ನವದೆಹಲಿ,ಜು.3: ಮಳೆಗಾಲದಲ್ಲಿ ವಾಹನ ಚಲಾಯಿಸುವಾಗ ಬಹಳಷ್ಟು ಜಾಗೃತಿಯನ್ನು ವಹಿಸಬೇಕಾಗುತ್ತದೆ. ಅದರಲ್ಲೂ ಅಲ್ಲಲ್ಲಿ ರಸ್ತೆಗಳ ಗುಂಡಿಯಿಂದಾಗಿ ಮುನ್ನೆಚ್ಚರಿಕೆಯಿಂದ ಪ್ರಯಾಣಿಸಬೇಕಾಗುತ್ತದೆ. ಇದೀಗ ಗುಜರಾತ್ ನ ಜುನಾಗಢ್ ನಲ್ಲಿ ಭಾರಿ ಮಳೆಯ ಪ್ರಭಾವದಿಂದ ಬೈಕ್ ನಲ್ಲಿ ಚಲಿಸುತ್ತಿದ್ದ ದಂಪತಿ ರಸ್ತೆಯ ಗುಂಡಿಗೆ ಬಿದ್ದ ಘಟನೆಯೊಂದು ನಡೆದಿದೆ. ಈ ದೃಶ್ಯವು (Viral News) ರಸ್ತೆ ಸುರಕ್ಷತೆ ಮತ್ತು ನಾಗರಿಕ ಮೂಲಸೌಕರ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕುವಂತೆ ಮಾಡಿದೆ.
ಗುಜರಾತ್‌ನ ಜುನಾಗಢ್‌ನಲ್ಲಿ ಈ ಅಘಾತಕಾರಿ ಘಟನೆಯೂ ನಡೆದಿದೆ..ಭಾರೀ ಮಳೆ ಬರುತ್ತಿದ್ದ ಸಂದರ್ಭದಲ್ಲಿ ದಂಪತಿಗಳು ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿದ್ದ ಸಣ್ಣ ಕೆರೆಯಂತಾಗಿದ್ದ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ವಿಡಿಯೋ ನೋಡಿ:
ತೀವ್ರವಾಗಿ ಮಳೆ ಬರುತ್ತಿದ್ದ ಕಾರಣ ರಸ್ತೆಯಲ್ಲಿ ದೊಡ್ಡದಾದ ಗುಂಡಿ ಇದ್ದಿದ್ದು ಬೈಕ್ ಸವಾರನಿಗೆ ತಿಳಿದಿರಲಿಲ್ಲ. ಬೈಕ್ ನ ಚಕ್ರ ಗುಂಡಿಗೆ ಸಿಲುಕಿದ್ದರಿಂದ ನಿಯಂತ್ರಣ ತಪ್ಪಿ ಇಬ್ಬರು ರಸ್ತೆಯ ಮೇಲೆ ಬಿದ್ದಿದ್ದಾರೆ..ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ, ಬೈಕ್ ಚಲಾ ಯಿಸುತ್ತಿದ್ದ ವ್ಯಕ್ತಿಯ ತಲೆ ರಸ್ತೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಪತಿಯೂ ರಸ್ತೆಯಿಂದ ಏಳಲು ಸಾಧ್ಯವಾಗದೆ ಅವರು ಒದ್ದಾಡುತ್ತಿರುವುದು ಮತ್ತು ಪತ್ನಿ ಅವರಿಗೆ ಸಹಾಯ ಮಾಡುತ್ತಿದ್ದ ದೃಶ್ಯ ವೈರಲ್ ಆಗಿದೆ.. ಅಲ್ಲಿ ಇದ್ದ ಕೆಲ ಸ್ಥಳೀಯರು ತಕ್ಷಣ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಬೇಸರದ ಸಂಗತಿ ಅಂದ್ರೆ ಅಲ್ಲೇ ಪೊಲೀಸರ ವಾಹನ ತಿರುಗಾಡುತ್ತಿದ್ದರೂ ಗಾಯಾಳುಗಳಿಗೆ ಸಹಾಯ ಮಾಡಲು ನಿಲ್ಲದೆ ಘಟನೆಯ ಸ್ಥಳದಲ್ಲಿ ಹಾದುಹೋಗುತ್ತಿರುವುದು ಕಂಡುಬಂದಿದೆ. ಸದ್ಯ ಪೊಲೀಸರ ಬೇಜವಾಬ್ದಾರಿತನಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬಂದಿದೆ. ಬಳಕೆದಾರರೊಬ್ಬರು ಪುರಸಭೆ ಮತ್ತು ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ರಕ್ಷಣೆ ನೀಡಬೇಕಾದ ಪೊಲೀಸರೆ ಈ ರೀತಿಯಾಗಿ ವರ್ತಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ..