ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಡರಾತ್ರಿ ತಂಗಿಯನ್ನು ಕ್ಯಾಬ್ ಹತ್ತಿಸಿದ ಅಣ್ಣನಿಗೆ ಧೈರ್ಯ ತುಂಬಿದ ಚಾಲಕ: ವಿಡಿಯೊ ನೋಡಿ

Viral Video: ದೆಹಲಿಯ ಕ್ಯಾಬ್ ಡ್ರೈವರ್ ತೋರಿದ ಕಾಳಜಿ ಎಲ್ಲರ ಮನಗೆದ್ದಿದೆ. ಯುವತಿಯೊಬ್ಬಳು ತಡ ರಾತ್ರಿ ದೆಹಲಿಯಿಂದ ಗುರಗಾಂವ್‌ಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಹತ್ತಿಸಲು ಆಕೆಯ ಅಣ್ಣ ಆಗಮಿಸಿದ್ದು ಅವರಿಬ್ಬರ ಸಂಭಾಷಣೆಯನ್ನು ಗಮನಿಸಿದ ಕ್ಯಾಬ್ ಚಾಲಕ ಧೈರ್ಯ ಹೇಳಿ ಆಕೆಯ ಸುರಕ್ಷತೆಯನ್ನು ಖಚಿತ ಪಡಿಸಿದ್ದಾನೆ‌. ಸದ್ಯ ಚಾಲಕನ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ತಂಗಿಯನ್ನು ಕ್ಯಾಬ್ ಹತ್ತಿಸಿದ ಅಣ್ಣನಿಗೆ ಧೈರ್ಯ ತುಂಬಿದ ಚಾಲಕ

​ನವದೆಹಲಿ, ಜೂ. 22: ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಯಾವುದೇ ಕೆಲಸಕ್ಕೆ ಹೊರಟರೂ ಮನೆಯವರಿಗೆ ಆತಂಕ ಇದ್ದೇ ಇರುತ್ತದೆ. ಸುರಕ್ಷತೆ ಬಗ್ಗೆ ಪೋಷಕರು ಭಯ ವ್ಯಕ್ತ ಪಡಿಸುತ್ತಲೇ ಇರುತ್ತಾರೆ. ಇಂತಹದ್ದೇ ಒಂದು ಸಂದರ್ಭದಲ್ಲಿ ದೆಹಲಿಯ ಕ್ಯಾಬ್ ಡ್ರೈವರ್ ತೋರಿದ ಕಾಳಜಿ ಎಲ್ಲರ ಮನಗೆದ್ದಿದೆ. ಯುವತಿಯೊಬ್ಬಳು ತಡ ರಾತ್ರಿ ದೆಹಲಿಯಿಂದ ಗುರಗಾಂವ್‌ಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಹತ್ತಿಸಲು ಆಕೆಯ ಅಣ್ಣ ಆಗಮಿಸಿದ್ದು, ಅವರಿಬ್ಬರ ಸಂಭಾಷಣೆಯನ್ನು ಗಮನಿಸಿದ ಕ್ಯಾಬ್ ಚಾಲಕ ಧೈರ್ಯ ಹೇಳಿ ಆಕೆಯ ಸುರಕ್ಷತೆಯನ್ನು ಖಚಿತ ಪಡಿಸಿದ್ದಾನೆ‌. ಸದ್ಯ ಚಾಲಕನ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ (Viral News) ಪ್ರಶಂಸೆ ವ್ಯಕ್ತವಾಗುತ್ತಿದೆ.

