ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಧುವಿನ ಭರ್ಜರಿ ಡಾನ್ಸ್‌; ಮಂಟಪದಲ್ಲೇ ಮದುವೆ ಕ್ಯಾನ್ಸಲ್‌ ಮಾಡಿದ ವರ- ಈ ವಿಡಿಯೊ ನೋಡಿ

Groom ends marriage: ವರನೊಬ್ಬ ತಮ್ಮ ಮದುವೆಯ ರಾತ್ರಿ, ಆರತಕ್ಷತೆಯ ಸಮಯದಲ್ಲಿ ವಧುವು ತನ್ನ ಸೋದರಸಂಬಂಧಿಯೊಂದಿಗೆ ನೃತ್ಯ ಮಾಡುವುದನ್ನು ನೋಡಿದ ನಂತರ ಮದುವೆಯಾಗಲು ನಿರಾಕರಿಸಿರುವ ಘಟನೆ ನಡೆದಿದೆ. ಅಸಮಾಧಾನಗೊಂಡ ವರ ಮಂಟಪದಲ್ಲೇ ವಧುವಿಗೆ ವಿಚ್ಛೇದನ ನೀಡುವುದಾಗಿ ಹೇಳಿದ್ದಾನೆ. ಇದರ ವಿಡಿಯೊ ವೈರಲ್ ಆಗಿದೆ.

ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಹಾಡು, ನೃತ್ಯ, ತಮಾಷೆ ಸಾಮಾನ್ಯವಾಗಿಬಿಟ್ಟಿದೆ. ವಿವಾಹ ಮಹೋತ್ಸವವು ಪ್ರೀತಿ, ಐಕ್ಯತೆ ಮತ್ತು ಹೊಸ ಆರಂಭಗಳನ್ನು ಆಚರಿಸಲು ಉದ್ದೇಶಿಸಲ್ಪಟ್ಟಿವೆ. ಆದರೆ, ಇಲ್ಲೊಂದೆಡೆ ವೈವಾಹಿಕ ಕಾರ್ಯಕ್ರಮವು ಆಘಾತಕಾರಿ ತಿರುವು ಪಡೆದುಕೊಂಡಿತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯೊಂದರಲ್ಲಿ, ವರನೊಬ್ಬ ತಮ್ಮ ಮದುವೆಯ ರಾತ್ರಿ, ಆರತಕ್ಷತೆಯ ಸಮಯದಲ್ಲಿ ವಧುವು ತನ್ನ ಸೋದರಸಂಬಂಧಿಯೊಂದಿಗೆ ನೃತ್ಯ ಮಾಡುವುದನ್ನು ನೋಡಿದ ನಂತರ ಮದುವೆಯಾಗಲು ನಿರಾಕರಿಸಿರುವ ಘಟನೆ ನಡೆದಿದೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ನೂತನ ವಧು-ವರನ ಮದುವೆ ಸಮಾರಂಭವು ಸಂತೋಷದಾಯಕವಾಗಿ ಪ್ರಾರಂಭವಾಯಿತು. ಆದರೆ, ನೃತ್ಯದ ಬಗ್ಗೆ ಭಿನ್ನಾಭಿಪ್ರಾಯವು ವಾಗ್ವಾದಕ್ಕೆ ತಿರುಗಿದಾಗ ಉದ್ವಿಗ್ನತೆ ಹೆಚ್ಚಾಯಿತು. ನವವಿವಾಹಿತ ವಧು ತನ್ನ ಸೋದರಸಂಬಂಧಿಗಳೊಂದಿಗೆ ನೃತ್ಯ ಮಾಡುವುದನ್ನು ನೋಡಿ ವರನು ಅಸಮಾಧಾನಗೊಂಡಿದ್ದಾನೆ ಎಂದು ವರದಿಯಾಗಿದೆ.

ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವರನು ವಧುವಿನ ಮೇಲೆ ಕೂಗಾಡುತ್ತಿರುವುದನ್ನು ಮತ್ತು ಅತಿಥಿಗಳ ಮುಂದೆ ಅವಳನ್ನು ಕೋಪದಿಂದ ಬೈಯುತ್ತಿರುವುದನ್ನು ತೋರಿಸಲಾಗಿದೆ. ವಧು ಕೂಡ ಇದಕ್ಕೆ ಪ್ರತಿಯಾಗಿ ಕೂಗಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಇಬ್ಬರ ನಡುವೆ ಜಗಳ ಶುರುವಾಗುತ್ತಿದ್ದಂತೆ ಅಲ್ಲಿ ನೆರೆದಿದ್ದವರು ವಾಗ್ವಾದವನ್ನು ಶಮನಗೊಳಿಸಲು ಮುಂದಾಗಿದ್ದಾರೆ. ದಂಪತಿಗಳು ಮದುವೆಯಾದ ಕೆಲವೇ ಗಂಟೆಗಳಲ್ಲಿ ವರನು ಮದುವೆಯನ್ನು ಕೊನೆಗೊಳಿಸುತ್ತಿರುವುದಾಗಿ ಘೋಷಿಸುವುದರೊಂದಿಗೆ ಜಗಳ ಕೊನೆಗೊಂಡಿತು.

ವಿಡಿಯೊ ವೀಕ್ಷಿಸಿ:



ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಕೆದಾರರು ವರನ ಪ್ರತಿಕ್ರಿಯೆಯಿಂದ ಆಘಾತ ಮತ್ತು ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಕಾಮೆಂಟ್‌ಗಳು ಅವನನ್ನು ಅತಿಯಾದ ಪೊಸೆಸಿವ್ ವ್ಯಕ್ತಿ ಮತ್ತು ಅಸುರಕ್ಷಿತ ಎಂದು ಟೀಕಿಸಿವೆ. ಇನ್ನೂ ಕೆಲವರು ವಧುವಿಗೆ ಧೈರ್ಯ ತುಂಬಿದ್ದಾರೆ. ಇದನ್ನು ನಿಮ್ಮ ಜೀವನದಲ್ಲಿ ಎರಡನೇ ಅವಕಾಶವೆಂದು ಪರಿಗಣಿಸಿ. ನಿಜಕ್ಕೂ, ನೀವು ರಕ್ಷಿಸಲ್ಪಟ್ಟಿದ್ದೀರಿ ಎಂದು ಒಬ್ಬ ಬಳಕೆದಾರರು ಹೇಳಿದರು.

ತನ್ನ ಜೀವನದುದ್ದಕ್ಕೂ ಪರಿಚಿತವಾಗಿರುವ ತನ್ನ ಸೋದರಸಂಬಂಧಿಯ ಬಗ್ಗೆ ಅಸೂಯೆ ಪಡುವುದು ಎಷ್ಟು ಅಸುರಕ್ಷಿತವಾಗಿರಬಹುದು ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ಅದೃಷ್ಟವಶಾತ್ ಜೀವನಪೂರ್ತಿ ಅಂಥವನ ಜೊತೆ ಜೀವನ ಸಾಗಿಸುವುದು ತಪ್ಪಿತು ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ನಿಜವಾದ ಸಂಭಾವಿತ ವ್ಯಕ್ತಿಯಾಗಿದ್ದರೆ ಆತ ಆ ರೀತಿ ಪ್ರತಿಕ್ರಿಯಿಸುತ್ತಿರಲಿಲ್ಲ. ಖಂಡಿತ, ವಿಚ್ಛೇದನ ಪಡೆಯಲೇಬೇಕು ಎಂದು ಮಗದೊಬ್ಬರು ಹೇಳಿದರು.

ಈಗ ವಿಚ್ಛೇದನ ಪಡೆಯುವುದು ಉತ್ತಮ. ದೇವರು ಅವಳನ್ನು ಪ್ರೀತಿಸುತ್ತಾನೆ ಅದಕ್ಕೆ ಮದುವೆಯ ದಿನವೇ ಅವನು ಎಂಥವನು ಎಂಬುದು ತಿಳಿಯಿತು. ಅವನು ಸರಿಯಾದ ಗಂಡನಲ್ಲ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವಳು ಗಂಡಾಂತರದಿಂದ ಪಾರಾದಳು. ಮದುವೆಯ ರಾತ್ರಿಯನ್ನು ಹೊಂದದಿರುವುದು ಒಳ್ಳೆಯದೇ ಆಯ್ತು ಎಂದು ಮತ್ತೊಬ್ಬ ವ್ಯಕ್ತಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Viral Video: ಜಿಮ್‍ನಲ್ಲಿ ಜಡೆ ಜಗಳ; ಜುಟ್ಟು-ಜುಟ್ಟು ಹಿಡಿದು ಮಹಿಳೆಯರ ಬಿಗ್‌ ಫೈಟ್‌! ವಿಡಿಯೊ ವೈರಲ್