಗಿ ಬಾವಿಗೆ ಇಳಿಸಲಾಗಿದೆ. ಆದರೆ ಇತರರು ಮೇಲಿನಿಂದ ಹಗ್ಗವನ್ನು ಎಚ್ಚರಿಕೆಯಿಂದ ಹಿಡಿದಿದ್ದರು.

Viral Video: ವೇದಿಕೆಯಲ್ಲೇ ಆ್ಯಂಕರ್‌ಗೆ ಚಪ್ಪಲಿಯಿಂದ ಹೊಡೆದ ಖ್ಯಾತ ಗಾಯಕಿ

ಬಾಲಕನು ಯಾವುದೇ ಭಯವಿಲ್ಲದೆ ಕೆಳಗೆ ಇಳಿದು, ಗಾಬರಿಯಾಗಿದ್ದ ಮೇಕೆ ಮರಿಯನ್ನು ಎಚ್ಚರಿಕೆಯಿಂದ ಹಿಡಿದುಕೊಂಡಿದ್ದಾನೆ. ಗ್ರಾಮಸ್ಥರ ಸಂಘಟಿತ ಪ್ರಯತ್ನದಿಂದ ಬಾಲಕ ಮತ್ತು ಮರಿ ಮೇಕೆ ಎರಡನ್ನೂ ಸುರಕ್ಷಿತವಾಗಿ ಮೇಲಕ್ಕೆ ಎಳೆಯಲಾಗಿದೆ. ಸದ್ಯ ಈ ರಕ್ಷಣಾ ಕಾರ್ಯಾಚರಣೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಕನ ಧೈರ್ಯಕ್ಕೆ ಸಾವಿರಾರು ಜನರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಕೆಲವರು ಇಷ್ಟು ಆಳದ ಬಾವಿಗೆ ಬಾಲಕನನ್ನು ಕಳುಹಿಸಿದ್ದು ತಪ್ಪು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.