ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶ್ರೀರಾಮನ ಮೇಲೆ ಹಲ್ಲೆ ಮಾಡುತ್ತಿರುವ ಬಿ.ಆರ್. ಅಂಬೇಡ್ಕರ್; ಆಕ್ಷೇಪಾರ್ಹ ಎಐ ವಿಡಿಯೊ ವೈರಲ್, ಆರೋಪಿ ಅರೆಸ್ಟ್

BR Ambedkar Attacking Lord Ram: ಶ್ರೀರಾಮ ಮತ್ತು ಭಾರತೀಯ ಸಂವಿಧಾನದ ಪ್ರಮುಖ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರನ್ನು ಒಳಗೊಂಡ ಆಕ್ಷೇಪಾರ್ಹ ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

ಲಖನೌ: AI (ಕೃತಕ ಬುದ್ಧಿಮತ್ತೆ) ದುರುಪಯೋಗ ದಿನೇ ದಿನೆ ಹೆಚ್ಚಾಗುತ್ತಿದ್ದು, ತೀವ್ರ ಕಳವಳಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ (Uttar Pradesh) ಅಂಬೇಡ್ಕರ್ ನಗರದ ಇತ್ತೀಚಿನ ಪ್ರಕರಣವೊಂದು ಮತ್ತಷ್ಟು ಆತಂಕ ತಂದೊಡ್ಡಿದೆ. ಮರ್ಯಾದಾ ಪುರುಷೋತ್ತಮ ರಾಮ ಮತ್ತು ಭಾರತೀಯ ಸಂವಿಧಾನದ ಪ್ರಮುಖ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರನ್ನು ಒಳಗೊಂಡ ಆಕ್ಷೇಪಾರ್ಹ ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ.

ಜಲಾಲ್ಪುರದ ಸೆಹ್ರಾ ನಿವಾಸಿ ವಿಜಯ್ ಕುಮಾರ್ ಎಂಬವರು ಈ ವಿಡಿಯೊವನ್ನು ರಚಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಇದು ಬಿಜೆಪಿ ಬೆಂಬಲಿಗರು ಮತ್ತು ಶ್ರೀರಾಮನ ಭಕ್ತರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಗ್ರಾಮಸ್ಥರು ಮತ್ತು ಬಿಜೆಪಿ ಕಾರ್ಯಕರ್ತರು ಈ ವಿಡಿಯೊವನ್ನು ತೀವ್ರ ಆಕ್ರಮಣಕಾರಿ ಎಂದು ಬಣ್ಣಿಸಿದ್ದು, ಇದು ಭಗವಂತ ರಾಮನ ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ವಿಡಿಯೊ ವೀಕ್ಷಿಸಿ:



ಇದನ್ನೂ ಓದಿ: Viral Video: ಅವನು ನನ್ನ ಪಕ್ಕದಲ್ಲಿ ಮಲಗಲು ಯತ್ನಿಸುತ್ತಿದ್ದ- ರೈಲಿನಲ್ಲಾದ ಭಯಾನಕ ಅನುಭವ ಬಿಟ್ಟಿಟ್ಟ ಯುವತಿ

ಈ ವಿಡಿಯೊ ಎರಡು ಅನಿಮೇಟೆಡ್ ಪಾತ್ರಗಳ ನಡುವಿನ ಹೋರಾಟದ ದೃಶ್ಯವನ್ನು ಚಿತ್ರಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿದೆ. ಒಂದು ಅನಿಮೇಟೆಡ್ ಪಾತ್ರವನ್ನು ರಾಮನಾಗಿ ಮತ್ತು ಇನ್ನೊಂದು ಡಾ. ಬಿ.ಆರ್. ಅಂಬೇಡ್ಕರ್ ಆಗಿ ಚಿತ್ರಿಸಲಾಗಿದೆ. ಬಿಜೆಪಿ ಮಂಡಲ ಉಪಾಧ್ಯಕ್ಷ ಕಮಲೇಶ್ ಸಿಂಗ್ ನೀಡಿದ ದೂರಿನ ಮೇರೆಗೆ ಪೊಲೀಸರು ವಿಜಯ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಅ. 13ರಂದು ಮಹಾರುವಾ ಪೊಲೀಸ್ ಠಾಣೆಯಲ್ಲಿ, ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಮತ್ತು ಭಗವಂತ ಶ್ರೀರಾಮನನ್ನು ಒಳಗೊಂಡ ಆಕ್ಷೇಪಾರ್ಹ ವಿಡಿಯೊವನ್ನು ಪ್ರಸಾರ ಮಾಡಿದ್ದಕ್ಕಾಗಿ ಸೆಹ್ರಾ ಜಲಾಲ್ಪುರ್ ಗ್ರಾಮದ ನಿವಾಸಿ, ರಾಮಸರಣ್ ಅವರ ಪುತ್ರ ವಿಜಯ್ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರದಲ್ಲಿ ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಮೇದ್ಕರ್‌ನಗರ ಪೊಲೀಸರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಈ ವಿಡಿಯೊ ವೈರಲ್ ಆದ ಬೆನ್ನಲ್ಲೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಬಳಕೆದಾರರಲ್ಲಿ ಒಬ್ಬರು, AI ಅನೇಕ ಜನರನ್ನು ಜೈಲಿಗೆ ಕಳುಹಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಭಾರತದ ಯುವಕರು ಜಾತಿವಾದವನ್ನು ಹೆಚ್ಚಿಸಲು AI ಅನ್ನು ಬಳಸುತ್ತಿದ್ದಾರೆ. ಈ ದೇಶವು ಗುಲಾಮಗಿರಿಗೆ ಒಳಗಾಗಿದ್ದು ವ್ಯರ್ಥವಲ್ಲ ಎಂದು ಹೇಳಿದರು.