ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅವಳಿ ಮಕ್ಕಳಿಗೆ ಮದುವೆ ಮಾಡಿಸಿದ ಥಾಯ್ಲೆಂಡ್‌ ಕುಟುಂಬ; ಇದರ ಕಾರಣ ತಿಳಿದರೆ ಅಚ್ಚರಿಪಡ್ತೀರಿ

ಥಾಯ್ಲೆಂಡ್‌ನ ಕಲಾಸಿನ್‌ನಲ್ಲಿರುವ ಪ್ರಚಯಾ ರೆಸಾರ್ಟ್‌ನಲ್ಲಿ ಕುಟುಂಬವೊಂದು ತಮ್ಮ ನಾಲ್ಕು ವರ್ಷದ ಅವಳಿ ಮಕ್ಕಳಿಗೆ ಪರಸ್ಪರ ಮದುವೆ ಮಾಡಿಸಿದ್ದಾರೆ. ಈ ಕುಟುಂಬವು ತಮ್ಮ ಅವಳಿ ಮಕ್ಕಳು ಹಿಂದಿನ ಜನ್ಮದಲ್ಲಿ ಪ್ರೇಮಿಗಳಾಗಿದ್ದರು ಎಂದು ನಂಬಿ ಸಾಂಪ್ರದಾಯಿಕ ಆಚರಣೆಗಳ ಪ್ರಕಾರ ಈ ಮದುವೆ ಮಾಡಿಸಿದೆ. ಇವರ ಮದುವೆಯ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಅವಳಿ ಮಕ್ಕಳಿಗೆ ಮದುವೆ; ಏನಿದು ವಿಚಿತ್ರ ಸಂಪ್ರದಾಯ?

Profile pavithra Jul 5, 2025 3:06 PM

ಬ್ಯಾಂಕಾಕ್: ಬಾಲ್ಯವಿವಾಹ ಕಾನೂನಿನ ಪ್ರಕಾರ ಅಪರಾಧ ಎಂದು ತಿಳಿದರೂ ಕೂಡ ಕೆಲವು ಕಡೆ ಈ ಕೆಟ್ಟ ಸಂಪ್ರದಾಯ ಆಚರಣೆಯಲ್ಲಿದೆ. ಹೀಗಾಗಿ ಇತ್ತೀಚೆಗೆ ಥೈಲ್ಯಾಂಡ್‌ನ ಕುಟುಂಬವೊಂದು ತಮ್ಮ ನಾಲ್ಕು ವರ್ಷದ ಅವಳಿ ಮಕ್ಕಳಿಗೆ ಪರಸ್ಪರ ಮದುವೆ ಮಾಡಿಸಿದ್ದಾರೆ. ಥೈಲ್ಯಾಂಡ್‌ನ ಕಲಾಸಿನ್‌ನಲ್ಲಿರುವ ಪ್ರಚಯಾ ರೆಸಾರ್ಟ್‌ನಲ್ಲಿ ಈ ಮದುವೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿದೆ. ಅವಳಿಗಳಿಬ್ಬರು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಇವರ ಮದುವೆಯ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರಿಂದ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ, ನಾಲ್ಕು ವರ್ಷದ ವಧು, ವರನಾದ ತನ್ನ ಅವಳಿ ಸಹೋದರನ ಕೆನ್ನೆಗಳಿಗೆ ಮುತ್ತಿಟ್ಟ ದೃಶ್ಯ ಸೆರೆಯಾಗಿದೆ. ಈ ಮದುವೆಗೆ ಬೌದ್ಧ ಸನ್ಯಾಸಿಗಳು ಹಾಜರಿದ್ದು ದಂಪತಿಯನ್ನು ಆಶೀರ್ವದಿಸಿದ್ದಾರೆ. ವರದಿ ಪ್ರಕಾರ, ಥಟ್ಸಾನಪೋರ್ನ್ ಸೊರ್ನ್‌ಚೈ ಮತ್ತು ಅವನ ಸಹೋದರಿ ಥಟ್ಸಾಥಾರ್ನ್ ಎಂಬ ಅವಳಿಗಳು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಕುಟುಂಬವು ನಾಲ್ಕು ಮಿಲಿಯನ್ ಹಣ ಮತ್ತು ಚಿನ್ನವನ್ನು ವರದಕ್ಷಿಣೆಯಾಗಿ ನೀಡಿತು.

ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್‌ ಆಗಿದ್ದು, ಇದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಥಾಯ್ಲೆಂಡ್‌ನಲ್ಲಿ ಇದು ತುಂಬಾ ಸಾಮಾನ್ಯ ಆಚರಣೆ ಎನಿಸಿಕೊಂಡಿದೆ. ಏಕೆಂದರೆ ವಿರುದ್ಧ ಲಿಂಗದ ಅವಳಿಗಳು ತಮ್ಮ ಹಿಂದಿನ ಜನ್ಮಗಳಲ್ಲಿ ಪ್ರೇಮಿಗಳಾಗಿರುತ್ತಾರೆ ಎನ್ನಲಾಗುತ್ತದೆ. ಅವರು ಅವಳಿಗಳಾಗಿ ಮರುಜನ್ಮ ಪಡೆಯುತ್ತಾರೆ ಎಂದು ನಂಬಲಾಗುತ್ತದೆ. ಪ್ರಸ್ತುತ ಜೀವನದಲ್ಲಿ ದುರದೃಷ್ಟ, ಅನಾರೋಗ್ಯ ಅಥವಾ ಅಪಘಾತದಿಂದ ದೂರವಿರಲು ಪರಸ್ಪರ ಮದುವೆಯಾಗಬೇಕು ಎಂಬುದು ಅವರ ನಂಬಿಕೆ. ಈ ಪದ್ಧತಿಯನ್ನು ಕುಟುಂಬಗಳಲ್ಲಿ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಮುಂದುವರಿಸಿಕೊಂಡು ಬರಲಾಗಿದೆ. ಇದು ಮಕ್ಕಳ ಜೀವನದಲ್ಲಿ ಸಾಮರಸ್ಯ ಮತ್ತು ಅವರಿಗೆ ದೀರ್ಘಾಯುಷ್ಯವನ್ನು ತರುತ್ತದೆ ಎಂದು ನಂಬಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: Viral Video: ಪುಣೆಗೆ ಹೊರಟಿದ್ದ ವಿಮಾನದಲ್ಲಿ ತಪ್ಪಿದ ದುರಂತ; ಗಾಳಿಗೆ ಹಾರಿ ಬಿದ್ದ ಕಿಟಕಿಯ ಚೌಕಟ್ಟು, ವಿಡಿಯೋ ನೋಡಿ

ಈ ವಿವಾಹವು ಕಾನೂನುಬದ್ಧವಾಗಿಲ್ಲ ಮತ್ತು ಕೇವಲ ಸಂಪ್ರದಾಯದ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗುತ್ತದೆ. ಮಾಹಿತಿ ಪ್ರಕಾರ, ಅವಳಿ ಮಕ್ಕಳ ಮದುವೆಯನ್ನು ಅವರ 10ನೇ ವರ್ಷದ ಹುಟ್ಟುಹಬ್ಬಕ್ಕೆ ಮೊದಲು ಮಾಡಬೇಕು. ಏಕೆಂದರೆ ಅವರು ತಮ್ಮ ಕರ್ಮವನ್ನು ಹಂಚಿಕೊಂಡು ಒಟ್ಟಿಗೆ ಜನಿಸುತ್ತಾರೆ ಎಂದು ಪೋಷಕರು ನಂಬುತ್ತಾರೆ.