ಲಖನೌ: ಇತ್ತೀಚೆಗೆ ಉತ್ತರ ಪ್ರದೇಶದ ಮಾವಾನಾ ಪುರಸಭೆಯ ಕಚೇರಿಗೆ ಎಮ್ಮೆಯೊಂದು ನುಗ್ಗಿ ಕಿಟಕಿಯನ್ನು ಮುರಿದು ಫೈಲ್‍ಗಳನ್ನು ಚೆಲ್ಲಾಪಿಲ್ಲಿ ಮಾಡಿದೆ. ಇಡೀ ಕಚೇರಿಯನ್ನು ಅಸ್ತವ್ಯಸ್ತಗೊಳಿಸಿದೆ. ಸಿಬ್ಬಂದಿಯೊಬ್ಬ ಅದನ್ನು ಓಡಿಸಲು ಪ್ರಯತ್ನಿಸಿದಾಗ ಅದು ಅವನ ಮೇಲೂ ದಾಳಿ ಮಾಡಿದೆ. ಅದರ ವೈರಲ್ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್ (Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಎಮ್ಮೆ ಕಚೇರಿಯೊಳಗೆ ಮಾಡಿದ ಅವಾಂತರವನ್ನು ಸೆರೆ ಹಿಡಿಯಲಾಗಿದೆ. ಪುರಸಭೆಯ ಕಚೇರಿಯ ಗೇಟ್ ತೆರೆದಿದ್ದಾಗ ಈ ಘಟನೆ ನಡೆದಿದೆ. ಓಡುತ್ತಿದ್ದ ಎಮ್ಮೆ ಗೇಟ್ ಮೂಲಕ ಕಚೇರಿ ಆವರಣಕ್ಕೆ ಬಂದು ತೋಟಗಳನ್ನು ಹಾಳು ಮಾಡಲು ಶುರು ಮಾಡಿತು. ನಂತರ ಕಚೇರಿಯೊಳಗೆ ನುಗ್ಗಿ ಸಾಕಷ್ಟು ಅವಾಂತರವನ್ನುಂಟು ಮಾಡಿತು. ಸಿಬ್ಬಂದಿ ಕೋಲುಗಳನ್ನು ಹಿಡಿದುಕೊಂಡು ಎಮ್ಮೆಯನ್ನು ಕಚೇರಿಯಿಂದ ಓಡಿಸಿದ್ದಾರೆ. ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಎಲ್ಲರ ಗಮನ ಸೆಳೆದು ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ ನೋಡಿ...
ವರದಿ ಪ್ರಕಾರ, ನಗರದ ಹಿರಾಲಾಲ್ ಮೊಹಲ್ಲಾ ನಿವಾಸಿ ಭೂರ ಎಂಬ ಉದ್ಯಮಿ ಡೈರಿಯನ್ನು ತೆರೆದಿದ್ದನು. ಅವನು ಹಸ್ತಿನಾಪುರ ಜಾನುವಾರು ಕೇಂದ್ರದಿಂದ ಕ್ಯಾಂಟರ್‌ನಲ್ಲಿ 46 ಸಾವಿರ ರೂಪಾಯಿಗೆ ಎಮ್ಮೆಯನ್ನು ಖರೀದಿಸಿ ತಂದಿದ್ದನು. ಅವನು ಹಸ್ತಿನಾಪುರ ರಸ್ತೆಯಲ್ಲಿರುವ ಕ್ಯಾಂಟರ್‌ನಿಂದ ಎಮ್ಮೆಯನ್ನು ಇಳಿಸಿದ ತಕ್ಷಣ, ಅದು ಭಯಭೀತಗೊಂಡು ಹಸ್ತಿನಾಪುರ ರಸ್ತೆಯಲ್ಲಿ ಓಡಿಹೋಗಿ ಪುರಸಭೆಯ ಕಚೇರಿಗೆ ನುಗ್ಗಿ ಈ ಗೊಂದಲ ಸೃಷ್ಟಿಸಿದೆ. ಕೊನೆಗೆ ಎಮ್ಮೆಯ ಮಾಲೀಕ ಅದಕ್ಕೆ ಮತ್ತು ಬರುವ ಇಂಜೆಕ್ಷನ್ ನೀಡಿ ಟ್ರ್ಯಾಕ್ಟರ್ ಟ್ರಾಲಿಗೆ ಕಟ್ಟಿ ಅದನ್ನು ತೆಗೆದುಕೊಂಡು ಹೋಗಿದ್ದಾನೆ.
ಮನೆಯ ಬೆಡ್ರೂಂಗೆ ನುಗ್ಗಿದ ಹಸು ಮತ್ತು ಎತ್ತು
ಈ ಹಿಂದೆ ಹರಿಯಾಣದ ಫರಿದಾಬಾದ್‌ನ ಎನ್‌ಐಟಿ ಪ್ರದೇಶದ ದಬುವಾ ಕಾಲೋನಿಯಲ್ಲಿ 33 ಅಡಿ ರಸ್ತೆಯಲ್ಲಿ ನಿರ್ಮಿಸಲಾದ ಮನೆಯ ಬೆಡ್‍ರೂಂಗೆ ಒಂದು ಎತ್ತು ಮತ್ತು ಹಸು ನುಗ್ಗಿದ್ದವು. ಆಘಾತಕ್ಕೊಳಗಾದ ಮನೆಯ ಗೃಹಿಣಿ ಅವುಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಒಂದು ಗಂಟೆ ಕಪಾಟಿನ ಹಿಂದೆ ಅಡಗಿಕೊಂಡಿದ್ದಳು. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಅವಳಿ ಮಕ್ಕಳಿಗೆ ಮದುವೆ ಮಾಡಿಸಿದ ಥಾಯ್ಲೆಂಡ್ ಕುಟುಂಬ; ಇದರ ಕಾರಣ ತಿಳಿದರೆ ಅಚ್ಚರಿಪಡ್ತೀರಿ
ಘಟನೆಯ ಬಗ್ಗೆ ಮಾಹಿತಿ ಪಡೆದ ನೆರೆಹೊರೆಯವರು ಮನೆಯೊಳಗೆ ಪ್ರವೇಶಿಸಿದ್ದ ಎರಡು ಪ್ರಾಣಿಗಳನ್ನು ಓಡಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ಅವೆರಡೂ ಸುಮಾರು ಒಂದು ಗಂಟೆ ಬೆಡ್‍ರೂಂನಲ್ಲಿದ್ದವು. ನಂತರ, ಜನರು ಕೋಲುಗಳೊಂದಿಗೆ ಬೆಡ್‍ರೂಂಗೆ ಪ್ರವೇಶಿಸಿ ಪ್ರಾಣಿಗಳನ್ನು ಓಡಿಸಿದಾಗ, ಅವು ಹೊರಗೆ ಹೋದವು. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ.