ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದ್ಯ ಸೇವಿಸಿ ಬಸ್ ಹತ್ತಲು ಬಂದ ವ್ಯಕ್ತಿಯನ್ನು ನಡುರಸ್ತೆಗೆ ಎಳೆದು ಥಳಿಸಿದ ಸರ್ಕಾರಿ ಬಸ್‌ ಚಾಲಕ, ನಿರ್ವಾಹಕ; ವಿಡಿಯೊ ವೈರಲ್‌

Viral News: ಬಸ್ ಹತ್ತಲು ಯತ್ನಿಸುತ್ತಿದ್ದ ಪಾನಮತ್ತ ಪ್ರಯಾಣಿಕನೊಬ್ಬನನ್ನು ಬಸ್ ಚಾಲಕ ಮತ್ತು ಅದರ ನಿರ್ವಾಹಕ ಒದ್ದು ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಆ ವ್ಯಕ್ತಿ ತೀವ್ರವಾಗಿ ಕುಡಿದ್ದಿದ್ದರಿಂದಲೇ ಹಲ್ಲೆ ನಡೆಸಲಾಗಿದೆ ಎಂದು ಡ್ರೈವರ್‌ ಮತ್ತು ಕಂಡೆಕ್ಟರ್‌ ಸಮರ್ಥಿಸಿಕೊಂಡಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಬಸ್‌ ಚಾಲಕ, ನಿರ್ವಾಹಕ

ಚೆನ್ನೈ, ಅ. 22: ತಮಿಳುನಾಡಿನ ತಿರುಪ್ಪೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಸ್ ಹತ್ತಲು ಯತ್ನಿಸುತ್ತಿದ್ದ ಪಾನಮತ್ತ ಪ್ರಯಾಣಿಕನೊಬ್ಬನನ್ನು ಎಳೆದು ಚಾಲಕ ಮತ್ತು ನಿರ್ವಾಹಕ ಒದ್ದು ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಆ ವ್ಯಕ್ತಿ ತೀವ್ರವಾಗಿ ಕುಡಿದ್ದಿದ್ದರಿಂದಲೇ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಕಂಡಕ್ಟರ್ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

​ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಕಂಗೇಯಂ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಸ್ ಹತ್ತಲೆಂದು ಮಳೆಯ ನಡುವೆ ಬಸ್ ಪ್ರವೇಶದ್ವಾರದ ಬಳಿ ವ್ಯಕ್ತಿಯೊಬ್ಬ ನಿಂತಿದ್ದ.‌ ಆದರೆ ಕುಡಿತದ ಮತ್ತಿನಲ್ಲಿ ನಿಲ್ಲಲು ಸಾಧ್ಯವಾಗದೇ ನಡುಗುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಾನಮತ್ತ ವ್ಯಕ್ತಿಯ ಮೇಲೆ ಹಲ್ಲೆಯ ದೃಶ್ಯ:



ಆತ ಬಸ್‌ ದ್ವಾರದ ಬಳಿ ಬಂದು ಹತ್ತಲು ಪ್ರಯತ್ನಿಸುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ಚಾಲಕ ರಸ್ತೆ ಎಳೆದು ಹಾಕಿ ಏಕಾಏಕಿ ಆತನ ಎದೆಗೆ ಬಲವಾಗಿ ಒದ್ದಿದ್ದಾನೆ. ರಭಸದ ಒದೆಗೆ ಆ ವ್ಯಕ್ತಿ ನೇರವಾಗಿ ರಸ್ತೆ ಮಧ್ಯೆ ಬಿದ್ದಿದ್ದಾನೆ.‌ ಅಲ್ಲದೆ ಚಾಲಕನು ಕೂಗಾಡುತ್ತಾ ಹೋಗು ಆಚೆ ಅಂತ ಆಕ್ರೋಶದಿಂದ ಹೇಳುವುದೂ ವಿಡಿಯೊದಲ್ಲಿ ಕಂಡುಬಂದಿದೆ.

ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್‌ ನಾಗರಹಾವು

ಕಂಡಕ್ಟರ್ ಕೆಳಗೆ ಬಿದ್ದು ಒದ್ದಾಡುತ್ತಿದ್ದ ಆ ವ್ಯಕ್ತಿಯ ಮುಖಕ್ಕೆ ಕಾಲಿನಿಂದ ಒದೆದು ಅಮಾನುಷವಾಗಿ ನಡೆದುಕೊಂಡಿದ್ದಾನೆ. ವಾಹನವು TN 38 N 2986 ನೋಂದಣಿ ಸಂಖ್ಯೆಯನ್ನು ಹೊಂದಿರುವ ಸರ್ಕಾರಿ ಬಸ್ ಎಂದು ಪೊಲೀಸರು ಗುರುತಿಸಿದ್ದಾರೆ. ''ನಾವು ತನಿಖೆಗೆ ಆದೇಶ ನೀಡಿದ್ದೇವೆ. ಅದು ಏನೇ ಇರಲಿ, ಸಿಬ್ಬಂದಿ ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಬೇಕಾಗಿತ್ತು. ಅವರು ಆತನ ಮೇಲೆ ಹಲ್ಲೆ ನಡೆಸಬಾರದಿತ್ತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಕ್ತಿಗೆ ಗಾಯಗಳಾಗಿದೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ​ಕುಡಿದವರನ್ನು ತಡೆಯಲು ಕಾನೂನು ಇದೆ, ಪೊಲೀಸರಿದ್ದಾರೆ. ಬಸ್ ಸಿಬ್ಬಂದಿಯೇ ಈ ರೀತಿ ರಸ್ತೆಗಿಳಿದು ಹಲ್ಲೆ ಮಾಡುವುದು ಎಷ್ಟರ ಮಟ್ಟಿಗೆಸರಿ? ಎಂದು ಆಕ್ರೋಶ ಹೊರಹಾಕಿದ್ದಾರೆ.