ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ತಾರಕ್ ಮೆಹ್ತಾ’ ಸೀರಿಯಲ್ ನೋಡುತ್ತ ಕ್ಯಾಬ್‌ ಚಲಾಯಿಸಿ ಚಾಲಕ; ಪ್ರಶ್ನಿಸಿದ ಪ್ರಯಾಣಿಕನಿಗೇ ಧಮ್ಕಿ

Viral News: ಕ್ಯಾಬ್‌ ಚಾಲಕನೊಬ್ಬ ಸೀರಿಯಲ್ ನೋಡುತ್ತ ಡ್ರೈವಿಂಗ್ ಮಾಡುತ್ತಿರುವ ದೃಶ್ಯವೊಂದು ಕಂಡು ಬಂದಿದೆ. ಓಲಾ ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕರು ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ದೆಹಲಿ-ನೋಯ್ಡಾ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕ ಆತಂಕಕ್ಕೆ ಒಳಗಾಗಿದ್ದಾರೆ.

ಸೀರಿಯಲ್ ನೋಡುತ್ತಾ ಡ್ರೈವಿಂಗ್‌ ಮಾಡಿದ ಚಾಲಕ

ನವದೆಹಲಿ, ಜೂ. 2: ಇತ್ತೀಚೆಗೆ ಸಾರಿಗೆ ಇಲಾಖೆ ಸಂಚಾರ ನಿಯಮಗಳನ್ನು ಕಠಿಣಗೊಳಿಸಿದರೂ ಉಲ್ಲಂಘನೆ ಮಾಡುವ ಪ್ರಕರಣಗಳು ಕಡಿಮೆಯಾಗಿಲ್ಲ. ಇದೀಗ ಕ್ಯಾಬ್‌ನಲ್ಲಿ ಚಾಲಕನೊಬ್ಬ ಸೀರಿಯಲ್ ನೋಡ್ತಾ ಡ್ರೈವಿಂಗ್ ಮಾಡುತ್ತಿರುವ ದೃಶ್ಯವೊಂದು ಕಂಡು ಬಂದಿದೆ. ಓಲಾ ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕ ಈ ವಿಚಾರವನ್ನು ಶೇರ್ (Viral News) ಮಾಡಿಕೊಂಡಿದ್ದಾರೆ. ದೆಹಲಿ-ನೋಯ್ಡಾ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕ ಆತಂಕಕ್ಕೆ ಒಳಗಾಗಿದ್ದಾರೆ.

ನೋಯ್ಡಾ ಮತ್ತು ದೆಹಲಿ ನಡುವಿನ ಕ್ಯಾಬ್ ಪ್ರಯಾಣದ ವೇಳೆ ಚಾಲಕನು ಡ್ರೈವ್ ಮಾಡುವಾಗ ಫೋನ್‌ನಲ್ಲಿ ಸೀರಿಯಲ್ ವೀಕ್ಷಿಸುತ್ತಿದ್ದ ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ. ಚಲಿಸುವ ಕಾರಿನಲ್ಲಿ ಚಾಲಕ ಮೊಬೈಲ್‌ ನೋಡುತ್ತ ಸಾಗುತ್ತಿದ್ದಾಗ ಪ್ರಯಾಣಿಕ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಚಾಲಕನು ತನ್ನ ತಪ್ಪನ್ನು ಮರೆಮಾಚಿ ಅಹಂಕಾರದಿಂದ ಮಾತನಾಡಿದ್ದಾನೆ. ಇದು ಜನನಿಬಿಡ ರಸ್ತೆಗಳಲ್ಲಿ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ವಿಡಿಯೊ ನೋಡಿ:



ಪ್ರಯಾಣಿಕ ತನ್ನ ಪತ್ನಿ ಮತ್ತು ಕಿರಿಯ ಸಹೋದರನೊಂದಿಗೆ ನೋಯ್ಡಾದಿಂದ ದೆಹಲಿಗೆ ಹೋಗುತ್ತಿದ್ದರು. ಇಂತಹ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ಕಾರಿನ ಚಾಲಕ, ತನ್ನ ಮೊಬೈಲ್‌ನಲ್ಲಿ ಪ್ರಸಿದ್ಧ ಹಾಸ್ಯ ಧಾರಾವಾಹಿ ʼತಾರಕ್ ಮೆಹ್ತಾʼ ವೀಕ್ಷಿಸುತ್ತಿದ್ದ ಎನ್ನಲಾಗಿದೆ.

ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ

ಪ್ರಯಾಣಿಕನ ಮಾತಿಗೆ ಅಹಂಕಾರದಿಂದ ಪ್ರತಿಕ್ರಿಯೆ ನೀಡಿದ ಚಾಲಕ, ʼʼಇಷ್ಟವಿಲ್ಲದಿದ್ದರೆ ಕಾರಿನಿಂದ ಕೆಳಗಿಳಿಯಿರಿʼʼ ಎಂದು ಉದ್ಧಟತನದಿಂದ ಮಾತನಾಡಿದ್ದಾನೆ. ಪ್ರಯಾಣಿಕ, "ಭಯ್ಯಾ, ಮೊಬೈಲ್ ಸ್ಕ್ರೀನ್ ಆಫ್ ಮಾಡಿ, ಡ್ರೈವಿಂಗ್ ಮಾಡುತ್ತಿದ್ದರಲ್ಲಾ?ʼʼ ಎಂದು ವಿನಯದಿಂದ ಹೇಳಿದ್ದಾರೆ. ಆದರೆ ಇದಕ್ಕೆ ತಪ್ಪು ಒಪ್ಪಿಕೊಳ್ಳದ ಚಾಲಕ, ʼʼನಿಮಗೆ ತೊಂದರೆ ಅನಿಸಿದರೆ, ಕಾರಿನಿಂದ ಕೆಳಗಿಳಿಯಬಹುದುʼʼ ಎಂದಿದ್ದಾನೆ.

ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼಸಂಪೂರ್ಣವಾಗಿ ತಪ್ಪು ವರ್ತನೆ. ಚಾಲನೆ ಮಾಡುವಾಗ ವಿಡಿಯೊಗಳನ್ನು ನೋಡುವುದು ನಿಯಮಗಳಿಗೆ ವಿರುದ್ಧ. ಇದಕ್ಕೆ ಕ್ರಮ ತೆಗೆದುಕೊಳ್ಳಬೇಕುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು, ʼʼಇದು ಕೇವಲ ಬೇಜವಾಬ್ದಾರಿತನವಲ್ಲ, ಪ್ರಯಾಣಿಕರ ಜೀವದ ಜತೆ ಆಟʼʼ ಎಂದು ಕಮೆಂಟ್ ಮಾಡಿದ್ದಾರೆ.