ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ; ಬಾಡಿಗೆ ಹಣ ಪಡೆಯದೆ ಹೃದಯವಂತಿಕೆ ತೋರಿಸಿದ ಆಟೋ ಚಾಲಕ

ಒಳ್ಳೆಯತನಕ್ಕೆ ವಯಸ್ಸಿನ ಹಂಗಿಲ್ಲ. ನಾವು ಇತರರಿಗೆ ಒಳ್ಳೆದು ಮಾಡಬೇಕು ಎಂಬ ಮನಸ್ಸಿದ್ದರೆ ಸಾಕು. ಇದಕ್ಕೆ ಪೂರಕವಾಗಿ ದೆಹಲಿಯಲ್ಲಿ ನಡೆದ ಈ ದೃಶ್ಯವು ಎಲ್ಲರ ಮುಖದಲ್ಲೊಂದು ನಗು ಮೂಡಿಸಿದೆ. ಶಾಲಾ ಬಾಲಕನೊಬ್ಬ ತನ್ನ ತಂಗಿಯೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗ ಅದೇ ದಾರಿಯಲ್ಲಿ ಬಾಲಕಿಯೊಬ್ಬಳು ಆಟೋ ಸಿಗದೇ ಪರದಾಡುತ್ತಿದ್ದನ್ನು ಗಮನಿಸಿ ತಕ್ಷಣವೇ ಆಟೋ ನಿಲ್ಲಿಸಿ ತಮ್ಮ ಜತೆಗೆ ಕರೆದುಕೊಂಡು ಹೋಗಿದ್ದಾನೆ. ಈತನ ಈ ಸಹಾಯ ಮನೋಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದು ಬಾಲಕನ ಈ ದೊಡ್ಡ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಾಲಕನ ಔದಾರ್ಯಕ್ಕೆ ಮನಸೋತ ಆಟೋ ಚಾಲಕ

ನವದೆಹಲಿ, ಜೂ. 27: ​ಇಂದು ಮಾನವೀಯತೆ ಮೆರೆಯುವ ಅನೇಕ ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತವೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಒಳ್ಳೆಯತನಕ್ಕೆ ವಯಸ್ಸಿನ ಹಂಗಿಲ್ಲ. ನಾವು ಇತರರಿಗೆ ಒಳ್ಳೆದು ಮಾಡಬೇಕು ಎಂಬ ಮನಸ್ಸಿದ್ದರೆ ಸಾಕು ಎನ್ನುವ ಮಾತಿದೆ. ಇದಕ್ಕೆ ಪೂರಕವಾಗಿ ದೆಹಲಿಯಲ್ಲಿ ನಡೆದ ದೃಶ್ಯವು ಎಲ್ಲರ ಮುಖದಲ್ಲೊಂದು ನಗು ಮೂಡಿಸಿದೆ. ಶಾಲಾ ಬಾಲಕನೊಬ್ಬ ತನ್ನ ತಂಗಿಯೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗ ಅದೇ ದಾರಿಯಲ್ಲಿ ಬಾಲಕಿಯೊಬ್ಬಳು ಪರದಾಡುತ್ತಿದ್ದನ್ನು ಗಮನಿಸಿ ತಕ್ಷಣವೇ ಆಟೋ ನಿಲ್ಲಿಸಿ ತಮ್ಮ ಜತೆಗೆ ಕರೆದುಕೊಂಡು ಹೋಗಿದ್ದಾನೆ. ಈತನ ಈ ಸಹಾಯ ಮನೋಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದು ಬಾಲಕನ ಈ ದೊಡ್ಡ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಾಲಕನ ದಯೆ ಮತ್ತು ಆಟೋ ಚಾಲಕನ ಔದಾರ್ಯವನ್ನು ಪ್ರದರ್ಶಿಸುವ ಈ ವಿಡಿಯೊ ಎಲ್ಲರ ಮನಗೆದ್ದಿದೆ. ಒಬ್ಬ ಬಾಲಕ ಮತ್ತು ಆಟೋ-ರಿಕ್ಷಾ ಚಾಲಕನ ನಡುವಿನ ಸರಳ ಸಂವಾದಕ್ಕೆ ನೆಟ್ಟಿಗರು ಲೈಕ್, ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಾಲಕ ಹಾಗೂ ಆತನ ತಂಗಿ ಶಾಲೆಗೆ ಹೋಗಲು ಆಟೋ ಹತ್ತುವುದರೊಂದಿಗೆ ಈ ವಿಡಿಯೊ ಪ್ರಾರಂಭವಾಗುತ್ತದೆ. ದಾರಿಯಲ್ಲಿ ಅದೇ ಶಾಲೆಯ ಮತ್ತೊಬ್ಬ ಹುಡುಗಿ, ವಾಹನ ಸಿಗದೆ ತಡವಾಯಿತು ಎಂದು ಗಾಬರಿಗೊಂಡಿದ್ದಾಳೆ.

