ಬೆಂಗಳೂರು, ಫೆ. 25: ಇತ್ತೀಚೆಗೆ ಖಾಸಗಿ ಬಸ್‌ನಲ್ಲಿ ಮಹಿಳೆಯರಿಗೆ ಕಿರುಕುಳ ಆಗಿರುವ ಅನೇಕ ಘಟನೆಗಳು ನಡೆದಿವೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಿಂದ (Bengaluru) ಪ್ರಯಾಣಿಸುತ್ತಿದ್ದ ಯುವ ಜೋಡಿಗೆ ಬಸ್ ಕಂಡಕ್ಟರ್ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ಒಂದೇ ಬರ್ತ್ ಬುಕ್ ಮಾಡಿದ್ದ ಯುವಕ ಮತ್ತು ಯುವತಿ ಪ್ರತ್ಯೇಕವಾಗಿ ಸೀಟ್‌ನಲ್ಲಿ ಕುಳಿತುಕೊಳ್ಳಬೇಕೆಂದು ಕಂಡಕ್ಟರ್ ಒತ್ತಾಯಿಸಿದ್ದು ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನೈತಿಕ ಪೊಲೀಸ್‌ಗಿರಿಗೆ ಯುವ ಬೇಸರ ಹೊರ ಹಾಕಿದ್ದಾನೆ.
ಬೆಂಗಳೂರಿನಿಂದ ತೆರಳಿದ ಖಾಸಗಿ ಸ್ಲೀಪರ್ ಬಸ್‌ನಲ್ಲಿದ್ದ 22 ವರ್ಷದ ಯುವಕನೊಬ್ಬ ತೊಂದರೆಗೊಳಗಾದ ಅನುಭವವನ್ನು ಶೇರ್ ಮಾಡಿಕೊಂಡಿದ್ದಾನೆ. ಯುವಕ ತನ್ನ ಸ್ನೇಹಿತೆಯೊಂದಿಗೆ ಪ್ರಯಾಣಿಸಿದ್ದು, ಹೆಚ್ಚುವರಿ ಸ್ಥಳಕ್ಕಾಗಿ ಇಬ್ಬರೂ ಮೂರು ಸೀಟ್‌ಗಳನ್ನು ಬುಕ್ ಮಾಡಿದ್ದ. ಆದಾಗ್ಯೂ, ಬಸ್ ಕಂಡಕ್ಟರ್ ಪ್ರತ್ಯೇಕವಾಗಿ ಕುಳಿತುಕೊಳ್ಳಬೇಕೆಂದು ಆಗ್ರಹಿಸಿದ್ದು, ಪೊಲೀಸರಿಗೆ ದೂರು ನೀಡುವುದಾಗಿ ಮತ್ತು ಪೋಷಕರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವಕ ಆರೋಪಿಸಿದ್ದಾನೆ. ಯುವಕ ಮತ್ತು ಯುವತಿ ಒಟ್ಟಿಗೆ ಕುಳಿತು ಮಾತನಾಡುತ್ತಿರುವಾಗ ಇದನ್ನು ಗಮನಿಸಿದ ಕಂಡಕ್ಟರ್, ಇಬ್ಬರೂ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಬೆದರಿಕೆ ಹಾಕಿದ್ದಾನೆ.
ವೈರಲ್ ಪೋಸ್ಟ್:
We booked sleeper berths on a Bangalore bus and got threatened with “police” common?
by u/Frost_Mz-4 in bangalore
ಯುವಕ ಈ ಬಗ್ಗೆ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದು ಕಂಡಕ್ಟರ್ ವರ್ತನೆ ತನಗೆ ಬೇಸರ ಉಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ʼʼಬೆಂಗಳೂರಿನಿಂದ ಹೊರಟ ಖಾಸಗಿ ಸ್ಲೀಪರ್ ಬಸ್‌ನಲ್ಲಿ ವಿಚಿತ್ರ ಅನುಭವವಾಯಿತು. ನಾವು ಎಸಿ ಸ್ಲೀಪರ್‌ನಲ್ಲಿ 3 ಲೋವರ್ ಸ್ಲೀಪರ್ ಬರ್ತ್‌ಗಳನ್ನು ಬುಕ್ ಮಾಡಿದ್ದೇವೆ. ಹೆಚ್ಚುವರಿ ಸ್ಥಳಾವಕಾಶ ಸಿಗುತ್ತದೆ ಎನ್ನುವ ಕಾರಣಕ್ಕೆ ಮೂರು ಸೀಟ್ ಬುಕ್ ಮಾಡಿದ್ದೆವು. ಆದರೆ ಕಂಡಕ್ಟರ್ ಅದನ್ನು ಗಮನಿಸಿ ಮೊದಲು ನಮ್ಮನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳಲು ಹೇಳಿದ.ು ನಾವು ತಕ್ಷಣ ಹೋಗದೆ ಇರದ್ದಾಗ ಪೋಷಕರಿಗೆ ಕರೆ ಮಾಡುವುದಾಗಿ, ಪೊಲೀಸರಿಗೆ ವರದಿ ಮಾಡುವುದಾಗಿ ಹೇಳಲು ಪ್ರಾರಂಭಿಸಿದರು. ಅವರು ಅನಗತ್ಯವಾಗಿ ಬೆದರಿಸಿದ್ದಾರೆʼʼ ಎಂದಿದ್ದಾರೆ.
ಪುರುಷತ್ವ ಪರೀಕ್ಷೆ ಮಾಡಿಸಲು ಪತಿ ನಕಾರ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
ಯಾವುದೇ ಗಲಾಟೆ ಬೇಡವೆಂದು ಕೊನೆಗೆ ಯುವಜೋಡಿ ಕಂಡಕ್ಟರ್ ಹೇಳಿದಂತೆ ಪ್ರತ್ಯೇಕವಾಗಿ ಕುಳಿತುಕೊಂಡಿದೆ. ಆದರೆ ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಬೆಂಗಳೂರು ಅಥವಾ ಕರ್ನಾಟಕದಲ್ಲಿ ಖಾಸಗಿ ಬಸ್‌ಗಳು ಸಾಮಾನ್ಯವಾಗಿ ಇಂತಹ ನಿಯಮಗಳನ್ನು ಹೊಂದಿವೆಯೇ ಎಂದು ಯುವಕ ಪ್ರಶ್ನಿಸಿದ್ದಾನೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ತಮ್ಮ ಅನುಭವಗಳನ್ನು ಶೇರ್ ಮಾಡಿದ್ದಾರೆ.
ಇಬ್ಬರು, ʼʼನೀವು ಹಣ ಕೊಟ್ಟು ಟಿಕೆಟ್ ಮಾಡಿದಾಗ ನಿಮಗೆ ಪ್ರಶ್ನೆ ಮಾಡುವ ಹಕ್ಕು ಇತ್ತುʼʼ ಎಂದಿದ್ದಾರೆ. ಮತ್ತೊಬ್ಬರು ʼʼಖಾಸಗಿ ಬಸ್‌ಗಳಲ್ಲಿ ಇಂತಹ ಸಮಸ್ಯೆ ಉಂಟಾದರೆ ಸಹಾಯವಾಣಿಗೆ ಕರೆ ಮಾಡಿʼʼ ಎಂದು ಸಲಹೆ ನೀಡಿದ್ದಾರೆ.