ತನ್ನ ಸಹೋದರಿಯನ್ನು ರಾತ್ರಿ ಕಳುಹಿಸುವ ಮೊದಲು ಚಿಂತೆಗೊಳಗಾದ ಸಹೋದರನಿಗೆ ಕ್ಯಾಬ್ ಚಾಲಕ ಧೈರ್ಯ ತುಂಬಿದ್ದಾನೆ. ಪ್ರಯಾಣ ಆರಂಭಿಸುವ ಮೊದಲು ಕ್ಯಾಬ್ ಚಾಲಕ ಇಬ್ಬರಿಗೂ ಭರವಸೆ ನೀಡಿ, ಯುವತಿಗೆ ಆರಾಮವಾಗಿ ಕುಳಿತುಕೊಳ್ಳಲು ಮತ್ತು ಕ್ಯಾಬ್ ಅನ್ನು ತನ್ನ ಸ್ವಂತ ಸಹೋದರನ ವಾಹನ ಎಂಬಂತೆ ಭಾವಿಸಿ ಪ್ರಯಾಣಿಸಲು ದೈರ್ಯ ತುಂಬಿದ್ದಾನೆ.

ವಿಡಿಯೊ ನೋಡಿ:



ಯುವತಿಯೊಬ್ಬಳು ದೆಹಲಿಯಿಂದ ಗುರಗಾಂವ್‌ಗೆ ರಾತ್ರಿ ಕ್ಯಾಬ್ ಬುಕ್ ಮಾಡಿದ್ದಳು. ಅವಳ ಸಹೋದರ ಫೋನ್‌ನಲ್ಲಿ ನಿರಂತರ ಅಪ್‌ಡೇಟ್ ಮಾಡುವಂತೆ ಸೂಚಿಸಿದ್ದ. ತಂಗಿಯ ಸುರಕ್ಷತೆಯ ಬಗ್ಗೆ ಅಣ್ಣನಿಗೆ ಇದ್ದ ಭಯ ಕಂಡು ಕ್ಯಾಬ್ ಚಾಲಕ ಇಬ್ಬರಿಗೂ ಭರವಸೆ ತುಂಬಿದ್ದಾನೆ.

ನೋಯ್ಡಾದ ಅಪಾರ್ಟ್‌ಮೆಂಟ್ ಸ್ವಿಮ್ಮಿಂಗ್‌ ಪೂಲ್ ಬಳಿ ಪ್ರವಾಸಿಗರಿಂದ ಗಾಂಜಾ ಸೇವನೆ

ಆಕೆಯ ಅಣ್ಣನ ಬಳಿ ಚಾಲಕ, ʼʼನನ್ನ ವಾಹನದ ಸಂಖ್ಯೆ ಮತ್ತು ವಿಳಾಸದ ಫೋಟೊ ತೆಗೆಯಿರಿ. ಅದನ್ನು ಕಾರಿನ ಹೊರಗೆ ಬರೆಯಲಾಗಿದೆ. ಅವಳು ನನ್ನ ಸಹೋದರಿ ಇದ್ದಂತೆʼʼ ಎಂದು ಮಾತನಾಡಿಸಿ ಅಣ್ಣನ ಆತಂಕವನ್ನು ದೂರ ಮಾಡಿದ್ದಾನೆ​‌‌. ಇದಕ್ಕೆ ಸಂತೋಷಗೊಂಡ ಯುವತಿ ʼʼಭಯ್ಯಾ, ಧನ್ಯವಾದಗಳುʼʼ ಎಂದು ಪ್ರತಿಕ್ರಿಯೆ ನೀಡಿದ್ದಾಳೆ.

ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, ʼʼಪ್ರತಿ ಭಾರತೀಯ ಹುಡುಗನೂ ಈ ರೀತಿ ವರ್ತಿಸಿದಾಗ ಮಹಿಳೆಯರ ಸುರಕ್ಷತೆ ಖಚಿತವಾಗುತ್ತದೆʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ʼʼನಿಜಕ್ಕೂ ಕ್ಯಾಬ್ ಚಾಲಕನ ವರ್ತನೆ ಮೆಚ್ಚುವಂತದ್ದು. ಇಂತಹ ಚಾಲಕರು ಇದ್ದರೆ ಮಹಿಳೆಯರಿಗೆ ಪ್ರಯಾಣಿಸಲು ನೂರು ಪಟ್ಟು ಧೈರ್ಯʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.