ತಿರುವನಂತಪುರಂ, ಆ. 28: ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದ ಘಟನೆ ಕೇರಳಂನಲ್ಲಿ (Kerala) ನಡೆದಿದೆ. ಎರ್ನಾಕುಳಂ ಜಿಲ್ಲೆಯ ಕೂತ್ತಟ್ಟು ಕುಲಂ-ಪಿರಾವೋಮ್ ರಸ್ತೆಯ ಕಕ್ಕೂರ್ ಬಳಿ ಬೆಳಗ್ಗೆ 35 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಮದುವೆ ಸಮಾರಂಭವೊಂದಕ್ಕೆ ಸಂಬಂಧಿಕರನ್ನು ಕರೆದೊಯ್ಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಕೂಟರ್ ಸವಾರನೊಬ್ಬ ಇಂಡಿಕೇಟರ್ ಹಾಕದೆ ಏಕಾಏಕಾಕಿ ತಿರುವು ಪಡೆದಿದ್ದು ಸವಾರನನ್ನು ಉಳಿಸಲು ಹೋಗಿ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಕೂತಟ್ಟುಕುಲಂ-ಪಿರಾವೋಮ್ ರಸ್ತೆಯ ಕಕ್ಕೂರ್ ಬಳಿ ಬೆಳಗ್ಗೆ 10:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮದುವೆಗೆ ಸಂಬಂಧಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದೆ. ದ್ವಿಚಕ್ರ ಚಾಲಕನನ್ನು ಉಳಿಸಲು ಪ್ರಯತ್ನಿಸಿದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿದೆ ಎಂದು ವರದಿಯಾಗಿದೆ. ಮದುವೆ ಸಂಭ್ರಮದ ಖುಷಿ ಕ್ಷಣಾರ್ಧದಲ್ಲಿ ತಿರುವು ಪಡೆದುಕೊಂಡು ನೋವಿನ ಕ್ಷಣವಾಗಿ ಬದಲಾಗಿದೆ. ಸ್ಥಳೀಯರು ಕೂಡಲೇ ಧಾವಿಸಿದ್ದು, ಬಸ್ ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿ ಕೂತಟ್ಟುಕುಲಂನಲ್ಲಿರುವ ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದರು.
ವಿಡಿಯೊ ನೋಡಿ:
ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪೆಟ್ರೋಲ್ ಬಂಕ್ ಆವರಣದಲ್ಲಿ ಪಲ್ಟಿಯಾಗಿದೆ. ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ ಕಾರಣ, ಮಳೆಯಿಂದಾಗಿ ರಸ್ತೆ ಒದ್ದೆಯಾಗಿದ್ದರಿಂದ ನಿಯಂತ್ರಣ ತಪ್ಪಿ ಪೆಟ್ರೋಲ್ ಪಂಪ್‌ನ ಹತ್ತಿರವಿದ್ದ ಕಾಂಕ್ರೀಟ್ ಕಂಬಕ್ಕೆ ಢಿಕ್ಕಿ ಹೊಡೆದು ಪಕ್ಕಕ್ಕೆ ಉರುಳಿದೆ. ಪೆಟ್ರೋಲ್ ತುಂಬಿಸಲು ನಿಲ್ಲಿಸಿದ್ದ ಕಾರು ಮತ್ತು ಇನ್ನೊಂದು ದ್ವಿಚಕ್ರ ವಾಹನ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದೆ. ಇಂಧನ ಸರಬರಾಜು ಪ್ರದೇಶಕ್ಕೆ ಡಿಕ್ಕಿ ಹೊಡೆದರೆ ದೊಡ್ಡ ಬೆಂಕಿ ಅವಘಾಡ ಸಂಭವಿಸುವ ಸಾಧ್ಯತೆ ಇತ್ತು.
ಸಮೋಸ ನೀಡಲು ತಡವಾಗಿದ್ದಕ್ಕೆ ರಣರಂಗವಾದ ಬೇಕರಿ; ನೌಕರನ ಮೇಲೆ ಹಲ್ಲೆ ನಡೆಸಿದ ಗ್ರಾಹಕರು
ಅಪಘಾತದ ನಂತರ ಕೆಲವು ಪ್ರಯಾಣಿಕರು ಪ್ರಜ್ಞೆ ತಪ್ಪಿದರೂ, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಇಡೀ ಸನ್ನಿವೇಶ ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ವೈರಲ್ ಆಗಿದೆ.