ಇದನ್ನು ಗಮನಿಸಿದ ಬಾಲಕ ತಕ್ಷಣವೇ ಸ್ಪಂದಿಸಿದ್ದು ಆಕೆಯನ್ನು ಸಹ ತನ್ನ ಆಟೋದಲ್ಲಿಯೇ ಕುಳ್ಳಿರಿಸಿಕೊಂಡು ಶಾಲೆಗೆ ಕರೆದುಕೊಂಡು ಬಂದಿದ್ದಾನೆ. ಶಾಲೆ ಬಂದ ತಕ್ಷಣ ಇಬ್ಬರು ಬಾಲಕಿಯರು ಅವರ ಪಾಡಿಗೆ ನಡೆದುಕೊಂಡು ಹೋಗಿದ್ದಾರೆ. ಬಾಲಕ ಆಟೋ ಬಾಡಿಗೆ ಪಾವತಿಸಲು ಹಣ ತೆಗೆದಾಗ, ಚಾಲಕ ಇಬ್ಬರೂ ನಿನ್ನ ತಂಗಿಯಾ? ಎಂದು ವಿಚಾರಿಸಿದ್ದಾನೆ.

ವಿಡಿಯೊ ನೋಡಿ:



ಆ ಹುಡುಗನ, ʼʼಅವರಲ್ಲಿ ಒಬ್ಬಳು ಮಾತ್ರ ನನ್ನ ಸಹೋದರಿ. ಮತ್ತೊಬ್ಬಳ ಪರಿಚಯವಿಲ್ಲ. ಆಕೆಗೆ ತಡವಾಗುತ್ತಿತ್ತು. ಆದ್ದರಿಂದ ನಾನು ಅವಳನ್ನು ನಮ್ಮೊಂದಿಗೆ ಕರೆದುಕೊಂಡು ಹೋಗಲು ಯೋಚಿಸಿದೆʼʼ ಎಂದು ಹೇಳಿದ್ದಾನೆ. ​ಚಿಕ್ಕ ವಯಸ್ಸಿನಲ್ಲೇ ಬಾಲಕನಿಗಿದ್ದ ಈ ಸಹಾಯ ಗುಣವನ್ನು ನೋಡಿ ಆಟೋ ಚಾಲಕ ಮೆಚ್ಚಿಕೊಂಡಿದ್ದಾನೆ. ಬಾಲಕನ ಸತ್ಕಾರ್ಯಕ್ಕೆ ಫಿದಾ ಆದ ಚಾಲಕ, ಆತನಿಂದ ಹಣ ಪಡೆಯಲು ನಿರಾಕರಿಸಿದ್ದಾನೆ. ಅಗತ್ಯವಿರುವವರಿಗೆ ಯಾವುದೇ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಸಹಾಯ ಮಾಡುವ ಗುಣ ನೋಡಿ ಹಣ ಸ್ವೀಕರಿಸದಿರಲು ನಿರ್ಧರಿಸಿದ್ದಾನೆ.

ದಕ್ಷಿಣ ಕೊರಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಕಿರುಕುಳ

ʼʼನೀವು ಹಣ ಪಾವತಿಸುವ ಅಗತ್ಯವಿಲ್ಲ, ಸಂತೋಷವಾಗಿರಿ. ಈ ಹಣದಲ್ಲಿ ತಿನ್ನಲು ಏನನ್ನಾದರೂ ಖರೀದಿಸಿ ಮತ್ತು ನಿಮ್ಮ ಸಹೋದರಿಯೊಂದಿಗೆ ಹಂಚಿಕೊಳ್ಳಿʼʼ ಎಂದು ಚಾಲಕ ಬಾಲಕನಿಗೆ ಹೇಳಿದ್ದಾನೆ. ʼʼಈ ಮಕ್ಕಳ ಮುಖದಲ್ಲಿನ ಸಂತೋಷ ನನಗಿಂತ ದೊಡ್ಡದು, ಹಣ ಮುಖ್ಯವಲ್ಲʼʼ ಎಂದಿದ್ದಾನೆ.

ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, 5.4 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದೆ. ನೆಟ್ಟಿಗರೊಬ್ಬರು, ʼʼಅವನಿಗೆ ನಿಜವಾಗಿಯೂ ಸುಂದರ ಹೃದಯವಿದೆʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಈ ಆಟೋ ಚಾಲಕನಿಂದ ಇನ್ನು ಮಾನವೀಯತೆ ಉಳಿದಿದೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.