ರಿಷಿಕೇಶ: ಸಾಹಸ ಕ್ರೀಡೆಗಳನ್ನು ಆನಂದಿಸುವುದನ್ನು ಬಹುತೇಕ ಮಂದಿ ಇಷ್ಟಪಡಬಹುದು. ಅವುಗಳಲ್ಲಿ ಬಂಗೀ ಜಂಪಿಂಗ್ (Bungee Jumping) ಸಹ ಒಂದು. ಅನೇಕ ಪ್ರವಾಸಿಗರು ತಮ್ಮ ಸಾಹಸ ಪಟ್ಟಿಯಿಂದ ಹೊರಬರಬೇಕೆಂದು ಕನಸು ಕಾಣುವ ಸಾಹಸಗಳಲ್ಲಿ ಒಂದಾಗಿದೆ. ಆದರೆ, ಈ ಸಾಹಸ ಪ್ರದರ್ಶಿಸಲು ಗುಂಡಿಗೆ ಬೇಕು. ಇದೀಗ ಯುವತಿಯೊಬ್ಬಳಿಗೆ ಧುಮುಕಲು ಬಂಗೀ ಜಂಪಿಂಗ್‌ನ ಸಿಬ್ಬಂದಿ ಧೈರ್ಯ ತುಂಬುತ್ತಿರುವ ಹೃದಯಸ್ಪರ್ಶಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಬೋಧಕನು ತನ್ನ ದಯೆ ಮತ್ತು ಪ್ರೋತ್ಸಾಹದಾಯಕ ಮಾತುಗಳಿಂದ ಅವಳಿಗೆ ಆತ್ಮವಿಶ್ವಾಸವನ್ನು ನೀಡುತ್ತಿದ್ದ ರೀತಿ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನಸೆಳೆಯಿತು. ಬಂಗೀ ಜಂಪಿಂಗ್ ಮಾಡುವ ಯುವತಿಯು ಸಂಪೂರ್ಣವಾಗಿ ಸುರಕ್ಷಿತಳಾಗಿದ್ದಾಳೆ ಎಂದು ಅವರು ಪದೇ ಪದೇ ನೆನಪಿಸಿದರು. ಅತಿಯಾಗಿ ಯೋಚಿಸುವ ಬದಲು ತನ್ನನ್ನು ನಂಬುವಂತೆ ಹೇಳಿದರು.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವೈರಲ್ ವಿಡಿಯೊದಲ್ಲಿ, ಯುವತಿಯೊಬ್ಬಳು ಜಿಗಿಯುವ ಮೊದಲು ಆತಂಕಕ್ಕೊಳಗಾಗುವುದನ್ನು ತೋರಿಸಲಾಗಿದೆ. ಧುಮುಕುವ ಅಂಚಿನಲ್ಲಿ ನಿಂತು, ಬೋಧಕನು ಶಾಂತವಾಗಿ ಪ್ರಕ್ರಿಯೆಯ ಬಗ್ಗೆ ಅವಳಿಗೆ ಹೇಳುತ್ತಾನೆ. ಜೀವನದ ಅತ್ಯುತ್ತಮ ಭಾಗವು ಸಂಭವಿಸಲಿದೆ ಎಂದು ಹೇಳುವ ಮೂಲಕ ಅವಳನ್ನು ಪ್ರೋತ್ಸಾಹಿಸುತ್ತಾನೆ. ಅವಳು ಹೆಚ್ಚುವರಿ ಸಮಯವನ್ನು ಕೇಳುತ್ತಲೇ ಇದ್ದಾಗ, ಸಮಯವು ಇಲ್ಲಿ ನಿಮಗೆ ಸಹಾಯ ಮಾಡುವುದಿಲ್ಲ. ಎಲ್ಲರೂ ಭಯಭೀತರಾಗುತ್ತಾರೆ, ಇದು ಸಾಮಾನ್ಯ. ಆದರೆ, ಇಲ್ಲಿ ನೀವು ನಿಮ್ಮಲ್ಲಿರುವ ಧೈರ್ಯವನ್ನು ನಿಮಗಾಗಿ ಸಾಬೀತುಪಡಿಸಬೇಕು ಎಂದು ಹೇಳಿದನು.
ವಿಡಿಯೊ ವೀಕ್ಷಿಸಿ:
ಈ ವೇಳೆ ಅವಳು ಇದರಿಂದ ನೋವುಂಟಾಗುತ್ತದೆಯೆ ಎಂದು ಪ್ರಶ್ನಿಸಿದ್ದಾಳೆ. ಬೋಧಕನು ಅವಳಿಗೆ ಭರವಸೆ ನೀಡುತ್ತಾ, ಯಾವುದೇ ರೀತಿಯ ನೋವಾಗುವುದಿಲ್ಲ. ನೀವು ಶೇ. 200 ರಷ್ಟು ಸುರಕ್ಷಿತರು. ನಿಮ್ಮ ಕಣ್ಣುಗಳನ್ನು ಮುಚ್ಚಿ, ಜಿಗಿಯಿರಿ ಎಂದು ಹೇಳಿದ್ದಾನೆ. ಅತಿಯಾಗಿ ಯೋಚಿಸಲು ನಿಮ್ಮ ಮನಸ್ಸನ್ನು ಬಳಸಬೇಡಿ ಎಂದು ಧೈರ್ಯ ತುಂಬಿದ್ದಾನೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಸಿಬ್ಬಂದಿಯ ತಾಳ್ಮೆಯನ್ನು ಶ್ಲಾಘಿಸಿದ್ದಾರೆ. ಯಾರಾದರೂ ನನಗೆ ಇಷ್ಟೊಂದು ಪ್ರೇರಣೆ ನೀಡಿದ್ದರೆ, ನಾನು ನೀಟ್, ಜೆಇಇ, ಯುಪಿಎಸ್‌ಸಿ, ಕ್ಯಾಟ್, ಗೇಟ್ ಪರೀಕ್ಷೆಗಳನ್ನು ಪಾಸು ಮಾಡುತ್ತಿದ್ದೆ ಎಂದು ಬಳಕೆದಾರರೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಅವರಿಬ್ಬರು ಮದುವೆಯಾಗಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಭಾರತೀಯ ಗ್ರ್ಯಾಂಡ್ ಮಾಸ್ಟರ್‌ನ ಜಂಪಿಂಗ್ ಹೀಗಿತ್ತು
2024 ರಲ್ಲಿ, ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ತಮ್ಮ ಚೆಸ್‍ನಿಂದ ಮಾತ್ರವಲ್ಲದೆ, ನಿರ್ಭೀತ ಜಿಗಿತದಿಂದಲೂ ಗಮನ ಸೆಳೆದಿದ್ದಾರೆ. ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಕೂಡಲೇ, ಅವರು ಸಂಭ್ರಮವನ್ನು ಬಂಗೀ ಜಂಪಿಂಗ್ ಮೂಲಕ ಆಚರಿಸಲು ನಿರ್ಧರಿಸಿದರು. ಗುಕೇಶ್ ಅವರ ಬಂಗೀ ಜಂಪಿಂಗ್ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೊ ವೀಕ್ಷಿಸಿ: