ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ; ಬಿಜೆಪಿ ಸಚಿವನ ಮನೆಯ ನಾಮಫಲಕಕ್ಕೆ ಮಸಿ ಬಳಿದ ಕಾಂಗ್ರೆಸ್ ನಾಯಕ

ಕರ್ನಲ್ ಸೋಫಿಯಾ ಖುರೇಷಿ ಅವರನ್ನು 'ಪಾಕಿಸ್ತಾನಿಗಳ ಸಹೋದರಿ' ಎಂದು ಟೀಕಿಸಿದ್ದಕ್ಕೆ ಬಿಜೆಪಿ ಸಚಿವ ವಿಜಯ್ ಶಾ ಮನೆಯ ನಾಮಫಲಕಕ್ಕೆ ಕಾಂಗ್ರೆಸ್ ನಾಯಕ ಮನೋಜ್ ಶುಕ್ಲಾ ಕಪ್ಪು ಮಸಿ ಬಳಿದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪರಿಸ್ಥಿತಿಯನ್ನು ಶಾಂತಗೊಳಿಸಲು ಶಾ ಅವರು ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.

ಭೋಪಾಲ್: ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಮಧ್ಯ ಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ದೇಶಾದ್ಯಂತ ಟೀಕೆಗೆ ಗುರಿಯಾಗಿದ್ದಾರೆ. ಭಾರತದ ಧೈರ್ಯಶಾಲಿ ಸೇನಾಧಿಕಾರಿ ವಿರುದ್ಧ ಅವಮಾನಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮನೋಜ್ ಶುಕ್ಲಾ, ಸಚಿವ ಶಾ ಅವರ ನಿವಾಸದಲ್ಲಿದ್ದ ನಾಮಫಲಕಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಮಂಗಳವಾರ(ಮೇ 13) ರಾತ್ರಿ ಕಾಂಗ್ರೆಸ್ಸಿಗ ಶುಕ್ಲಾ ತಮ್ಮ ಬೆಂಬಲಿಗರೊಂದಿಗೆ ಭೋಪಾಲ್‌ನಲ್ಲಿರುವ ಶಾ ನಿವಾಸದ ಹೊರಗೆ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಕಾಂಗ್ರೆಸ್ ನಾಯಕ ಮನೋಜ್ ಶುಕ್ಲ ಅವರು ವಿಜಯ್ ಶಾ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದ ಮ್ಹೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಜಯ್ ಶಾ ಮಾತನಾಡುತ್ತಾ, ಕರ್ನಲ್ ಸೋಫಿಯಾ ಅವರನ್ನು 'ಪಾಕಿಸ್ತಾನಿಗಳ ಸಹೋದರಿ' ಎಂದು ಕರೆದಿದ್ದರು. ಅವರ ಭಾಷಣದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕೂಡಲೇ ವೈರಲ್ ಆಗಿ ನೆಟಿಜನ್‌ಗಳು ಮಾತ್ರವಲ್ಲದೆ, ಹಿರಿಯ ರಾಜಕೀಯ ಮುಖಂಡರು ಮತ್ತು ಪತ್ರಕರ್ತರು ಶಾ ಅವರನ್ನು ಟೀಕಿಸಿದ್ದಾರೆ.

ವಿಡಿಯೊ ನೋಡಿ...



ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಕೂಡ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಈ ಹೇಳಿಕೆಯನ್ನು "ಅವಮಾನಕರ, ಕೋಮುವಾದಿ ಹೇಳಿಕೆ" ಎಂದು ಬಣ್ಣಿಸಿದ್ದಾರೆ. ಹಾಗೇ ಶಾ ಅವರ ವಿಡಿಯೊಗೆ ನೆಟಿಜನ್‍ಗಳು ನಕರಾತ್ಮಕವಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅವರನ್ನು ವಜಾಗೊಳಿಸಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಹಾಗೇ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ. ಶರ್ಮಾ ಭರವಸೆ ನೀಡಿದ್ದಾರೆ.

ಶಾ ತನ್ನ ಹೇಳಿಕೆಯ ಬಗ್ಗೆ ಅನೇಕ ಬಾರಿ ಕ್ಷಮೆಯಾಚಿಸುವ ಮೂಲಕ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ. "ಸಿಸ್ಟರ್ ಸೋಫಿಯಾ ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿ ಭಾರತಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ. ನಮ್ಮ ಸಹೋದರಿಯರಿಗಿಂತಲೂ ಅವರಿಗೆ ಹೆಚ್ಚಿನ ಗೌರವವಿದೆ. ಅವರ ದೇಶ ಸೇವೆ ಮತ್ತು ಸಮರ್ಪಣೆಗೆ ನಾನು ಪೂರ್ಣ ಹೃದಯದಿಂದ ನಮಸ್ಕರಿಸುತ್ತೇನೆ. ನಾವು ಕನಸಿನಲ್ಲಿಯೂ ಸಹ ಅವರನ್ನು ಅಗೌರವಿಸುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೂ ನನ್ನ ಮಾತುಗಳಿಂದ ಸಮಾಜ ಅಥವಾ ಧಾರ್ಮಿಕ ಭಾವನೆಗಳಿಗೆ ಯಾವುದೇ ನೋವುಂಟಾಗಿದ್ದರೆ, ನಾನು ಒಮ್ಮೆ ಅಲ್ಲ, ಹತ್ತು ಬಾರಿ ಕ್ಷಮೆಯಾಚಿಸಲು ಸಿದ್ಧನಿದ್ದೇನೆ" ಎಂದು ಅವರು ಮತ್ತೊಂದು ಹೇಳಿಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನೆದರ್‌ಲ್ಯಾಂಡ್‌ ಖರೀದಿಸಿದ ಟಾಪ್‌ಗೆ.. ಇಡೀ ಪ್ರಪಂಚ ಹುಡುಕಿದ್ರೂ ಸಿಗದ ಮ್ಯಾಚಿಂಗ್‌ ಸ್ಕರ್ಟ್‌ ಸಿಕ್ಕಿದ್ದೆಲ್ಲಿ ಗೊತ್ತಾ? ಈ ವೈರಲ್‌ ವಿಡಿಯೊ ನೋಡಿ

ಈ ವಿಷಯ ಎಷ್ಟು ವೈರಲ್ ಆಗಿದೆ ಎಂದರೆ ಎಐ ಕೂಡ ಅದನ್ನು ಗುರುತಿಸಿದೆ. ಸಚಿವ ವಿಜಯ್ ಶಾ ಅವರ ಹೇಳಿಕೆಯ ವಿರುದ್ಧ ಅಂತರ್ಜಾಲದಲ್ಲಿ ನೆಟ್ಟಿಗರು ಖಂಡನೆ ವ್ಯಕ್ತಪಡಿಸುತ್ತಿದ್ದಂತೆ, ಘಟನೆಯನ್ನು ದೃಢೀಕರಿಸುವಲ್ಲಿ ಮತ್ತು ಬಳಕೆದಾರರ ನಕಾರಾತ್ಮಕ ಪ್ರತಿಕ್ರಿಯೆಯನ್ನು ಅಂಗೀಕರಿಸುವಲ್ಲಿ ಕೃತಕ ಬುದ್ಧಿಮತ್ತೆ ಕೂಡ ತನ್ನ ಪಾತ್ರವನ್ನು ವಹಿಸಿದೆ ಎನ್ನಲಾಗಿದೆ.