Viral video: ಸಿನಿಮಾ ಸ್ಟೈಲ್‌ನಲ್ಲಿ ಕಳ್ಳನ ಬೆನ್ನಟ್ಟಿದ ಜನ- ಸಖತ್ ಫನ್ನಿ ಆಗಿದೆ ಈ ವಿಡಿಯೊ
Villagers run behind thief: ಗ್ರಾಮಸ್ಥರ ಗುಂಪೊಂದು ಕಳ್ಳನನ್ನು ಹಿಡಿಯಲು ಓಡುತ್ತಿರುವ ದೃಶ್ಯದ ವಿಡಿಯೊ ವೈರಲ್ ಆಗಿದೆ. ಉತ್ತರ ಪ್ರದೇಶದ ರಾಂಪುರ ಪ್ರಾಂತ್ಯದಲ್ಲಿ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಇದು ಬಾಲಿವುಡ್‌ನ ಭಾಗಂ ಭಾಗ್ ಚಿತ್ರದ ಜನಪ್ರಿಯ ಕ್ಲೈಮ್ಯಾಕ್ಸ್ ದೃಶ್ಯದ ತರಹವೇ ಇದೆ ಎಂದು ಹಲವು ನೆಟ್ಟಿಗರು ವಿಶ್ಲೇಷಿಸಿದ್ದಾರೆ.


ರಾಂಪುರ: ಗ್ರಾಮಸ್ಥರ ಗುಂಪೊಂದು ಕಳ್ಳನನ್ನು ಹಿಡಿಯಲು ಓಡುತ್ತಿರುವ ದೃಶ್ಯದ ವಿಡಿಯೊ ವೈರಲ್ ಆಗಿದೆ. ಉತ್ತರ ಪ್ರದೇಶದ ರಾಂಪುರ ಪ್ರಾಂತ್ಯದಲ್ಲಿ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ರಾಂಪುರದಲ್ಲಿರುವ ಟಿನ್ ವಾಲಿ ಮಸೀದಿ ಮೊಹಲ್ಲಾದಲ್ಲಿ ಗ್ರಾಮಸ್ಥರ ಗುಂಪೊಂದು ಕಳ್ಳನನ್ನು ಹಿಡಿಯಲು ಓಡಿದ್ದಾರೆ. ಈ ವೇಳೆ ಕಳ್ಳ ಬಂದೂಕ್‍ನಿಂದ ಗುಂಡು ಹಾರಿಸುವುದು ಕಂಡು ಬಂದಿದೆ.ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral video) ಆಗಿದೆ.
ಇದು ಬಾಲಿವುಡ್‌ನ ಭಾಗಂ ಭಾಗ್ ಚಿತ್ರದ ಜನಪ್ರಿಯ ಕ್ಲೈಮ್ಯಾಕ್ಸ್ ದೃಶ್ಯದ ತರಹವೇ ಇದೆ ಎಂದು ಹಲವು ನೆಟ್ಟಿಗರು ವಿಶ್ಲೇಷಿಸಿದ್ದಾರೆ. ಸಿಸಿಟಿವಿ ವಿಡಿಯೊದಲ್ಲಿ ಕಳ್ಳನೊಬ್ಬ ಓಡುತ್ತಿರುವುದನ್ನು ಮತ್ತು ಗ್ರಾಮಸ್ಥರ ಮೇಲೆ ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು. ಸಣ್ಣ ಓಣಿಯಲ್ಲಿ 50-70 ಕ್ಕೂ ಹೆಚ್ಚು ಗ್ರಾಮಸ್ಥರು ಅವನ ಹಿಂದೆ ಓಡುತ್ತಿರುವುದು ಕಂಡುಬಂದಿದೆ. ಅವರಲ್ಲಿ ಹಲವರು ಸಂಪೂರ್ಣವಾಗಿ ಬಟ್ಟೆ ಧರಿಸಿಲ್ಲ, ಆದರೂ ಕಳ್ಳನನ್ನು ಬೆನ್ನಟ್ಟಿದ್ದಾರೆ.
ವಿಡಿಯೊ ವೀಕ್ಷಿಸಿ:
Whole Village behind a Thief😭
— Ghar Ke Kalesh (@gharkekalesh) July 27, 2025
pic.twitter.com/ahfbAlMrxU
ವರದಿಗಳ ಪ್ರಕಾರ, ಈ ಘಟನೆ ಉತ್ತರ ಪ್ರದೇಶದ ರಾಂಪುರದ ತಿನ್ ವಾಲಿ ಮಸೀದಿ ಮೊಹಲ್ಲಾದಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಕಳ್ಳನನ್ನು ಹಿಡಿದರೂ ಹಿಡಿಯದಿದ್ದರೂ ಪರವಾಗಿಲ್ಲ, ಆದರೆ ಅವರ ಒಗ್ಗಟ್ಟು ಮಾತ್ರ ಬಹಳ ಚೆನ್ನಾಗಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: ವ್ಯಕ್ತಿಯೊಬ್ಬರ ಕೆನ್ನೆ ಕಚ್ಚಿ, ಬಿಗಿಯಾಗಿ ಹಿಡಿದುಕೊಂಡ ದೈತ್ಯ ಹೆಬ್ಬಾವು; ವಿಡಿಯೊ ವೈರಲ್
ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು
ಘಟನೆಯ ಕುರಿತು ಎಕ್ಸ್ ಬಳಕೆದಾರ @ZakirAliTyagi ಅವರ ಒಂದು ಪೋಸ್ಟ್‌ನಲ್ಲಿ ಪಶ್ಚಿಮ ಯುಪಿಯಲ್ಲಿ ಇತ್ತೀಚೆಗೆ ಕಳ್ಳರು ಮತ್ತು ದುಷ್ಕರ್ಮಿಗಳು ಹೆಚ್ಚಾಗಿದ್ದಾರೆ ಎಂದು ತಿಳಿಸಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಯುಪಿ ಕಳ್ಳರು ಮತ್ತು ದುಷ್ಕರ್ಮಿಗಳಿಂದ ಆವರಿಸಲ್ಪಟ್ಟಿದೆ. ನಾನು ನನ್ನ ಹಳ್ಳಿಗೆ ಬಂದಿದ್ದೇನೆ. ಇದೀಗ, ಕಳ್ಳರು ಮನೆಗೆ ನುಗ್ಗಿದ್ದಾರೆ. ಶಬ್ಧ ಕೇಳಿ ಗ್ರಾಮಸ್ಥರು ಅವನನ್ನು ಹಿಡಿಯಲು ಮುಂದಾದರು. ಆದರೆ, ಕಳ್ಳ ಜನರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ” ಎಂದು ತಿಳಿಸಿದ್ದಾರೆ.
ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳಲ್ಲಿ ಭಯದ ವಾತಾವರಣವಿದೆ. ಹಳ್ಳಿಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಗ್ರಾಮ ಮತ್ತು ಮನೆಗಳಲ್ಲಿ ಕೋಲು ಮತ್ತು ದೊಣ್ಣೆಗಳನ್ನು ಹಿಡಿದು ಕಾಯುತ್ತಿದ್ದಾರೆ. ನಿನ್ನೆ ರಾತ್ರಿಯಷ್ಟೇ, ನೆರೆಯ ಹಳ್ಳಿಗಳಲ್ಲಿ ಮಹಿಳೆಯರ ಮೇಲೆ ಹಲ್ಲೆ ಮತ್ತು ಲೂಟಿಯ ಘಟನೆಗಳು ಬೆಳಕಿಗೆ ಬಂದವು ಎಂದು ಕೆಲವರು ತಿಳಿಸಿದರು.