ನವದೆಹಲಿ, ಮೇ 5: ಹಿಂದೂ ಧರ್ಮದಲ್ಲಿ ಮದುವೆಗೆ ಪವಿತ್ರವಾದ ಸ್ಥಾನವಿದೆ. ವಿವಿಧ ಕಟ್ಟುಪಾಡುಗಳಾದ ಸಪ್ತಪದಿ, ಮಂಗಳಸೂತ್ರಧಾರಣೆ, ಮತ್ತು ಕನ್ಯಾದಾನದಂತಹ ಆಚರಣೆ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದೆ. ಈ ನಡುವೆ ಮದುವೆ ಕಾರ್ಯಕ್ರಮವೊಂದರಲ್ಲಿ ಪಿತೃಪ್ರಧಾನ ಭಾರತೀಯ ವಿವಾಹ ಆಚರಣೆಯ ಬಗ್ಗೆ ಯುವತಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ವಿವಾಹದ ವಿಧಿ ವಿಧಾನದ ಸಂದರ್ಭದಲ್ಲಿ ಪಾದ್ರಿಯೂ ವಧುವನ್ನು ತನ್ನ ಗಂಡನ ಒಪ್ಪಿಗೆಯಿಲ್ಲದೆ ತನ್ನ ಪೋಷಕರ ಮನೆಗೆ ಭೇಟಿ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಕೇಳುವಾಗ ವಧು ಮದುವೆ ಸಮಾರಂಭದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.
ಹಿಂದು ವಿವಾಹದಲ್ಲಿ ಸಂಪ್ರದಾಯಗಳನ್ನು ವಧು- ವರರ ಜೀವನದ ಆತ್ಯಂತ ಮುಖ್ಯವಾದ ಭಾಗವನ್ನಾಗಿ ಆಚರಣೆ ಮಾಡಲಾಗುತ್ತದೆ. ವೈರಲ್ ವೀಡಿಯೊವೊಂದು ಭಾರತೀಯ ವಿವಾಹ ಸಂಪ್ರದಾಯಗಳ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಕೆಲವು ಹಿಂದಿನ ಆಚರಣೆಗಳು ಹಳೆಯ ಪಿತೃಪ್ರಧಾನ ಸಂಪ್ರದಾಯಗಳು ಇಂದಿಗೂ ಮುಖ್ಯವಾಗಬೇಕೆ? ಎಂದು ಹಲವಾರು ಪ್ರಶ್ನೆ ಮಾಡಿದ್ದಾರೆ.
ವಿಡಿಯೊದಲ್ಲಿ, ಒಬ್ಬ ಪಾದ್ರಿ ವಿವಾಹ ಭೋದನಾ ಪಠಿಸುವಾಗ ವಧುವನ್ನು ತನ್ನ ಗಂಡನ ಒಪ್ಪಿಗೆಯಿಲ್ಲದೆ ತನ್ನ ಪೋಷಕರ ಮನೆಗೆ ಭೇಟಿ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಕೇಳುತ್ತಾರೆ ಆಗ ವಧುವು ಭಾವುಕಳಾಗಿದ್ದು ತನ್ನ ಸ್ವಂತನ ಮನೆಗೆ ಹೋಗಲು ಗಂಡನ ಅನುಮತಿ ಪಡೆಯಬೇಕೇ? ಎಂದು ಪ್ರಶ್ನಿಸಿದ್ದಾಳೆ.
ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಆ ಘಟನೆಯನ್ನು ಅನಿತಾ ರಾಣಿ ಎಂಬ ಕಂಟೆಂಟ್ ಕ್ರಿಯೇಟರ್ ಶೇರ್ ಮಾಡಿದ್ದು ತಮ್ಮ ಜೀವನ ದಲ್ಲಿ ನಡೆದ ಘಟನೆಯನ್ನು ಕೂಡ ನೆನಪಿಸಿಕೊಂಡಿದ್ದಾರೆ. ತನ್ನ ಮಗಳ ಮದುವೆಯಲ್ಲಿ ವಿಧವೆ ಎಂಬ ಕಾರಣಕ್ಕಾಗಿ ಕನ್ಯಾದಾನ ಆಚರಣೆಯನ್ನು ಮಾಡುವ ಅವಕಾಶ ವನ್ನು ನಿರಾಕರಿಸಲಾಗಿತ್ತು. ವಿವಾಹಿತ ದಂಪತಿಗಳು ಸಮಾರಂಭ ವನ್ನು ನಡೆಸಬೇಕೆಂದು ಪಾದ್ರಿ ಒತ್ತಾಯಿಸಿದರು.. ಆದರೆ ಅನಿತಾ ಅವರು ಈ ತಾರತಮ್ಯವನ್ನು ಕಡೆಗಣಿಸಿ ತಾವೇ ಸ್ವತಃ ಮಗಳ ಕನ್ಯಾದಾನ ಮಾಡಿದ್ದರು ಎಂದು ತಿಳಿಸಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ "ಆತ್ಮೀಯ ವಧು-ವರರೇ, ನಿಮ್ಮ ಸ್ವಂತ ಮದುವೆಯಲ್ಲಿ ವಿವಾಹ ವಚನ ಗಳನ್ನು ನೀವೇ ಬರೆಯಿರಿ ಎಂದು ಅವರು ಸಲಹೆ ನೀಡಿದರು. ಈ ವೀಡಿಯೊ ತ್ವರಿತವಾಗಿ ವೈರಲ್ ಆಗಿದ್ದು ಬಳಕೆದಾರರು ಇದೇ ರೀತಿಯ ಪದ್ಧತಿಗಳ ಬಗ್ಗೆ ಆದ ಅನುಭವಗಳನ್ನು ಹಂಚಿ ಕೊಂಡಿದ್ದಾರೆ. ಬಳಕೆದಾರರೊಬ್ಬರು ಹೆಣ್ಣು ಮಕ್ಕಳನ್ನು ಈ ರೀತಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಬರೆದಿದ್ದಾರೆ. ಮತ್ತೊಬ್ಬರು ಈ ಆಧುನಿಕ ಯುಗದಲ್ಲಿಯೂ ಸಮಾನತೆಗೆ ಮಹತ್ವವಿಲ್ಲ ಎಂದು ಬರೆದಿದ್ದಾರೆ.