ನೋಯ್ಡಾ,ಮಾ.29: ಖಾಸಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ನಡುವೆ ನಡೆದ ಭೀಕರ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕವಾಗಿ ಇಬ್ಬರು ಹುಡುಗಿಯರು ಪರಸ್ಪರ ಕೂದಲು ಹಿಡಿದು ಎಳೆದಾಡಿ, ಕೆನ್ನೆಗೆ ಬಾರಿಸಿ ಕೊಳ್ಳುತ್ತಿರುವ ದೃಶ್ಯ ವೈರಲ್ (Viral News) ಆಗಿದೆ.
ನೋಯ್ಡದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದಲ್ಲಿ ಈ ಘಟನೆ ಕಂಡು ಬಂದಿದೆ. ಮಾಹಿತಿಯ ಪ್ರಕಾರ ಪ್ರೇಮ ಪ್ರಕರಣವೇ ಜಗಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಒಬ್ಬ ವಿದ್ಯಾರ್ಥಿಯೂ ಅಪ್ತ ಗೆಳತಿಯ ಪ್ರಿಯಕರನನ್ನೇ ಪ್ರೀತಿಸಿದ್ದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ.
ವಿಡಿಯೋ ನೋಡಿ:
ಮೊದಲಿಗೆ ಸಾಮಾನ್ಯವಾಗಿ ಜಗಳ ಆರಂಭವಾಗಿದ್ದು ಬಳಿಕ ಕಾಲೇಜು ಆವರಣದಲ್ಲಿಯೆ ಹೊಡೆದಾಡಿಕೊಂಡಿದ್ದಾರೆ. ಆದಾಗ್ಯೂ, ವಿಶ್ವವಿದ್ಯಾನಿಲಯದ ಅಧಿಕಾರಿಗಳಿಂದ ಇನ್ನೂ ಯಾವುದೇ ದೃಢೀಕರಣ ಬಂದಿಲ್ಲ. ಜಗಳದ ವೀಡಿಯೊವನ್ನು ಅಲ್ಲಿದ್ದವರು ಸೆರೆಹಿಡಿದಿದ್ದಾರೆ.
Viral News: ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ತನ್ನ ಭೂಮಿಯನ್ನೇ ಗಿಫ್ಟ್ ಕೊಟ್ಟ ಹಿಂದೂ ವ್ಯಕ್ತಿ!
ವೈರಲ್ ಆದ ವಿಡಿಯೋದಲ್ಲಿ ವಿದ್ಯಾರ್ಥಿಗಳು ಪರಸ್ಪರ ಜುಟ್ಟು ಹಿಡಿದಿರುವುದು, ಕಪಾಳ ಮೋಕ್ಷ ಮಾಡಿರುವುದು ಕಂಡು ಬಂದಿದೆ. ವಿಶೇಷವೆಂದರೆ, ಅಲ್ಲಿದ್ದ ಇತರ ವಿದ್ಯಾರ್ಥಿಗಳು ಜಗಳ ಬಿಡಿಸುವ ಬದಲು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೊ ಚಿತ್ರಿಕರಿಸುತ್ತಿದ್ದಾರೆ. ಅಲ್ಲಿದ್ದ ಒಬ್ಬ ವಿದ್ಯಾರ್ಥಿ ಮಾತ್ರ ಜಗಳ ಬೀಡಿಸಲು ಹೋಗಿದ್ದಾನೆ.
ಈ ಕ್ಲಿಪ್ ಸಾವಿರಾರು ವೀಕ್ಷಣೆಗಳನ್ನು ಗಳಿಸಿದ್ದು ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿದೆ. ಬಳಕೆದಾರರೊಬ್ಬರು ಇಲ್ಲಿ ಓದು ಮುಖ್ಯವಲ್ಲ..ಪ್ರೀತಿಗೆ ಮೊದಲ ಆಯ್ಕೆ ಎಂದು ಬರೆದಿದ್ದಾರೆ ಇನ್ನು ಕೆಲವರು ಶಿಕ್ಷಣ ಸಂಸ್ಥೆಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಆಕ್ರೋಶ ಹೊರಹಾಕಿದ್ದಾರೆ.