ನವದೆಹಲಿ, ಜೂ.23: ಇತ್ತೀಚೆಗೆ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ದೆಹಲಿಯಲ್ಲಿ ‘ಗ್ಲಾಮ್ ಅಪ್ ಫೆಸ್ಟ್' ಆಯೋಜನೆ ಮಾಡಿದೆ. ಈ ಕಾರ್ಯಕ್ರಮದಲ್ಲಿ ಹಲವು ಬ್ಯೂಟಿ ಬ್ರಾಂಡ್‌ಗಳು ಹಾಗೂ ಸಾವಿರಾರು ಕಂಟೆಂಟ್ ಕ್ರಿಯೇಟರ್‌ಗಳು ಭಾಗಿಯಾಗಿದ್ದರು. ಆದರೆ ಇದೇ ಸಂಭ್ರಮ ಕೇವಲ ಗಿಫ್ಟ್ ಹ್ಯಾಂಪರ್‌ಗಾಗಿ ಭಾರೀ ಗದ್ದಲ ಸೃಷ್ಟಿಯಾಗುವಂತೆ ಮಾಡಿದೆ. ಉಡುಗೊರೆ ಪ್ಯಾಕ್ ಗಳ ಹಂಚಿಕೆ ವೇಳೆ ನಡೆದ ತಳ್ಳಾಟ ನೂಕಾಟ ಉಂಟಾಗಿದ್ದು ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಜನರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ದೇಶದ ಅತಿದೊಡ್ಡ ಸೌಂದರ್ಯ ಕೂಟಗಳಲ್ಲಿ ಒಂದೆಂದು ಬಿಂಬಿಸಲಾದ ಫ್ಲಿಪ್‌ಕಾರ್ಟ್‌ನ "ಗ್ಲಾಮ್ ಅಪ್ ಫೆಸ್ಟ್ 2026" ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು. ದೆಹಲಿಯ ಪ್ರಗತಿ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಈ 4ನೇ ಆವೃತ್ತಿಯ ಫೆಸ್ಟ್‌ನಲ್ಲಿ 100ಕ್ಕೂ ಹೆಚ್ಚು ಪ್ರತಿಷ್ಠಿತ ಬ್ಯೂಟಿ ಬ್ರಾಂಡ್‌ಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳು ಭಾಗವಹಿಸಿದ್ದರು. ಆದರೆ ಉಡುಗೊರೆ ಹ್ಯಾಂಪರ್ ವಿತರಣೆಯ ಸಮಯದಲ್ಲಿ ದೊಡ್ಡ ಗದ್ದಲವಾಗಿ ಮಾರ್ಪಟ್ಟಿದೆ. ಹಂಚಿಕೆ ವೇಳೆ ನಡೆದ ತಳ್ಳಾಟ-ನೂಕಾಟದಿಂದಾಗಿ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆ ತಂದಂತಾಗಿದೆ.
ವಿಡಿಯೋ ನೋಡಿ:
'ಪ್ರತಿ ಕ್ಷಣಕ್ಕೂ ಸೌಂದರ್ಯ' ಎಂಬ ಥೀಮ್‌ನಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್ ಮತ್ತು ಭೂಮಿ ಪೆಡ್ನೇಕರ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು, ಟಾಪ್ ಕಂಟೆಂಟ್ ಕ್ರಿಯೇಟರ್‌ಗಳ ಜೊತೆಗೆ, ಟಿಕೆಟ್‌ಗಳ ಬೆಲೆ ರೂ. 1,179 ರಿಂದ ಪ್ರಾರಂಭವಾಯಿತು. ಈ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದ ಸಣ್ಣ ಹಾಗೂ ಮಧ್ಯಮ ಮಟ್ಟದ ಇನ್‌ಫ್ಲುಯೆನ್ಸರ್‌ಗಳೊಂದಿಗೆ ಫ್ಲಿಪ್‌ಕಾರ್ಟ್ ಪ್ರಚಾರ ನೀಡುವುದಾಗಿ ಹೇಳಿಕೊಂಡಿತ್ತು. ಕಾರ್ಯಕ್ರಮದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಕ್ರಿಯೇಟರ್‌ಗಳಿಗೆ ಸುಮಾರು 6,000 ಮೌಲ್ಯದ ಗಿಫ್ಟ್ ಹ್ಯಾಂಪರ್ ನೀಡುವುದಾಗಿ ಭರವಸೆ ಕೊಟ್ಟಿತ್ತು.
Viral News: ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ
ಆದರೆ, ಕಾರ್ಯಕ್ರಮ ಮುಗಿಯುವ ಮುನ್ನವೇ ಗಿಫ್ಟ್ ಹ್ಯಾಂಪರ್‌ಗಳು ಖಾಲಿಯಾಗಿದೆ. ವೈರಲ್ ಆದ ವಿಡಿಯೊದಲ್ಲಿ ಹ್ಯಾಂಪರ್ ವಿತರಣಾ ಪ್ರದೇಶಗಳ ಸುತ್ತಲೂ ದೊಡ್ಡ ಜನಸಮೂಹ ಭಾಗಿಯಾಗಿವೆ. ವಿಡಿಯೊದಲ್ಲಿ ತಳ್ಳುವುದು, ವಾದಗಳು ಮತ್ತು ಚೀಲಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿ ರುವುದನ್ನು ಸೆರೆಹಿಡಿಯಲಾಗಿದೆ. ಕೆಲವರು ಸ್ಟೋರೇಜ್ ರೂಮ್ ಒಳಗೆ ನುಗ್ಗಿ ಒಂದಕ್ಕಿಂತ ಹೆಚ್ಚು ಬ್ಯಾಗ್‌ಗಳನ್ನು ಎಳೆದಾಡಿ ಲೂಟಿ ಮಾಡಿದ್ದಾರೆ. ಉಡುಗೊರೆ ಹಂಚಿಕೆಯಲ್ಲಿನ ತಾರತಮ್ಯ ಬಗ್ಗೆ ನೆಟ್ಟಿಗರು ಕೂಡ ಕಿಡಿಕಾರಿದ್ದಾರೆ.