ಆಮ್‌ಸ್ಟರ್‌ಡ್ಯಾಮ್:ಆಮ್‌ಸ್ಟರ್‌ಡ್ಯಾಮ್ ಸ್ಕ್ವೇರ್‌ನಲ್ಲಿ ಇತ್ತೀಚೆಗೆ ಕಾರೊಂದು ಸ್ಫೋಟಗೊಂಡು ಹೊತ್ತಿ ಉರಿದಿದೆ.ಈ ಘಟನೆಯ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಲಾಗಿದ್ದು, ಇದು ಈಗ ವೈರಲ್(Viral Video) ಆಗಿದೆ.ವಿಡಿಯೊದಲ್ಲಿ ಸ್ಕ್ವೇರ್‌ನ ಆಗ್ನೇಯ ಮೂಲೆಯಲ್ಲಿರುವ ರಾಷ್ಟ್ರೀಯ ಸ್ಮಾರಕದ ಬಳಿ ಇರುವ ಕೆಂಪು ಕಾರೊಂದು ಹೊತ್ತಿ ಉರಿಯುವುದು ಸೆರೆಯಾಗಿದೆ. ಈ ಭಯಾನಕ ದೃಶ್ಯ ಕಂಡು ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಕಾರಿನ ಡ್ರೈವರ್ ಉದ್ದೇಶಪೂರ್ವಕವಾಗಿ ಕಾರಿಗೆ ಬೆಂಕಿಯನ್ನು ಹಚ್ಚಿದ್ದಾನೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.
ವೈರಲ್ ಆದ ವಿಡಿಯೊದಲ್ಲಿ ರಾಷ್ಟ್ರೀಯ ಸ್ಮಾರಕದ ಬಳಿ ಸಾಕಷ್ಟು ಜನರು ಓಡಾಡುತ್ತಿರುವಾಗ ಅಲ್ಲಿ ನಿಲ್ಲಿಸಿದ್ದ ಕೆಂಪು ಬಣ್ಣದ ಕಾರಿನಲ್ಲಿ ಹೊಗೆ ಕಂಡುಬಂದಿದೆ. ಸ್ವಲ್ಪ ಸಮಯದ ನಂತರ ಸಣ್ಣ ಸ್ಫೋಟ ಸಂಭವಿಸಿ ಎಲ್ಲರ ಕಣ್ಣೆದುರಿನಲ್ಲೇ ಕಾರು ಹೊತ್ತಿ ಉರಿದಿದೆ. ಇದನ್ನು ನೋಡಿದ ಜನರು ದಿಕ್ಕೆಟ್ಟು ಓಡಿದ್ದಾರೆ. ಹಲವಾರು ಪೊಲೀಸ್ ವಾಹನಗಳು ಉರಿಯುತ್ತಿರುವ ಕಾರನ್ನು ಸುತ್ತುವರಿದು ಬೆಂಕಿಯನ್ನು ನಂದಿಸಲು ಹರಸಾಹಸ ಮಾಡಿದ್ದಾರೆ. ನಂತರ ಕಾರಿನಿಂದ ವ್ಯಕ್ತಿಯೊಬ್ಬ ಹೊರಬಂದಿದ್ದು ಆತನ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣ ಪೊಲೀಸರು ಆತನ ಮೈಮೇಲಿದ್ದ ಬೆಂಕಿಯನ್ನು ನಂದಿಸಿದ್ದಾರೆ.
ಕಾರು ಹೊತ್ತಿ ಉರಿಯುತ್ತಿರುವ ದೃಶ್ಯ ಇಲ್ಲಿದೆ ನೋಡಿ...
