Viral News: ಪದೇ ಪದೇ ಹೆಸರು ಬದಲಾಯಿಸಿದ ಚೀನಾದ ವ್ಯಕ್ತಿ; ಇದರ ಹಿಂದಿನ ರಹಸ್ಯವೇನು ಗೊತ್ತಾ?
ಮೂಲತಃ ಹೆನಾನ್ ಪ್ರಾಂತ್ಯದ ಜು ಯುನ್ಫೀ ಎಂದು ಹೆಸರಿಸಲ್ಪಟ್ಟ ಈ ವ್ಯಕ್ತಿಗೆ ಅವನ ಮೊದಲ ಹೆಸರು ಇಷ್ಟವಾಗಲಿಲ್ಲವಂತೆ. ಅವನು ತನ್ನ ಹೆಸರನ್ನು ಝು ಕ್ವೆ ಕ್ಸುವಾನ್ ವು ಚಿ ಲಿಂಗ್ ಎಂದು ಬದಲಾಯಿಸಿದನಂತೆ. ಕೊನೆಗೂ ಈ ಹೆಸರು ಅವನಿಗೆ ಅದೃಷ್ಟವನ್ನು ತರಲಿಲ್ಲವಂತೆ. ಹಾಗಾಗಿ ಮೂರನೇ ಬಾರಿ ಹೆಸರು ಬದಲಾಯಿಸಲು ಅರ್ಜಿ ಹಾಕಿದ್ದು, ಇದನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರಂತೆ. ಈ ಸುದ್ದಿ ಈಗ ವೈರಲ್(Viral Video) ಆಗಿದೆ.


ಬೀಜಿಂಗ್: ನಾವು ಹುಟ್ಟಿದಾಗ, ನಮ್ಮ ಹೆತ್ತವರು ನಮಗೆ ಒಂದು ಹೆಸರನ್ನು ನೀಡುತ್ತಾರೆ. ಆ ಹೆಸರು ಜೀವಮಾನವಿಡೀ ನಮ್ಮೊಂದಿಗೆ ಇರುತ್ತದೆ. ಹಾಗಾಗಿ ಹೆಸರು ಎನ್ನುವುದು ಎಲ್ಲರ ಜೀವನದಲ್ಲೂ ಬಹಳ ಮುಖ್ಯವಾದುದು. ಆದರೆ ಚೀನಾದಲ್ಲಿನ ಒಬ್ಬ ವ್ಯಕ್ತಿಯು ತನ್ನ ಹೆಸರನ್ನು ಆಗಾಗ ಬದಲಾಯಿಸುವ ಮೂಲಕ ಅದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾನಂತೆ. ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಹೆಚ್ಚಿನ ಜನರು ತಮ್ಮ ಹೆಸರುಗಳ ಬಗ್ಗೆ ಹೆಮ್ಮೆಪಡುತ್ತಿದ್ದರೆ, ಈ ವ್ಯಕ್ತಿಯು ಇದಕ್ಕೆ ತದ್ವಿರುದ್ಧವಾಗಿದ್ದಾನೆ. ಅವನು ತನ್ನ ಹೆಸರನ್ನು ಇಷ್ಟಪಡುವುದಿಲ್ಲವಂತೆ. ಹಾಗಾಗಿ ಅವನು ಅದನ್ನು ಪದೇ ಪದೇ ಬದಲಾಯಿಸಿದ್ದಾನಂತೆ. ಮತ್ತು ಅದಕ್ಕಾಗಿ ಅಧಿಕಾರಿಗಳಿಗೆ ಪ್ರತಿ ಬಾರಿಯೂ ಹೊಸ ನೆಪವನ್ನು ಕೊಡುತ್ತಾನಂತೆ. ತನ್ನ ಹೆಸರಿನ ಬಗ್ಗೆ ಎಂದಿಗೂ ತೃಪ್ತನಾಗದ ಆತ ಹೆಸರು ಬದಲಾವಣೆಗಾಗಿ ವಿನಂತಿಗಳನ್ನು ಸಲ್ಲಿಸುತ್ತಲೇ ಇದ್ದಾನಂತೆ. ಇದು ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ವರದಿ ಪ್ರಕಾರ, ಚೀನಾದಲ್ಲಿ 23 ವರ್ಷದ ವ್ಯಕ್ತಿ ಈ ಅಸಾಮಾನ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾನಂತೆ. ತನ್ನ ಹೆಸರು ತುಂಬಾ ಕೆಟ್ಟದಾಗಿದೆ, ಅದು ತನಗೆ ದುರಾದೃಷ್ಟವನ್ನು ತರುತ್ತದೆ ಎಂಬುದು ಅವನ ನಂಬಿಕೆಯಂತೆ. ಹೆಸರಿನ ಕಾರಣದಿಂದ ಕೆಲಸ ಸಿಗುತ್ತಿಲ್ಲ ಎಂದುಕೊಂಡಿದ್ದಾನಂತೆ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ, ಅವನು ಈಗಾಗಲೇ ಎರಡು ಬಾರಿ ತನ್ನ ಹೆಸರನ್ನು ಬದಲಾಯಿಸಿದ್ದಾನಂತೆ.
ಮೂಲತಃ ಹೆನಾನ್ ಪ್ರಾಂತ್ಯದ ಜು ಯುನ್ಫೀ ಎಂದು ಹೆಸರಿಸಲ್ಪಟ್ಟ ಈ ವ್ಯಕ್ತಿಗೆ ಅವನ ಮೊದಲ ಹೆಸರು ಇಷ್ಟವಾಗಲಿಲ್ಲವಂತೆ. ಏಕೆಂದರೆ ಅದು ತುಂಬಾ ಸಾಮಾನ್ಯವಾಗಿತ್ತು. ಮತ್ತು ಅವನ ಹಳ್ಳಿಯ ಇನ್ನೊಬ್ಬ ವ್ಯಕ್ತಿ ಅದೇ ಹೆಸರನ್ನು ಇಟ್ಟುಕೊಂಡಿದ್ದನಂತೆ. ಅದೃಷ್ಟವನ್ನು ತಂದುಕೊಡುತ್ತದೆ ಎಂಬ ನಿರೀಕ್ಷೆಯಲ್ಲಿ, ಅವನು ತನ್ನ ಹೆಸರನ್ನು ಝು ಕ್ವೆ ಕ್ಸುವಾನ್ ವು ಚಿ ಲಿಂಗ್ ಎಂದು ಬದಲಾಯಿಸಿದನಂತೆ.
ಆದರೆ ಅವನಿಗೆ ಆ ಹೆಸರು ಕೂಡ ಸಮಾಧಾನ ನೀಡಲಿಲ್ಲವಂತೆ. ಯಾಕೆಂದರೆ ವಿಶೇಷವಾಗಿ ಅದು ಅವನಿಗೆ ಕೆಲಸ ಹುಡುಕಲು ಸಮಸ್ಯೆಯನ್ನುಂಟು ಮಾಡಿದೆಯಂತೆ. ನಂತರ ಅವನು ತನ್ನ ತಾಯಿಯ ಉಪನಾಮವನ್ನು ಅಳವಡಿಸಿಕೊಂಡು ಮತ್ತು ತನ್ನ ಹೆಸರನ್ನು ಮತ್ತೆ ಝೌ ಟಿಯಾನ್ ಜಿ ವೀ ಡಾ ಡಿ ಎಂದು ಬದಲಾಯಿಸಿಕೊಂಡನಂತೆ. ಮತ್ತು ಇದು ಹೆಚ್ಚು ವಿಶಿಷ್ಟವಾಗಿದೆ ಎಂಬುದು ಅವನ ಭಾವನೆಯಂತೆ.
ಈ ಸುದ್ದಿಯನ್ನೂ ಓದಿ:Viral Video: ಮಥುರಾದಲ್ಲಿ 2 ಡಜನ್‍ಗೂ ಹೆಚ್ಚು ಕೋತಿಗಳ ಮಾರಣಹೋಮ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಿ!
ಆದರೆ ಅವನ ಚಡಪಡಿಕೆ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಈ ಹೆಸರು ಕೂಡ ಅವನಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವನು ಮೂರನೇ ಹೆಸರು ಬದಲಾವಣೆಗಾಗಿ ಅಧಿಕಾರಿಗಳ ಬಳಿಗೆ ಹೋಗಿದ್ದಾನಂತೆ. ಈ ಬಾರಿ 48 ಅಕ್ಷರಗಳ ಹೆಸರಿಗೆ ಬದಲಾಯಿಸುವಂತೆ ವಿನಂತಿಸಿದ್ದಾನಂತೆ. ಆದರೆ ಅವನು ಈ ಹೆಸರಿನ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾನೆ ಎಂದು ಅನುಮಾನಗೊಂಡು ಅಧಿಕಾರಿಗಳು ಅವನ ಅರ್ಜಿಯನ್ನು ತಿರಸ್ಕರಿಸಿದ್ದಾರಂತೆ.