ತಿರುವನಂತಪುರಂ, ಮಾ. 20: ಮಾನವೀಯತೆ ಮೆರೆಯುವ ಅನೇಕ ದೃಶ್ಯಗಳು (Viral Video) ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತವೆ. ಇದೀಗ ಕೇರಳಂನ ಬಾಲಕನು ಕಾಲು ನೋವಿನಿಂದ ಬಳಲುತ್ತಿದ್ದ ಶ್ವಾನದ ನೆರವಿಗೆ ಧಾವಿಸುವ ಮೂಲಕ ಜೆನ್ ಝೀಗಳಲ್ಲೂ ಪರೋಪಕಾರಿಗಳಿರುತ್ತಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಒದ್ದಾಡುತ್ತಿದ್ದ ಶ್ವಾನವನ್ನು ಆತ ರಸ್ತೆ ದಾಟಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆಯು ಜನದಟ್ಟಣೆಯಿಂದ ಕೂಡಿ ಅಪಾಯಕಾರಿಯಾಗಿದ್ದರೂ, ಬಾಲಕ ಇತರ ವಾಹನಗಳನ್ನು ನಿಲ್ಲಿಸಿ ಸುರಕ್ಷಿತವಾಗಿ ದಾಟಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾನೆ.
ಕಾಲು ನೋವಿನಿಂದ ಬಳಲುತ್ತಿದ್ದ ನಾಯಿಯೊಂದು ವಾಹನಗಳು ವೇಗವಾಗಿ ಚಲಿಸುತ್ತಿದ್ದರಿಂದ ರಸ್ತೆಯನ್ನು ದಾಟಲು ಸಾಧ್ಯವಾಗದೆ ಪರದಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ವಾಹನಗಳು ನಿರಂತರವಾಗಿ ಚಲಿಸುತ್ತಿದ್ದು, ನಾಯಿಗೆ ಸರಿಯಾಗಿ ರಸ್ತೆ ದಾಟಲು ಸಾಧ್ಯವಾಗುತ್ತಿರಲಿಲ್ಲ. ಆ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಬಾಲಕ ಇದನ್ನು ಗಮನಿಸಿ ಶ್ವಾನದ ನೆರವಿಗೆ ಧಾವಿಸಿದ. ಆ ಮೂಲಕ ಮಾನವೀಯತೆ ಮೆರೆದಿದ್ದಾನೆ.
ವಿಡಿಯೊ ನೋಡಿ:
ರಸ್ತೆಯೂ ಕಿಕ್ಕಿರಿದಿದ್ದು ಅಪಾಯಕಾರಿಯಾಗಿದ್ದರೂ, ಆ ಬಾಲಕ ವಾಹನವನ್ನು ನಿಲ್ಲಿಸಿ ಶ್ವಾನ ಸಾಗಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾನೆ. ಶ್ವಾನ ಸುರಕ್ಷಿತವಾಗಿ ರಸ್ತೆಯ ಇನ್ನೊಂದು ಬದಿಗೆ ಹೋಗುವವರೆಗೂ ಅಲ್ಲಿಯೇ ಇದ್ದು ಎಚ್ಚರಿಕೆ ವಹಿಸಿದ್ದಾನೆ. ಬಾಲಕನ ಈ ಧೈರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು; ವಿಡಿಯೊ ವೈರಲ್
ಬಾಲಕನ ಈ ಸರಳ ಕೃತ್ಯವು ಅನೇಕರ ಗಮನ ಸೆಳೆದಿದ್ದು, ನೆಟ್ಟಿಗರು ಬಾಲಕನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ನೋಡಿದ ನೆಟ್ಟಿಗರೊಬ್ಬರು, “ಸಾಮಾನ್ಯವಾಗಿ ಕೇರಳಂ ಕ್ರೌರ್ಯಕ್ಕಾಗಿ ಸುದ್ದಿಯಲ್ಲಿರುತ್ತದೆ. ಆದರೆ ದಯೆಗಾಗಿ ಅದನ್ನು ನೋಡಲು ತುಂಬಾ ಸಂತೋಷವಾಗುತ್ತದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಈ ಸಣ್ಣ ಸಂತೋಷ ಜೀವನವನ್ನು ಉತ್ತಮಗೊಳಿಸುತ್ತವೆ. ಆದರೆ ಸುರಕ್ಷತೆಯೂ ಮುಖ್ಯʼʼ ಎಂದಿದ್ದಾರೆ. ಅನೇಕರು PETA ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ.