ತಮಿಳುನಾಡು,ಜು.10: ಸಾರ್ವಜನಿಕ ಸಾರಿಗೆಯಾದ ರೈಲಿನಲ್ಲಿ ಪ್ರಯಾಣಿಕರು ಸ್ವಚ್ಛತೆ ಕಾಪಾಡುವುದಿಲ್ಲ ಎನ್ನುವ ದೂರುಗಳು ಕೇಳಿಬರುತ್ತಲೇ ಇರುತ್ತವೆ. ತಿಂದ ಪ್ಲಾಸ್ಟಿಕ್ ಪ್ಯಾಕ್‌ಗಳು, ಕವರ್‌ಗಳು ಅಲ್ಲಲ್ಲಿ ಬಿದ್ದಿರುತ್ತವೆ. ಈ ನಡುವೆ ಸಾಮಾನ್ಯ ಪ್ಯಾಸೆಂಜರ್ ರೈಲೊಂದರ ಸ್ವಚ್ಛತೆಯನ್ನು ಪ್ರಯಾಣಿಕರೊಬ್ಬರು ಶ್ಲಾಘಿಸಿದ್ದಾರೆ. ಮಧುರೈನಿಂದ ರಾಮೇಶ್ವರಂಗೆ ಪ್ರಯಾಣಿಸಿದ ವ್ಯಕ್ತಿಯೊಬ್ಬರು ರೈಲ್ವೆ ಸ್ವಚ್ಛತೆಗೆ ಮಾತ್ರವಲ್ಲದೆ ಪ್ರಯಾಣಿಕರ ನಾಗರಿಕ ಪ್ರಜ್ಞೆಗೂ ಮೆಚ್ಚುಗೆ ನೀಡಿದ್ದಾರೆ, ಪ್ರಯಾಣಿಕರು ಸ್ವಚ್ಛತೆಗೆ ಆಧ್ಯತೆ ನೀಡಿದರೆ ಮಾತ್ರ ಶಿಸ್ತು ಕಾಪಾಡಲು ಸಾಧ್ಯ ಎಂದು ಅವರು (Viral News) ಬರೆದುಕೊಂಡಿದ್ದಾರೆ.
ಸಾಮಾನ್ಯ ಪ್ಯಾಸೆಂಜರ್ ರೈಲೊಂದರ ಸ್ವಚ್ಛತೆಯನ್ನು ಶ್ಲಾಘಿಸಿ ಪ್ರಯಾಣಿಸಿದ ಆರ್. ಗೌರವ್ ಎಂಬವರು ಈ ವಿಡಿಯೊ ಶೇರ್ ಮಾಡಿದ್ದಾರೆ. ಶೌಚಾಲಯಗಳು, ವಾಶ್ ಬೇಸಿನ್ ಮತ್ತು ರೈಲಿನ ನೆಲ, ಹಾಗೆಯೇ ಪ್ಲಾಟ್‌ಫಾರ್ಮ್ ಮತ್ತು ರೈಲ್ವೆ ಹಳಿಗಳು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿವೆ ಎಂದು ಅವರು ವಿಡಿಯೊದಲ್ಲಿ ತೋರಿಸಿದ್ದಾರೆ. ಸಾಮಾನ್ಯವಾಗಿವಾಗಿ ಎಸಿ ಕೋಚ್‌ಗಳು, ಪ್ರೀಮಿಯಂ ರೈಲುಗಳು ಮಾತ್ರ ಸ್ವಚ್ಛ ಇರುತ್ತವೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಆದರೆ ಇಲ್ಲಿ ಸಾಮಾನ್ಯ ರೈಲುಗಳು ಸ್ವಚ್ಛವಾಗಿವೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ವಿಡಿಯೋ ನೋಡಿ:
ಈ ದೃಶ್ಯಕ್ಕೆ "ಉತ್ತರ ಮತ್ತು ದಕ್ಷಿಣ ಭಾರತದ ಜನರ ನಡುವಿನ ವ್ಯತ್ಯಾಸ" ಎಂಬ ಶೀರ್ಷಿಕೆ ನೀಡಲಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಕೆಲವರು ಪ್ರತಿಕ್ರಿಯೆ ನೀಡಿದ್ದು ರೈಲು ಹೊರಡುವ ಮುನ್ನ ಮಾತ್ರ ಸ್ವಚ್ಛವಾಗಿರುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದರು., ಗೌರವ್ 170 ಕಿಲೋಮೀಟರ್ ಪ್ರಯಾಣ ಮುಗಿದ ನಂತರವೂ ರೈಲಿನ ಕೋಚ್‌ಗಳು ಎಚ್ಟು ಸ್ವಚ್ಛವಾಗಿದ್ದವು ಎಂಬುದನ್ನು ಮತ್ತೆ ತೋರಿಸಿದ್ದಾರೆ.
ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ರೈಲ್ವೆ ಸಿಬ್ಬಂದಿಯ ಜವಾಬ್ದಾರಿ ಮಾತ್ರ ಅಲ್ಲ, ಇದು ಪ್ರಯಾಣಿಕರ ನಾಗರಿಕ ಪ್ರಜ್ಞೆಯನ್ನು ತೋರಿಸುತ್ತದೆ. ಪ್ರಯಾಣಿಕರು ಕಸ ಹಾಕುವುದನ್ನು ತಪ್ಪಿಸಿದಾಗ ಮತ್ತು ಸೌಲಭ್ಯಗಳನ್ನು ಜವಾಬ್ದಾರಿಯುತವಾಗಿ ಬಳಸಿದಾಗ, ಸಾಮಾನ್ಯ ರೈಲನ್ನು ಸ್ವಚ್ಛವಾಗಿ ಇಡಬಹುದು ಅಂದರು.
ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು "ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ಜನರಲ್ಲಿ ನಾಗರಿಕ ಪ್ರಜ್ಞೆ ಹೆಚ್ಚಾಗಿದೆ" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಭಾರತೀಯರಾದ ನಾವು ಪರಸ್ಪರ ಹೋಲಿಕೆ ಮಾಡುವುದನ್ನು ನಿಲ್ಲಿಸಿ, ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ.