ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಮ್ಮನ ಶ್ರಮಕ್ಕೆ ಮಗನ ಸಾಥ್: ಚಾಲಕಿ ಪುಟ್ಟ ಮಗನ ಈ ಜವಾಬ್ದಾರಿಯುತ ನಡೆಗೆ ನೆಟ್ಟಿಗರು ಫಿದಾ!

Viral Video: ಇತ್ತೀಚೆಗಷ್ಟೇ ಚೆನ್ನೈ ಮಹಿಳೆಯೊಬ್ಬರು ತುರ್ತು ಕೆಲಸದ ನಿಮಿತ್ತ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ಬುಕ್ ಮಾಡಿ ತೆರಳಿದ್ದಾಳೆ. ತಾನು ಬುಕ್ ಮಾಡಿದ್ದ ಸ್ಥಳದಿಂದ ಆ ಜರ್ನಿಯಲ್ಲಿ ಆಕೆ ಪುಟ್ಟ ಹುಡುಗನ ಜೊತೆಗೆ ಪಯಣಿಸಿದ ಸುಮಧುರ ಅನುಭವವನ್ನು ವಿಡಿಯೋ ಮಾಡಿದ್ದು ಅದನ್ನು ಸೋಶಿಯಲ್ ‌ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಅಮ್ಮನ ಶ್ರಮಕ್ಕೆ ಮಗನ ಸಾಥ್

ನವದೆಹಲಿ, ಡಿ. 30: ಜನರು ನಿತ್ಯ ಪ್ರಯಾಣ ಮಾಡುವಾಗ ಕಾರು, ಬೈಕ್ , ಬಸ್ ಅನ್ನು ಹೆಚ್ಚಾಗಿ ಅವಲಂಬಿಸುತ್ತಾರೆ. ಸ್ವಂತ ಕಾರು ಇಲ್ಲದವರು ಟ್ಯಾಕ್ಸಿ, ಕ್ಯಾಬ್ ಗಳನ್ನು ಬುಕ್ ಮಾಡಿ ತಮಗೆ ಬೇಕಾದ ಸ್ಥಳಕ್ಕೆ ಹೋಗುವುದು ಇದೆ. ಆದರೆ ಇದರ ಖರ್ಚು ವೆಚ್ಚ ಅಧಿಕ ಇರುವ ಕಾರಣ ಬಹುತೇಕ ಮಧ್ಯಮವರ್ಗದ ಜನರು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯ ಮೇಲೆ ಹೆಚ್ಚು ಅವಲಂಬಿತ ರಾಗಿ ದ್ದಾರೆ. ಸಣ್ಣ ಬೀದಿಗಳಲ್ಲಿ ತೆರಳಲು, ಅಗ್ಗದ ದರದ ಈ ಸೇವೆಯೂ ನಗರ ಪ್ರದೇಶದ ಜನರಿಗೆ ಬಹಳ ಅನುಕೂಲ ಆಗಿದೆ. ಅನೇಕ ನಿರುದ್ಯೋಗಸ್ಥ ಯುವಕ, ಯುವತಿಯರಿಗೆ ಈ ರ‍್ಯಾಪಿಡೋ ವ್ಯವಸ್ಥೆ ಆದಾಯವನ್ನು ನೀಡುತ್ತಿದೆ. ಪಾರ್ಟ್ ಟೈಂ ಕೆಲಸ ಮಾಡಲು ಇದನ್ನು ಕೆಲಸವಾಗಿ ಪರಿಗಣಿಸಿದವರ ಸಂಖ್ಯೆ ಅಧಿಕ ಇದೆ. ಅಂತೆಯೇ ಇತ್ತೀಚೆಗಷ್ಟೇ ಚೆನ್ನೈ ಮಹಿಳೆಯೊಬ್ಬರು ತುರ್ತು ಕೆಲಸದ ನಿಮಿತ್ತ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ಬುಕ್ ಮಾಡಿ ತೆರಳಿದ್ದಾಳೆ. ತಾನು ಬುಕ್ ಮಾಡಿದ್ದ ಸ್ಥಳದಿಂದ ಆ ಜರ್ನಿಯಲ್ಲಿ ಆಕೆ ಪುಟ್ಟ ಹುಡುಗನ ಜೊತೆಗೆ ಪಯಣಿಸಿದ ಸುಮಧುರ ಅನುಭವವನ್ನು ವಿಡಿಯೋ ಮಾಡಿದ್ದು ಅದನ್ನು ಸೋಶಿಯಲ್ ‌ಮಿಡಿಯಾದಲ್ಲಿ ಹಂಚಿ ಕೊಂಡಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ವೈರಲ್ ಆದ ವಿಡಿಯೋ (Viral Video) ದಲ್ಲಿ ಮಹಿಳಾ ಸವಾರರಿಗಾಗಿಯೇ ಮಾಡಿದ್ದ ಪಿಂಕ್ ರ‍್ಯಾಪಿಡೋ ಸೇವೆಯನ್ನು ಬಳಸಿಕೊಂಡು ಆಕೆ ಪ್ರಯಾಣಿಸಿದ್ದಾಗಿ ತಿಳಿಸಿದ್ದಾರೆ. ರ‍್ಯಾಪಿಡೋ ಸ್ಕೂಟರ್ ಬಂದ ಬಳಿಕ ಮಹಿಳೆ ಆ ಸ್ಕೂಟರ್ ಹತ್ತಿ ಪ್ರಯಾಣಿಸಿದ್ದಾರೆ. ಸ್ಕೂಟರ್ ಚಾಲಕಿಯನ್ನು ಪ್ರಯಾಣ ಮಾಡುತ್ತಿದ್ದ ಮಹಿಳೆಯು ಅಕ್ಕ ಎಂದು ಕರೆದಿದ್ದು ಆ ಚಾಲಕಿಗೆ ಒಬ್ಬ ಮಗನಿರು ವುದನ್ನು ಕೂಡ ವಿಡಿಯೋದಲ್ಲಿ ತಿಳಿಸಿದ್ದನ್ನು ಕಾಣಬಹುದು. ಆ ಪುಟ್ಟ ಹುಡುಗ ಕೂಡ ನಮ್ಮೊಂದಿಗೆ ಪ್ರಯಾಣಿಸಿದ್ದಾನೆ ಎಂಬುದನ್ನು ಆಕೆ ವಿಡಿಯೋ ಮೂಲಕ ರಿವಿಲ್ ಮಾಡಿದ್ದಾಳೆ.

ವಿಡಿಯೋ ನೋಡಿ:



ಸ್ಕೂಟರ್ ನಲ್ಲಿ ಪ್ರಯಾಣಿಸುವಾಗ ಚಾಲಕಿಯ ಮಗನು ಪ್ರಯಾಣಿಕರ ಜೊತೆ ಬಹಳ ಅನ್ಯೊನ್ಯ ವಾಗಿ‌ ಇದ್ದಿದ್ದನ್ನು ಮಹಿಳೆ ವಿಡಿಯೋದಲ್ಲಿ ತಿಳಿಸಿದ್ದನ್ನು ಕಾಣಬಹುದು‌. ಸ್ಕೂಟರ್ ರಸ್ತೆಯಲ್ಲಿ ಚಲಿಸುತ್ತಿದ್ದಂತೆ, ಅನಿರೀಕ್ಷಿತವಾಗಿ ಆ ಪುಟ್ಟ ಹುಡುಗ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಕೈ ಬೆರಳನ್ನು ನಿಧಾನವಾಗಿ ಹಿಡಿದಿದ್ದ ದೃಶ್ಯವನ್ನು ಕಾಣಬಹುದು. ಪ್ರಯಾಣವು ಸುಮಾರು ಐದು ಕಿಲೋಮೀಟರ್‌ಗಳ ಕಾಲವಿದ್ದು ಆ ಸಮಯದಲ್ಲಿ ಮಗು (ಹುಡುಗ) ಅವಳ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

