ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 9 ತಿಂಗಳ ಮಗುವನ್ನು ಎತ್ತಿಕೊಂಡು ಡೇಂಜರಸ್‌ ಬೆಟ್ಟ ಹತ್ತಿದ ಜೋಡಿ; ನೆಟ್ಟಿಗರು ಫುಲ್‌ ಶಾಕ್‌!

Couple defy warnings: ಎಲ್ಲಾ ಸುರಕ್ಷತಾ ಮಾರ್ಗದರ್ಶಿಗಳನ್ನು ನಿರ್ಲಕ್ಷಿಸಿದ್ದ ದಂಪತಿಗಳೊಂದು ತಮ್ಮ 9 ತಿಂಗಳ ಮಗುವಿನ ಸಹಿತ ಪೋಲಂಡ್‍ನ ಅತಿ ಎತ್ತರದ ಶಿಖರವಾದ ಮೌಂಟ್ ರೈಸಿಯನ್ನು ಹತ್ತಲು ಪ್ರಯತ್ನಿಸಿದ್ದಾರೆ. ಕೊನೆಗೆ ತಮ್ಮ ಮಗುವನ್ನು ಅಪಾಯಕಾರಿ ಪರಿಸ್ಥಿತಿಗೆ ಸಿಲುಕಿಸಿದ್ದಾರೆ.

ಮಗುವಿನೊಂದಿಗೆ ಅಪಾಯಕಾರಿಯಾಗಿ ಎತ್ತರದ ಶಿಖರ ಹತ್ತಿದ ಹತ್ತಿದ ದಂಪತಿ

-

Priyanka P Priyanka P Oct 22, 2025 2:56 PM

ವಾರ್ಸಾ: ಜಗತ್ತಿನಲ್ಲಿ ಹಲವಾರು ಮಂದಿಗೆ ಏನಾದರೂ ಸಾಹಸ ಮಾಡಬೇಕು ಎಂದ ಆಸೆಯಿರುತ್ತದೆ. ಕೆಲವರು ಇದಕ್ಕಾಗಿ ಕಠಿಣ ಪರಿಶ್ರಮ ಮಟ್ಟು, ಸುರಕ್ಷತಾ ಮಾರ್ಗದರ್ಶಿಗಳನ್ನು ಅಳವಡಿಸಿಕೊಂಡು ಇಂತಹ ಸಾಹಸ ಮಾಡಲು ಮುಂದಾಗುತ್ತಾರೆ. ಆದರೆ, ಪೋಲೆಂಡ್ (Poland) ದಂಪತಿಗಳೊಂದು ಅಜಾಗರೂಕತೆಯಿಂದ ತಮ್ಮ 9 ತಿಂಗಳ ಮಗುವಿನ ಸಹಿತ ಅತಿ ಎತ್ತರದ ಶಿಖರವಾದ ಮೌಂಟ್ ರೈಸಿಯನ್ನು ಹತ್ತಲು ಪ್ರಯತ್ನಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ಹವಾಮಾನ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದ್ದರೂ, ಎಲ್ಲಾ ಎಚ್ಚರಿಕೆಗಳನ್ನು ಧಿಕ್ಕರಿಸಿ ಪರ್ವಾತರೋಹಣ ಮಾಡಲು ಮುಂದಾಗಿದ್ದಾರೆ. ಕೊನೆಗೆ ಇಳಿಯಲು ಸಾಧ್ಯವಾಗದೆ ತೊಂದರೆಗೊಳಗಾಗಿದ್ದಾರೆ. ಪರ್ವತ ಮಾರ್ಗದರ್ಶಿಯೊಬ್ಬರು ಮಗುವನ್ನು ರಕ್ಷಿಸಿದ್ದಾರೆ. ಈ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಗುವನ್ನು ಅಪಾಯಕ್ಕೆ ಸಿಲುಕಿಸಿದ ಪೋಷಕರ ಅಜಾಗರೂಕತೆಯನ್ನು ಅನೇಕರು ಪ್ರಶ್ನಿಸಿದ್ದಾರೆ.

ರೈಸಿ ಪರ್ವತದ ಮೇಲಿನ ಪರಿಸ್ಥಿತಿಗಳು ಅಪಾಯಕಾರಿಯಾಗಿದ್ದವು. ಆದರೂ, ದಂಪತಿಗಳು ಮಾತ್ರ ಮಾರ್ಗದರ್ಶಕರು ಮತ್ತು ರಕ್ಷಕರು ಪದೇ ಪದೇ ಹೇಳಿದ್ದ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದರು. ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ, ಮಂಜುಗಟ್ಟಿದ ಶಿಖರವನ್ನು ಏರುವ ಅವರ ಪ್ರಯತ್ನವು ಅಪಾಯಕಾರಿಯಾಯಿತು. ಪತಿಗೆ ತಾನು ಕಷ್ಟವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಅರಿವಾದಾಗ, ಆತ ಪರ್ವತ ಮಾರ್ಗದರ್ಶಕರಿಂದ ಕ್ರ್ಯಾಂಪನ್‌ಗಳನ್ನು ಪಡೆಯಲು ಪ್ರಯತ್ನಿಸಿದನು. ನಂತರ ಅವನು ತಮ್ಮ ಮಗುವನ್ನು ಸುರಕ್ಷಿತವಾಗಿ ಹೊತ್ತೊಯ್ದನು.

ವಿಡಿಯೊ ವೀಕ್ಷಿಸಿ:



ಇದನ್ನೂ ಓದಿ: Viral News: ಇಲ್ಲಿ ಆಫೀಸ್‌ ಮೀಟಿಂಗ್‌ ಬೆತ್ತಲೆಯಾಗಿ ನಡೆಯುತ್ತದೆ; ವಿಶ್ವದಲ್ಲೇ ಸಂತೋಷದ ಜನರಿರುವ ದೇಶವಂತೆ ಇದು!

ಘಟನೆಯ ನಂತರ ಕುಟುಂಬವು ಸುರಕ್ಷಿತವಾಗಿತ್ತು. ಇದು ವಿಡಿಯೊದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆಯು ನೆಟ್ಟಿಗರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಪೋಷಕರು ತಮ್ಮ ಮಗುವಿನ ಸುರಕ್ಷತೆಯನ್ನು ಪಣಕ್ಕಿಟ್ಟು ಇಂತಹ ಅಪಾಯಕಾರಿ ನಿರ್ಧಾರವನ್ನು ಏಕೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಮಗುವಿಗೆ ಹಾನಿಯಾಗದಂತೆ ಪ್ರಕೃತಿಯನ್ನು ಆನಂದಿಸಲು ಲೆಕ್ಕವಿಲ್ಲದಷ್ಟು ಮಾರ್ಗಗಳಿವೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅವರ ಜೀವ ಮಾತ್ರವಲ್ಲ, ಅವರು ಒಂದು ಮಗುವಿನ ಜೀವಕ್ಕೆ ಹೇಗೆ ಬೆದರಿಕೆ ಹಾಕಿದರು ಎಂಬುದು ನಂಬಲಸಾಧ್ಯ. ಪೊಲೀಸರು ಈ ದಂಪತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಒಂಬತ್ತು ತಿಂಗಳ ಮಗುವನ್ನು ಯಾವುದೇ ಸುರಕ್ಷತಾ ಸಲಕರಣೆಗಳಿಲ್ಲದೆ ಅಪಾಯಕಾರಿ ಬೆಟ್ಟಕ್ಕೆ ಕರೆತಂದಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.