ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಯುವಕನ ಮೇಲೆ ನಾಲ್ವರಿಂದ ಭೀಕರ ಹಲ್ಲೆ; ಶಾಕಿಂಗ್‌ ವಿಡಿಯೊ ವೈರಲ್

ನಾಲ್ವರು ಸೇರಿ ಯುವಕನೊಬ್ಬನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಎಳೆದೊಯ್ದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ಸೇವಾನಗರ ಪಹಾಡಿ ಪ್ರದೇಶದಲ್ಲಿ ನಡೆದಿದೆ. ಈ ಘೋರ ದೃಶ್ಯವನ್ನು ನೋಡುಗರೊಬ್ಬರು ವಿಡಿಯೊ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಗ್ವಾಲಿಯರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೋಪಾಲ್: ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ಹಿಂಸಾಚಾರ ಪ್ರಕರಣವೊಂದು ವರದಿಯಾಗಿದ್ದು, ವಿವಾದದ ಹಿನ್ನೆಲೆಯಲ್ಲಿ ನಾಲ್ವರು ಸೇರಿ ಯುವಕನೊಬ್ಬನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಇಳಿಜಾರಿನ ಕೆಳಗೆ ಎಳೆದೊಯ್ದಿದ್ದಾರೆ. ಗ್ವಾಲಿಯರ್ ಪೊಲೀಸ್ ಠಾಣೆ ವ್ಯಾಪ್ತಿಯ ಸೇವಾನಗರ ಪಹಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ಘೋರ ದೃಶ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ನೋಡುಗರನ್ನು ಬೆಚ್ಚಿ ಬೀಳಿಸಿದೆ.

ಮಾಹಿತಿಯ ಪ್ರಕಾರ, ಹಲ್ಲೆಗೊಳಗಾದ ಸಂತ್ರಸ್ತನನ್ನು ಮಾತ್ರಿ ಎಂದು ಗುರುತಿಸಲಾಗಿದ್ದು, ಹಲ್ಲೆ ಮಾಡಿದ ಪ್ರಮುಖ ಆರೋಪಿ ಆತನ ಸ್ನೇಹಿತ ಬಂಟಿ ಯಾದವ್ ಎಂಬುದಾಗಿ ಗುರುತಿಸಲಾಗಿದೆ. ಇವರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದು, ಇದಕ್ಕೂ ಮೊದಲು, ಇಬ್ಬರೂ ಮದ್ಯ ಸೇವಿಸುವಾಗ ಜಗಳವಾಡಿದ್ದರು. ಆದರೆ ಕುಡಿದ ಮತ್ತಿನಲ್ಲಿ, ಮಾತ್ರಿ ಬಂಟಿಯ ಕಪಾಳಕ್ಕೆ ಹೊಡೆದಿದ್ದನು. ಇದರಿಂದ ರೊಚ್ಚಿಗೆದ್ದ ಬಂಟಿ ಮಾತ್ರಿಯ ಮೇಲೆ ಸೇಡು ತೀರಿಸಿಕೊಳ್ಳಲು ತನ್ನ ಸಹೋದರ ಮತ್ತು ಸ್ನೇಹಿತರೊಂದಿಗೆ ಬಂದು ಮಾತ್ರಿಯ ಮನೆಗೆ ನುಗ್ಗಿ ಅವನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ನಂತರ ಅವನನ್ನು ಅವನ ಮನೆಯ ಹೊರಗಿನ ಇಳಿಜಾರಿನಲ್ಲಿ ಬಹಳ ದೂರದವರೆಗೆ ಎಳೆದುಕೊಂಡು ಹೋಗಿದ್ದಾರೆ. ಈ ದೃಶ್ಯವನ್ನು ನೋಡುಗರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್ ಆಗಿದೆ.

ವಿಡಿಯೊ ನೋಡಿ...



ಕೆಲವು ಮಹಿಳೆಯರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಗಳು ದೂರ ತಳ್ಳಿದ್ದಾರೆ ಮತ್ತು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಯ ಸಮಯದಲ್ಲಿ, ಮಾತ್ರಿ ಮೂಳೆ ಮುರಿತಕ್ಕೊಳಗಾಗಿದ್ದು, ದೇಹದ ಮೇಲೆ ಇತರ ಗಂಭೀರ ಗಾಯಗಳಾಗಿವೆ. ಹಾಗಾಗಿ ಆತ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮತ್ತೊಂದೆಡೆ, ಬಂಟಿಯು ಮಾತ್ರಿ ತನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಹೇಳಿಕೊಂಡಿದ್ದಾನೆ. ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಭಾಗಿಯಾಗಿರುವ ಪ್ರತಿಯೊಬ್ಬರ ಕ್ರಿಮಿನಲ್ ದಾಖಲೆಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.

ಮಧ್ಯ ಪ್ರದೇಶದಲ್ಲಿ ಹಲ್ಲೆಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ. ಈ ಹಿಂದೆ ಮಧ್ಯ ಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿ, ಅವರ ಪಾದಗಳನ್ನು ನೆಕ್ಕುವಂತೆ ಒತ್ತಾಯಿಸಿದ್ದ ಆಘಾತಕಾರಿ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:Viral News: ಸಿಂದೂ ನದಿ ಜಲ ಒಪ್ಪಂದ ರದ್ದು; ಭಾರತೀಯ ವ್ಯಕ್ತಿಗೆ ಕುಡಿಯಲು ನೀರು ಕೊಡದೆ ಪಾಕಿಸ್ತಾನಿ ಯುವಕರಿಂದ ದೌರ್ಜನ್ಯ

ಜಿಲ್ಲೆಯ ದಾಬ್ರಾ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ವೈರಲ್ ಆಗಿರುವ ವಿಡಿಯೊದಲ್ಲಿ, ಆರೋಪಿಗಳು ಚಲಿಸುವ ಕಾರಿನಲ್ಲಿ ಸಂತ್ರಸ್ತನನ್ನು ಹೊಡೆದು ನಿಂದಿಸುವುದು ಸೆರೆಯಾಗಿತ್ತು. ಸಂತ್ರಸ್ತನಿಗೆ ಆರೋಪಿಯ ಪಾದಗಳನ್ನು ನೆಕ್ಕುವಂತೆ ಒತ್ತಾಯಿಸಲಾಗಿತ್ತು. ಆರೋಪಿ ಮತ್ತು ಬಲಿಪಶು ಇಬ್ಬರೂ ದಾಬ್ರಾ ನಿವಾಸಿಗಳು ಎಂದು ಹೇಳಲಾಗಿದೆ. ವಿಡಿಯೊ ವೈರಲ್ ಆದ ಬಳಿಕ ಸಂತ್ರಸ್ತನ ದೂರಿನ ಮೇರೆಗೆ, ನಾಲ್ವರು ಆರೋಪಿಗಳ ವಿರುದ್ಧ ದಾಬ್ರಾ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.