ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಎತ್ತಿ ಎಸೆದ ಹೋರಿ; ಶಾಕಿಂಗ್‌ ವಿಡಿಯೊ ವೈರಲ್

Bull Tosses Woman Several Feet in Air: ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹೋರಿಯೊಂದು ದಾಳಿ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಝಾನ್ಸಿಯ ಬಬಿನಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಹೋರಿಯ ದಾಳಿಗೆ ಮಹಿಳೆ ತೀವ್ರ ಗಾಯಗೊಂಡಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.

ಲಖನೌ: ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹೋರಿಯೊಂದು ದಾಳಿ ನಡೆಸಿರುವ ಆಘಾತಕಾರಿ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಉತ್ತರ ಪ್ರದೇಶದ (Uttar Pradesh) ಝಾನ್ಸಿಯ ಬಬಿನಾ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ದಾರಿತಪ್ಪಿ ಬಂದ ಹೋರಿಯೊಂದು ರಸ್ತೆಯ ಮಧ್ಯದಲ್ಲಿ ನಿಂತಿತ್ತು. ಈ ವೇಳೆ ದಾಳಿ ನಡೆಸಿದೆ.

ಸೆಪ್ಟೆಂಬರ್ 25 ರಂದು ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಿರಿದಾದ ರಸ್ತೆಯಲ್ಲಿ ನಡೆಯುತ್ತಿದ್ದ ಮಹಿಳೆಯ ಮೇಲೆ ಹೋರಿಯೊಂದು ಆಘಾತಕಾರಿ ರೀತಿಯಲ್ಲಿ ದಾಳಿ ಮಾಡಿತು. ಆ ಬೃಹತ್ ಕಪ್ಪು ಹೋರಿ ಮಹಿಳೆಯನ್ನು ತನ್ನ ಕೊಂಬಿನಲ್ಲಿ ಮೇಲಕ್ಕೆ ಎತ್ತಿ ಎಸೆದಿದೆ. ಹೋರಿಯ ದಾಳಿಗೆ ಮಹಿಳೆ ತೀವ್ರ ಗಾಯಗೊಂಡಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.

ವಿಡಿಯೊ ವೀಕ್ಷಿಸಿ:



ಈ ಇಡೀ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. 17 ಸೆಕೆಂಡುಗಳ ವಿಡಿಯೊದಲ್ಲಿ ಮಹಿಳೆಯೊಬ್ಬರು ಕಿರಿದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ತೋರಿಸಲಾಗಿದೆ. ಅವಳು ಹೋರಿಯನ್ನು ನೋಡಿದ ತಕ್ಷಣ, ಬೇಗಬೇಗನೆ ಮುಂದೆ ನಡೆದಳು. ಕೋಪಗೊಂಡಿದ್ದ ಹೋರಿ ಮಹಿಳೆಯನ್ನು ಬೆನ್ನಟ್ಟಿ ಕೊಂಬಿನಿಂದ ಎತ್ತಿ ಎಸೆದಿದೆ. ಅವಳು ಹಲವಾರು ಅಡಿಗಳಷ್ಟು ಎತ್ತರಕ್ಕೆ ಎಸೆಯಲ್ಪಟ್ಟು, ನೆಲದ ಮೇಲೆ ಬಿದ್ದಿದ್ದಾಳೆ. ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದಿದ್ದಾಳೆ.

ಮಹಿಳೆಯನ್ನು ಮೇಲಕ್ಕೆ ಎಸೆದ ನಂತರವೂ, ಆ ಹೋರಿ ಅವಳ ಪಕ್ಕದಲ್ಲಿಯೇ ನಿಂತಿತ್ತು, ಇದು ಭಯಭೀತ ಪರಿಸ್ಥಿತಿಯನ್ನು ಸೃಷ್ಟಿಸಿತು. ಅದೃಷ್ಟವಶಾತ್, ಬೈಕ್ ಸವಾರನೊಬ್ಬ ಸ್ಥಳಕ್ಕೆ ಬಂದು ದೃಶ್ಯಗಳನ್ನು ನೋಡಿ ದಿಗ್ಭ್ರಮೆಗೊಂಡು, ಆ ಹೋರಿಯನ್ನು ಹೆದರಿಸಿ ಓಡಿಸಿದ್ದಾನೆ.

ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ದಾರಿತಪ್ಪಿ ಹೋರಿಯ ಹಠಾತ್ ದಾಳಿಯಿಂದ 60 ವರ್ಷದ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಸೋಮವಾರ, ಸೆಪ್ಟೆಂಬರ್ 22 ರಂದು ಜೋಧ್‌ಪುರದ ಮಂಡೋರ್ ಪ್ರದೇಶದಲ್ಲಿರುವ ಚೈನ್‌ಪುರ ಬಾವ್ಡಿಯಲ್ಲಿ ಸಂಭವಿಸಿದೆ. ಆ ಹೋರಿ ಆ ಮಹಿಳೆಯನ್ನು 4 ಅಡಿ ದೂರ ಎಸೆದಿದೆ. ಆ ವೃದ್ಧ ಮಹಿಳೆ ಪಕ್ಕದ ಗೋಡೆಯ ಮೇಲೆ ಕುಸಿದು ಬಿದ್ದು ತಲೆಗೆ ತೀವ್ರ ಗಾಯವಾಗಿದೆ ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Viral News: ಮೋಸ್ಟ್‌ ವಾಂಟೆಡ್‌ ಬಬ್ಬರ್ ಖಾಲ್ಸಾ ಉಗ್ರ ಭಾರತಕ್ಕೆ ಹಸ್ತಾಂತರ!