Viral Video: ಇನ್ಸ್ಟಾಗ್ರಾಮ್​ನಲ್ಲಿ ಗೆಳೆಯನಿಗೆ ಹುಡುಗಿಯಿಂದ ಮೆಸೇಜ್‌; ಬೆಲ್ಟ್‌ನಲ್ಲಿ ಅಟ್ಟಾಡಿಸಿ ಹೊಡೆದ ಗೆಳತಿ, ವಿಡಿಯೋ ನೋಡಿ

ಆ ಮಹಿಳೆಯು ತನ್ನ ಪೋಸ್ಟ್ ನಲ್ಲಿ ಈ ಬಗ್ಗೆ ವಿಶೇಷ ಕ್ಯಾಪ್ಶನ್ ಅನ್ನು ಕೂಡ ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ನಾನು ಪಿಂಕ್ ರ‍್ಯಾಪಿಡೋ ನಲ್ಲಿ ಓರ್ವ ಅಕ್ಕ ಮತ್ತು ಆಕೆಯ ಪುಟ್ಟ ಮಗನೊಂದಿಗೆ ಸವಾರಿ ಮಾಡಿದ್ದೇನೆ. ಸುಮಾರು 5 ಕಿಲೋಮೀಟರ್ ದೂರದ ತನಕ ನನ್ನ ಪ್ರಯಾಣ ಇದ್ದಿತು ಆ ಮುದ್ದಾದ ಮಗು ನನ್ನ ಕೈಯನ್ನು ಎಂದಿಗೂ ಬಿಡಲಿಲ್ಲ. ನಾನು ಬೀಳಬಹುದೆಂಬ ಚಿಂತೆಯಿಂದ ನನ್ನ ಕೈಯನ್ನು ಆ ಮಗು ತುಂಬಾ ಬಿಗಿಯಾಗಿ ಹಿಡಿದಿರಬಹುದು. ಇದು ನಿಜವಾಗಿಯೂ ನನ್ನ ದಿನವನ್ನು ಸುಂದರಗೊಳಿಸಿದೆ ಎಂದು ಬರೆದುಕೊಂಡಿದ್ದಾರೆ.

ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ದೊಡ್ಡ ದೊಡ್ಡ ನಗರ ಪ್ರದೇಶದಲ್ಲಿ ಜನರು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ಅವಲಂಬಿಸುತ್ತಿರುವ ಪ್ರಮಾಣ ಇತ್ತೀಚೆಗೆ ಹೆಚ್ಚಾಗಿದೆ. ಈ ವಿಡಿಯೋ ಭಾವನಾತ್ಮಕವಾಗಿ ನೆಟ್ಟಿಗರ ಮನ ಸೆಳೆಯುವಂತಿದ್ದು ವಿಡಿಯೋ ಹಂಚಿಕೊಂಡ ಕೆಲವೇ ಕ್ಷಣಕ್ಕೆ ಸಾವಿರಾರು ಲೈಕ್ಸ್ , ವೀವ್ಸ್ ಪಡೆದುಕೊಂಡಿದೆ‌. ಮಕ್ಕಳನ್ನು ದೇವರು ಎಂದು ಹೇಳುವುದು ಇದಕ್ಕೆ ಇರಬೇಕು.. ಬಹುಶಃ ಆ ಮಗುವಿನ ತಾಯಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಮಗುವಿಗೆ ತಿಳಿಸಿರಬಹುದು. ಅದಕ್ಕೆ ಆ ಮಗು ಆಕೆ ಬೀಳಬಹುದು ಎಂದು ಜಾಗೃತಿ ವಹಿಸಿದ್ದಾನೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.