ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪರೀಕ್ಷೆಯ ವೇಳೆ ವಿದ್ಯಾರ್ಥಿಗೆ ನೆರವು ನಿರಾಕರಿಸಿದ ಚಾಟ್‌ಜಿಪಿಟಿ: ಈ ಎಐ ಶಿಸ್ತಿನ ಸಿಪಾಯಿ ಎಂದ ನೆಟ್ಟಿಗರು

Viral News: ಚಾಟ್‌ಜಿಟಿಪಿ ಎಐ ಮೂಲಕ ಬಳಕೆದಾರರು ತಮ್ಮೆಲ್ಲ ಪ್ರಶ್ನೆಗಳಿಗೆ ಕ್ಷಣದಲ್ಲೇ ಉತ್ತರ ಪಡೆಯಬಹುದು. ಇದು ನಿಮ್ಮ ವೈಯಕ್ತಿಕ ಸಹಾಯಕನಂತೆ ಕೆಲಸ ಮಾಡುತ್ತದೆ. ಆದರೆ ಇಷ್ಟೆಲ್ಲ ನೆರವು ನೀಡುವ ಚಾಟ್‌ಜಿಟಿಪಿ ಇದೀಗ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆ ವೇಳೆ ನೆರವು ನೀಡಲು ನಿರಾಕರಿಸಿದೆ. ಇದೀಗ ಬಳಕೆದಾರರು ಎಐಯ ಕರಾಮಕ್ಕಿಗೆ ದಂಗಾಗಿದ್ದಾರೆ.

ಪರೀಕ್ಷೆಗೆ ಉತ್ತರ ನೀಡಲು ನಿರಾಕರಣೆ ಮಾಡಿದ ಚಾಟ್‌ಜಿಪಿಟಿ

ನವದೆಹಲಿ, ಜೂ. 6: ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿದೆ. ಅದರಲ್ಲೂ ಭಾರಿ ಟ್ರೆಂಡಿಂಗ್‌ನಲ್ಲಿ ಇರುವ ಚಾಟ್‌ಜಿಟಿಪಿ ಎಐ ಹೆಚ್ಚು ಸುದ್ದಿಯಲ್ಲಿದೆ. ಈ ಚಾಟ್‌ಜಿಟಿಪಿ ಮೂಲಕ ಬಳಕೆದಾರರು ತಮ್ಮೆಲ್ಲ ಪ್ರಶ್ನೆಗಳಿಗೆ ಕ್ಷಣದಲ್ಲೇ ಉತ್ತರ ಪಡೆದು ಸಲಹೆ ಪಡೆಯಬಹುದು. ಇದು ನಿಮ್ಮ ವೈಯಕ್ತಿಕ ಸಹಾಯಕನಂತೆ ಕೆಲಸ ಮಾಡುತ್ತದೆ. ಆದರೆ ಇಷ್ಟೆಲ್ಲ ನೆರವು ನೀಡುವ ಚಾಟ್‌ಜಿಟಿಪಿ ಇದೀಗ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆ ವೇಳೆ ನೆರವು ನೀಡಲು ನಿರಾಕರಿಸಿದೆ. ಇದೀಗ ಬಳಕೆದಾರರು ಎಐ ಬುದ್ಧಿವಂತಿಕೆಗೆ ಭೇಷ್‌ ಎಂದಿದ್ದಾರೆ (Viral News).

ವಿದ್ಯಾರ್ಥಿಯೊಬ್ಬನಿಗೆ ಆನ್‌ಲೈನ್ ಪರೀಕ್ಷೆಯ ವೇಳೆ ಪ್ರಶ್ನೆಗೆ ಉತ್ತರಿಸಲು ಚಾಟ್‌ಜಿಪಿಟಿ ನಿರಾಕರಿಸಿದೆ. ಇದನ್ನು ಆತ ಲಿಂಕ್ಡ್‌ಇನ್ ಪೋಸ್ಟ್ ಮೂಲಕ ಶೇರ್ ಮಾಡಿಕೊಂಡಿದ್ದು, ಎಐಗೂ ಪರೀಕ್ಷೆಗೆ ಉತ್ತರ ಹೇಳಿಕೋಡಬಾರದೆಂದು ತಿಳಿದಿದೆ ಎಂಬುದಾಗಿ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಸಹಾಯ ಕೋರಿದ ವಿದ್ಯಾರ್ಥಿಗೆ ಚಾಟ್ ಜಿಟಿಪಿ ಅನಿರೀಕ್ಷಿತ ಪ್ರತಿಕ್ರಿಯೆಯನ್ನು ನೀಡಿದೆ.

ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ!

ವಿದ್ಯಾರ್ಥಿ ಆನ್‌ಲೈನ್‌ ಪರೀಕ್ಷೆಯ ಪೇಜ್‌ನಿಂದ ಪ್ರಶ್ನೆಯನ್ನು ಕಾಪಿ ಮಾಡಿದಾಗ ಪರೀಕ್ಷೆಯ ಮೊದಲು ನೀಡಲಾಗಿರುವ ಸೂಚನೆಯನ್ನು ಎಐ ಅರಿತುಕೊಂಡಿದೆ. ಇದಕ್ಕೆ ಉತ್ತರಿಸಿದ ಚಾಟ್‌ಜಿಪಿಟಿ, ʼʼನೀವು ಈಗ ಲೈವ್ ಪರೀಕ್ಷೆಯಲ್ಲಿ ಇದ್ದೀರಿ. ಲೈವ್ ಅಸೆಸ್‌ಮೆಂಟ್ ಪ್ರಶ್ನೆಗೆ ನಾನು ಉತ್ತರವನ್ನು ನೀಡಲು ಸಾಧ್ಯವಿಲ್ಲ. ನಿಮಗೆ ನೇರ ಮೌಲ್ಯಮಾಪನ ಪ್ರಶ್ನೆಗೆ ಉತ್ತರವನ್ನು ನೀಡಲು ಸಾಧ್ಯವಿಲ್ಲ. ಆದರೆ ನಾನು ಸಾಮಾನ್ಯ ವಿಷಯಗಳನ್ನು ವಿವರಿಸಬಲ್ಲೆʼʼ ಎಂದಿದೆ‌.

ಲಿಂಕ್ಡ್‌ಇನ್‌ನಲ್ಲಿ ಈ ಚಿತ್ರವನ್ನು ಪುಷ್ಪಾಂಜಲಿ ಸಿಂಗ್ ಎಂಬವವರು ಹಂಚಿಕೊಂಡಿದ್ದು, ʼʼವಿದ್ಯಾರ್ಥಿಯು ಪರೀಕ್ಷೆಯ ಮಧ್ಯದಲ್ಲಿ ಚಾಟ್‌ಜಿಟಿಪಿಯ ಸಹಾಯ ಕೇಳಿದಾಗ ಎಐ ನಿರಾಕರಿಸಿದೆʼʼ ಎಂದು ಬರೆದಿದ್ದಾರೆ. ಒಬ್ಬರು, ʼʼವಿದ್ಯಾರ್ಥಿಯು ಚಾಟ್‌ಬಾಟ್‌ನ ಸರಿಯಾದ ಆವೃತ್ತಿಯನ್ನು ಬಳಸದೇ ಇರಬಹುದುʼʼ ಎಂದಿದ್ದಾರೆ. ಮತ್ತೊಬ್ಬರು, ʼʼಏನಿದು ನಿನ್ನ ನಡವಳಿಕೆ ಚಾಟ್‌ಜಿಪಿಟಿ?" ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು, ʼʼಪ್ರಶ್ನೆ ಪತ್ರಿಕೆಯನ್ನು ತಯಾರು ಮಾಡಿರುವುದು ಚಾಟ್‌ಜಿಪಿಟಿ ಇರಬೇಕು. ಹಾಗಾಗಿ ಅದು ಉತ್ತರ ಹೇಳಿಲ್ಲʼʼ ಎಂದು ಕಮೆಂಟ್ ಮಾಡಿದ್ದಾರೆ.