Aamir Khan: ಆಮೀರ್ ಖಾನ್ ನಿವಾಸಕ್ಕೆ 25 ಮಂದಿ ಐಪಿಎಸ್ ಅಧಿಕಾರಿಗಳ ತಂಡ ಎಂಟ್ರಿ; ಅಷ್ಟಕ್ಕೂ ನಡೆದಿದ್ದೇನು?
ಇತ್ತೀಚೆಗೆ ಬಾಲಿವುಡ್ ನಟ ಆಮೀರ್ ಖಾನ್ (Amir Khan) ಅವರ ಬಾಂದ್ರಾ ನಿವಾಸಕ್ಕೆ ಐಪಿಎಸ್ ಅಧಿಕಾರಿಗಳ ದೊಡ್ಡ ತಂಡವೇ ಆಗಮಿಸಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 25 ಐಪಿಎಸ್ ಅಧಿಕಾರಿಗಳ ಅನಿರೀಕ್ಷಿತ ಭೇಟಿಯು ವ್ಯಾಪಕ ಕುತೂಹಲವನ್ನು ಹುಟ್ಟುಹಾಕಿತು.


ಮುಂಬೈ: ಇತ್ತೀಚೆಗೆ ಬಾಲಿವುಡ್ ನಟ ಆಮೀರ್ ಖಾನ್ (Amir Khan) ಅವರ ಬಾಂದ್ರಾ ನಿವಾಸಕ್ಕೆ ಐಪಿಎಸ್ ಅಧಿಕಾರಿಗಳ ದೊಡ್ಡ ತಂಡವೇ ಆಗಮಿಸಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ವಿಡಿಯೊದಲ್ಲಿ ಪೊಲೀಸ್ ವಾಹನಗಳು ಅವರ ನಿವಾಸದಿಂದ ಹೊರಡುತ್ತಿರುವ ದೃಶ್ಯವಿದೆ. ಸುಮಾರು 25 ಐಪಿಎಸ್ ಅಧಿಕಾರಿಗಳ ಅನಿರೀಕ್ಷಿತ ಭೇಟಿಯು ವ್ಯಾಪಕ ಕುತೂಹಲವನ್ನು ಹುಟ್ಟುಹಾಕಿತು.
ಆಮೀರ್ ಖಾನ್‌ರನ್ನು ಅಷ್ಟು ಮಂದಿ ಐಪಿಎಸ್ ಅಧಿಕಾರಿಗಳು ಭೇಟಿಯಾಗಲು ಕಾರಣ ಏನಿರಬಹುದು ಎಂಬ ಬಗ್ಗೆ ನಿಮಗೂ ಕುತೂಹಲವಿರಬಹುದು. ಅದಕ್ಕಿಲ್ಲಿದೆ ಉತ್ತರ. ಪ್ರಸ್ತುತ ಬ್ಯಾಚ್‌ನ ಐಪಿಎಸ್ ತರಬೇತಿದಾರರು, ಖಾನ್‌ರೊಂದಿಗೆ ಸಭೆ ನಡೆಸಲು ವಿನಂತಿಸಿದ್ದರು. ಹೀಗಾಗಿ ಅಮಿರ್ ಖಾನ್ ಅವರನ್ನು ತಮ್ಮ ನಿವಾಸದಲ್ಲಿ ಆತಿಥ್ಯ ವಹಿಸಿದ್ದರು ಎಂದು ಖಾನ್ ತಂಡದ ಸದಸ್ಯರೊಬ್ಬರು ಸ್ಪಷ್ಟಪಡಿಸಿದ್ದಾರೆ.
ಐಪಿಎಸ್ ಅಧಿಕಾರಿಗಳಿಂದ ತುಂಬಿದ್ದ ಐಷಾರಾಮಿ ಬಸ್ ನಟನ ನಿವಾಸಕ್ಕೆ ಪ್ರವೇಶಿಸುವ ದೃಶ್ಯಗಳು ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದವು. ಕೆಲವರು ನಟನ ಭದ್ರತೆಗಾಗಿ ಚರ್ಚಿಸುವುದಕ್ಕಾಗಿರಬಹುದು ಎಂದೆಲ್ಲಾ ಅಂದಾಜಿಸಿದ್ದರು.
ವಿಡಿಯೊ ಇಲ್ಲಿದೆ:
ಅಂದಹಾಗೆ, ಆಮೀರ್ ಖಾನ್ ಹಲವು ವರ್ಷಗಳಿಂದ ಐಪಿಎಸ್ ಪ್ರಶಿಕ್ಷಣಾರ್ಥಿಗಳಳನ್ನು ಭೇಟಿ ಮಾಡುತ್ತಿದ್ದಾರೆ. 1999ರಲ್ಲಿ ಬಿಡುಗಡೆಯಾದ ಅವರ 'ಸರ್ಫರೋಶ್' ಚಿತ್ರವು, ಪ್ರಾಮಾಣಿಕ ಮತ್ತು ಚುರುಕಾದ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದೆ. ಇದು ಹಲವರ ಮೇಲೆ ಶಾಶ್ವತವಾದ ಪ್ರಭಾವ ಬೀರಿದೆ. ಈ ಸಿನಿಮಾದ ನಟನೆಯಿಂದಾಗಿ ಅಮಿರ್ ಖಾನ್ ಬಗ್ಗೆ ಅನೇಕ ಯುವ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Aamir Khan-Gauri Spratt: ಸಂಬಂಧ ದೃಢಪಡಿಸಿದ ಬಳಿಕ ಮೊದಲ ಬಾರಿ ಜತೆಯಾಗಿ ಕಾಣಿಸಿಕೊಂಡ ಆಮೀರ್ ಖಾನ್-ಗೌರಿ ಸ್ಪ್ರಾಟ್
ಇತ್ತೀಚೆಗೆ ‘ಸೀತಾರೆ ಜಮೀನ್ ಪರ್’ (sitaare zameen par) ಚಿತ್ರದ ಮೂಲಕ ಮತ್ತೆ ಬೆಳ್ಳಿಪರದೆಗೆ ಮರಳಿದ್ದರು. ಈ ಚಿತ್ರದ ಹಲವಾರು ವಿಶೇಷ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದಾರೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 165 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.
ಇನ್ನು ರಜನಿಕಾಂತ್ ಜೊತೆ ಕೂಲಿ ಚಿತ್ರದಲ್ಲಿ ಅಮಿರ್ ಖಾನ್ ಅಭಿನಯಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಸಿನಿಮಾವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಲಿದ್ದಾರೆ. ಈ ಮಧ್ಯೆ, 2025 ರ ಮೆಲ್ಬೋರ್ನ್ ಭಾರತೀಯ ಚಲನಚಿತ್ರೋತ್ಸವ (IFFM) ನಲ್ಲಿ ಮುಖ್ಯ ಅತಿಥಿಯಾಗಿಯೂ ಅಮಿರ್ ಖಾನ್ ಭಾಗವಹಿಸಲಿದ್ದಾರೆ.