ಅದೃಷ್ಟವಶಾತ್ ಆ ಸಮಯದಲ್ಲಿ ಕಾರಿನ ಬಳಿ ಸಾಕಷ್ಟು ಜನರು ಇದ್ದರೂ ಕೂಡ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ ಕಾರಿನ ಡ್ರೈವರ್ ಉದ್ದೇಶಪೂರ್ವಕವಾಗಿ ಬೆಂಕಿಯನ್ನು ಹಚ್ಚಿದ್ದಾನೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ಹೀಗಾಗಿ ಗಾಯಗೊಂಡ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆತನನ್ನು ಉತ್ತರ ನೆದರ್‌ಲ್ಯಾಂಡ್ಸ್ ಪ್ರಾಂತ್ಯದ 50 ವರ್ಷದ ಡಚ್ ಪ್ರಜೆ ಎಂದು ಗುರುತಿಸಲಾಗಿದೆ. ಆದರೆ ಪೊಲೀಸರು ಆತನ ಹೆಸರನ್ನು ಬಹಿರಂಗಪಡಿಸಿಲ್ಲ. ಪೊಲೀಸರು ಎಲ್ಲಾ ಸನ್ನಿವೇಶಗಳನ್ನು ಕೂಲಂಕೂಷವಾಗಿ ಪರಿಶೀಲಿಸಿದಾಗ ಆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಅನುಮಾನಗಳು ಮೂಡಿವೆ. ಹಾಗಾಗಿ ಆತನೇ ಬೆಂಕಿ ಹಚ್ಚಿದ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಹಾಡುಹಗಲೇ ಆಟೋದಲ್ಲಿ ಕುಳಿತು ಈ ಮಹಿಳೆಯರು ಮಾಡಿದ್ದೇನು ಗೊತ್ತಾ? ಎಂಥಾ ಕಾಲ ಬಂತು ನೋಡಿ!
ಸಾರ್ವಜನಿಕ ಸ್ಥಳದಲ್ಲಿ ಚಾಕು ಹಿಡಿದು ಓಡಾಡಿದ ಅಪರಿಚಿತ!
ಇತ್ತೀಚೆಗಷ್ಟೇ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಚಾಕು ಹಿಡಿದು ಓಡಾಡುತ್ತಿದ್ದು, ಈ ವೇಳೆ ಐವರಿಗೆ ಇರಿದು ಗಾಯಗೊಳಿಸಿದ್ದಾನೆ. ಆದರೆ ಪ್ರವಾಸಿಗನೊಬ್ಬ ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ವೈರಲ್ ಆದ ವಿಡಿಯೊದಲ್ಲಿ ಪ್ರವಾಸಿಯು ಹಲ್ಲೆಕೋರನ ಜೊತೆ ಹೋರಾಡಿ ಅವನನ್ನು ರಸ್ತೆಗೆ ತಳ್ಳಿ ಗಟ್ಟಿಯಾಗಿ ಹಿಡಿದುಕೊಂಡಿರುವುದು ಸೆರೆಯಾಗಿದೆ. ನಂತರ, ಪೊಲೀಸರು ಬರುವವರೆಗೂ ಅಲ್ಲಿದ್ದ ಜನರು ಹಲ್ಲೆಕೋರನನ್ನು ನಿಗ್ರಹಿಸಲು ಸಹಾಯ ಮಾಡಿದ್ದಾರಂತೆ. ವರದಿ ಪ್ರಕಾರ, ಪೊಲೀಸರು ಸ್ಥಳಕ್ಕೆ ಬಂದು ಹಲ್ಲೆಕೋರನನ್ನು ಬಂಧಿಸಿದ್ದಾರೆ. ಹಲ್ಲೆಕೋರನ ದಾಳಿಯಿಂದ ಇಬ್ಬರು ಹಿರಿಯ ಅಮೆರಿಕನ್ ಪ್ರವಾಸಿಗರು, ಬೆಲ್ಜಿಯಂ ಮಹಿಳೆ ಮತ್ತು 19 ವರ್ಷದ ಆಮ್‌ಸ್ಟರ್‌ಡ್ಯಾಮ್ ನಿವಾಸಿ ಸೇರಿದಂತೆ ಐದು ಜನರು ಗಾಯಗೊಂಡಿದ್ದಾರೆ.