ನವದೆಹಲಿ,ಜ.18: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪುಟ್ಟ ಮಗುವಿನೊಂದಿಗೆ ನಡೆಸಿರುವ ವಿಡಿಯೊವೊಂದು ನೆಟ್ಟಿಗರ ಮನ ಗೆದ್ದಿದೆ. ಯೋಗಿ ಆದಿತ್ಯನಾಥ್ (Viral Video) ಕುರ್ಚಿಯಲ್ಲಿ ಕುಳಿತಿದ್ದು, ಅವರ ಪಕ್ಕದಲ್ಲಿ ನಿಂತಿದ್ದ ಮಗುವಿಗೆ ನಿನಗೆ ಏನು ಬೇಕು ಎಂದು ಕೇಳುವ ಮೂಲಕ ಬಾಲಕನ ಪುಟ್ಟ ಆಸೆಯನ್ನು ನೆರವೇರಿಸಿದ್ದಾರೆ. ಸದ್ಯ ಪುಟ್ಟ ಬಾಲಕನ ನಡುವಿನ ಮುದ್ದಾದ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಮಗುವಿನೊಂದಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಹೃದಯಸ್ಪರ್ಶಿ ಕ್ಷಣವು ಎಲ್ಲರನ್ನೂ ನಗುವಂತೆ ಮಾಡಿದೆ. ಕ್ಲಿಪ್‌ನಲ್ಲಿ, ಸಿಎಂ ಮಗುವಿನ ಪಕ್ಕದಲ್ಲಿ ಕುಳಿತಿದ್ದರು ಮತ್ತು ನಿಧಾನವಾಗಿ ಬಾಲಕನ ಬಳಿ ನಿನೇಗೇನು ಬೇಕು ಎಂದು ಕೇಳಿದ್ದರು. ಮಗು ತನ್ನ ಬೇಡಿಕೆಯನ್ನು ಹಂಚಿಕೊಳ್ಳಲು ನಾಚಿಕೆಪಡುತ್ತಾ, "ಚಿಪ್ಸ್" ಎಂದು ಸಿಎಂ ಕಿವಿಯಲ್ಲಿ ಪಿಸುಗುಟ್ಟಿತ್ತು.ಆರಂಭದಲ್ಲಿ ಬಾಲಕನ ಮಾತು ಸಿಎಂಗೆ ಕೇಳಿಸದಿದ್ದರು ಕೊನೆಗೆ ಪುಟ್ಟ ಬಾಲಕ ಏನು ಹೇಳುತ್ತಿದ್ದಾನೆ ಎಂದು ಅರ್ಥ ಮಾಡಿಕೊಂಡ ನಂತರ ಮುಖ್ಯಮಂತ್ರಿ ಮನಸಾರೆ ನಕ್ಕಿದ್ದರು.
ವಿಡಿಯೋ ನೋಡಿ:
ಈಗ ಆ "ಚಿಪ್ಸ್ ಡೀಲ್" ಪೂರ್ಣಗೊಂಡಿರುವ ವಿಡಿಯೊ ವೈರಲ್ ಆಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಾಲಕನ ಪುಟ್ಟ ಬೇಡಿಕೆಯನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ಈಡೇರಿಸಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.ಹೊಸ ವಿಡಿಯೋದಲ್ಲಿ ಸಿಎಂ ಯೋಗಿ ಅವರು ಬಾಲಕನಿಗೆ ಚಿಪ್ಸ್ ಪ್ಯಾಕೆಟ್ ನೀಡುತ್ತಾ ಹರಸಿದ್ದಾರೆ. ಚಿಪ್ಸ್ ನೀಡುವಾಗ ಸಿಎಂ ಬಾಲಕನಿಗೆ ಸರಿಯಾಗಿ ಓದಬೇಕು ಎಂದು ಸಲಹೆ ನೀಡಿದ್ದಾರೆ"ಓದುತ್ತೀಯಲ್ಲವೇ?" ಎಂದು ಸಿಎಂ ಪುನಃ ಕೇಳಿದಾಗ, ಹುಡುಗ ಉತ್ಸಾಹದಿಂದ ತಲೆಯಾಡಿಸುತ್ತಾನೆ.
Viral Video: ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಹಸುವಿಗೆ ಚಿಕನ್ ಮೋಮೋಸ್ ತಿನ್ನಿಸಿದ ಯುವಕ! ವ್ಯಾಪಕ ಆಕ್ರೋಶ
ವೀಡಿಯೊದಲ್ಲಿ ಮಗುವಿನೊಂದಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಹೃದಯಸ್ಪರ್ಶಿ ಕ್ಷಣವು ಎಲ್ಲರನ್ನೂ ನಗುವಂತೆ ಮಾಡಿತ್ತು. ಈ ಸಂಭಾಷಣೆ ಅಲ್ಲಿದ್ದವರ ಮುಖದಲ್ಲಿ ನಗು ತರಿಸಿದ್ದು ಈ ವಿಡಿಯೋಗೆ ನೆಟ್ಟಿಗರು ತಮಾಷೆಯ ಮತ್ತು ಪ್ರೀತಿಯ ಕಾಮೆಂಟ್‌ಗಳ ಸುರಿಮಳೆ ಗೈದಿದ್ದಾರೆ. ಕೆಲವರು ಮಗುವಿನ ಮುದ್ದಾದ ಬೇಡಿಕೆಯ ಬಗ್ಗೆ ತಮಾಷೆ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ "ದೇವರಿಗೆ ಧನ್ಯವಾದಗಳು ಆತ ಚಿಪ್ಸ್ ಕೇಳಿದ್ದು ಪುಣ್ಯ ಕ್ಯಾಬಿನೆಟ್‌ನಲ್ಲಿ ಯಾವುದೇ ಹುದ್ದೆಯನ್ನು ಕೇಳಲಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಇನ್ನ ಚಿಪ್ಸ್' ಬೆಲೆ ಏರಬಹುದು ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ.