ಲಂಡನ್, ಸೆ. 14: ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಚರಿಸಲಾಗುವ ಗಂಗಾ ಆರತಿ ಆಧ್ಯಾತ್ಮಿಕವಾಗಿ ಗಮನ ಸೆಳೆದಿದೆ. ಇದೀಗ ಇಂಗ್ಲೆಂಡ್‌ನ ಲಂಡನ್‌ನ ಥೇಮ್ಸ್ ನದಿ ತೀರದಲ್ಲೂ ಇದೇ ಮೊದಲ ಬಾರಿಗೆ ಗಂಗಾ ಆರತಿ (Ganga Aarti) ಕಾರ್ಯಕ್ರಮ ನಡೆದಿದೆ. ಪ್ರಾರ್ಥನೆ, ಧ್ಯಾನ, ಭಾರತೀಯ ಸಾಂಸ್ಕೃತಿಕ ವೈಭವದ ಜತೆಗೆ ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಸಾಮಾನ್ಯವಾಗಿ ವಾರಣಾಸಿಯಲ್ಲಿ ಕಂಡುಬರುವಂತಹ ಸಮಾರಂಭವೊಂದು ಲಂಡನ್‌ನ ಥೇಮ್ಸ್ ನದಿ ದಡದಲ್ಲಿ ನಡೆದಿದ್ದು ವಿಶೇಷ.
ಚಿನ್ಮಯ ಮಿಷನ್ ಯುಕೆ ತನ್ನ 75ನೇ ವರ್ಷಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಭಾರತದ ಗಂಗಾ ತೀರದಲ್ಲಿ ನಡೆಯುವ ಧಾರ್ಮಿಕ ಪರಂಪರೆಯನ್ನು ಲಂಡನ್‌ನಲ್ಲೂ ಪಸರಿಸುವ ಉದ್ದೇಶದಿಂದ ಚಿನ್ಮಯ ಮಿಷನ್ ಯುಕೆ, ವಾರ್ಷಿಕ ‘ಟೋಟಲಿ ಥೇಮ್ಸ್’ ಉತ್ಸವದ ಸಹಯೋಗದಲ್ಲಿ ಆಯೋಜನೆ ಮಾಡಿದೆ.
ವಿಡಿಯೊ ನೋಡಿ:
ಸಂಜೆ 7:15ಕ್ಕೆ ಥೇಮ್ಸ್ ನದಿ ದಡದಲ್ಲಿ ಆರತಿ ಪ್ರಾರಂಭ ವಾಯಿತು. ಸಾಂಪ್ರದಾಯಿಕ ದೀಪಗಳು, ಮಂತ್ರಘೋಷ ಹಾಗೂ ಸಂಗೀತ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಆದರೆ ಪರಿಸರದ ಕಾಳಜಿ ನಿಟ್ಟಿನಲ್ಲಿ ನದಿಯ ಸ್ವಚ್ಛತೆ ಅರಿತು ಆರತಿ ಯನ್ನು ನದಿ ದಡದಲ್ಲೇ ನಡೆಸಲಾಯಿತು. ಆಚರಣೆಯಲ್ಲಿ ಯಾವುದೇ ವಸ್ತುವನ್ನು ನದಿಗೆ ಹಾಕದೆ, ನೀರಿನಲ್ಲಿ ಬಿಡದೆ ಆಚರಣೆ ಮಾಡಲಾಯಿತು.
20 ಅಡಿ ಎತ್ತರದ ಫ್ಲೈಓವರ್ ನಡುವೆ ಸಿಲುಕಿದ ಕಾರ್!
ಆರತಿಗೂ ಮೊದಲೇ ಮಧ್ಯಾಹ್ನದಿಂದಲೇ ಭಾರತೀಯ ಶಾಸ್ತ್ರೀಯ ನೃತ್ಯ, ಸಂಗೀತ, ಆಹಾರ ಮಳಿಗೆಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಈ ಸಮಾರಂಭವು ಭಾರತೀಯ ಸಂಸ್ಕೃತಿಯ ಸಂಭ್ರಮವಾಗಿದ್ದು, ಇಂಗ್ಲೆಂಡ್‌ನಲ್ಲಿರುವ ಹಿಂದೂ ಹಾಗೂ ದಕ್ಷಿಣ ಏಷ್ಯಾದ ಸಮುದಾಯಗಳ ನಡುವೆ ಸಂಪರ್ಕ ಬೆಸೆಯುವ ಕ್ಷಣವಾಗಿ ಕಂಡು ಬಂದಿತ್ತು.
ಈ ಕಾರ್ಯಕ್ರಮದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಜನರು ಕೂಡ ಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಆರತಿ ನಡೆಯುತ್ತಿರುವುದು ಇಂಗ್ಲೆಂಡ್‌ನ ಥೇಮ್ಸ್ ನದಿಯಲ್ಲಿ ಬದಲಾಗಿ ಗಂಗಾ ನದಿಯಲ್ಲಿ ಅಲ್ಲವಲ್ಲ? ಇದನ್ನು 'ಗಂಗಾ ಆರತಿ' ಎಂದು ಕರೆಯುವುದು ತಪ್ಪು ಎಂದರು. ಮತ್ತೊಂದೆಡೆ, ವಿದೇಶದಲ್ಲಿ ನೆಲೆಸಿರುವ ಭಾರತೀಯರು ಸಂಸ್ಕೃತಿ ಹಾಗೂ ಆಚರಣೆಯನ್ನು ಜಗತ್ತಿಗೆ ಸಾರಿದ್ದಕ್ಕಾಗಿ ಖುಷಿ ವ್ಯಕ್ತಪಡಿಸಿದ್ದಾರೆ.