Viral Video: ಆಟೋ ರಿಕ್ಷಾವನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ; ರಸ್ತೆ ಮಧ್ಯೆಯೇ ರೊಮ್ಯಾನ್ಸ್
ನಿಂತಿದ್ದ ಆಟೋಗೆ ಕರ್ಟನ್ ಮುಚ್ಚಿ ಯುವಕ-ಯುವತಿ ರೊಮ್ಯಾನ್ಸ್ ಮಾಡಿದ ಘಟನೆ ಆಂಧ್ರ ಪ್ರದೇಶದ ಏಲೂರು ನಗರದಲ್ಲಿ ನಡೆದಿದೆ. ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ, ಹಗಲಲ್ಲೇ ಕಂಡು ಬಂದ ಜೋಡಿಯ ಈ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿ ಕೆಲವರು ಪರಿಶೀಲಿಸಿದಾಗ ಕಾಮಕಾಂಡ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗಿದೆ.
ಆಟೋದಲ್ಲೇ ರೊಮ್ಯಾನ್ಸ್ ಮಾಡಿದ ಜೋಡಿ. -
ಅಮರಾವತಿ, ನ. 20: ಇತ್ತೀಚಿನ ದಿನಗಳಲ್ಲಿ ಯುವ ಜನತೆ ದಾರಿ ತಪ್ಪಿದೆ ಎನ್ನುವ ಮಾತು ಆಗಾಗ ಕೇಳಿ ಬರುತ್ತಲೇ ಇದೆ. ಅದರಲ್ಲಿಯೂ ಸಾರ್ವಜನಿಕ ಸ್ಥಳದಲ್ಲಿ ರೊಮ್ಯಾನ್ಸ್ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಚಲಿಸುವ ವಾಹನದಲ್ಲಿ ತಬ್ಬಿ ಮುತ್ತಿಡುವುದು, ಪಾರ್ಕ್‌ಗಳಲ್ಲಿ ಮಿತಿ ಮೀರಿ ವರ್ತಿಸುವುದು, ಬಸ್, ಮೆಟ್ರೋದಲ್ಲಿ ರೊಮ್ಯಾನ್ಸ್ ಮಾಡುವ ವಿಡಿಯೊ ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದೆ. ಕಾಮೋನ್ಮತ್ತ ಜೋಡಿಯೊಂದು ರಸ್ತೆಯಲ್ಲಿ ನಿಲ್ಲಿಸಿದ ಆಟೋದಲ್ಲಿ ಸರಸವಾಡುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ರಸ್ತೆ ಬದಿ ನಿಲ್ಲಿಸಿರುವ ಆಟೋಗೆ ಕರ್ಟನ್ ಅಳವಡಿಸಿ ಜೋಡಿ ಮೈಮರೆತು ಸರಸವಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವೇಳೆ ಡ್ರೈವರ್ ಸೀಟ್‌ನಲ್ಲಿ ಕುಳಿತ ವ್ಯಕ್ತಿಯೊಬ್ಬ ಕೆಲವು ಸೂಚನೆ ನೀಡುತ್ತಿರುವುದು ವಿಡಿಯೊದಲ್ಲಿ ಅಸ್ಪಷ್ಟವಾಗಿ ಕಂಡು ಬಂದಿದೆ.
ರಸ್ತೆಯಲ್ಲಿ ನಿಲ್ಲಿಸಿದ ಆಟೋದಲ್ಲಿ ಸರಸವಾಡುತ್ತಿರುವ ವಿಡಿಯೊ:
పరదాలు కట్టేసి ఆటోలో రోడ్డుపై జంట రొమాన్స్ pic.twitter.com/26WUahOrKG
— Zee Telugu News (@ZeeTeluguLive) November 19, 2025
ವಿಡಿಯೊದಲ್ಲಿ ಏನಿದೆ?
ನಿಂತಿದ್ದ ಆಟೋಗೆ ಕರ್ಟನ್ ಮುಚ್ಚಿ ಯುವಕ-ಯುವತಿ ರೊಮ್ಯಾನ್ಸ್ ಮಾಡಿದ ಈ ಘಟನೆ ಆಂಧ್ರ ಪ್ರದೇಶದ ಏಲೂರು ನಗರದಲ್ಲಿ ನಡೆದಿದೆ. ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ, ಹಗಲಲ್ಲೇ ಕಂಡು ಬಂದ ಜೋಡಿಯ ಈ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿ ಕೆಲವರು ಪರಿಶೀಲಿಸಿದಾಗ ಕಾಮಕಾಂಡ ಬೆಳಕಿಗೆ ಬಂದಿದೆ.
ರೈಲ್ವೇ ಬಾತ್‌ರೂಂನಲ್ಲಿ ಯುವಕ- ಯುವತಿಯ ರೊಮ್ಯಾನ್ಸ್!
ಚಾಲಕ ಮೊದಲ ಸೀಟ್‌ನಲ್ಲಿ ಕುಳಿತಿದ್ದರೆ ಈ ಜೋಡಿ ಹಿಂದಿನ್ ಸೀಟ್‌ನಲ್ಲಿ ಕಾಮಕೇಳಿಯಲ್ಲಿ ತೊಡಗಿಸಿಕೊಂಡಿತ್ತು. ಅನಾಮಾನಗೊಂಡ ಸ್ಥಳೀಯರು ಸುತ್ತವರಿಯುತ್ತಿದ್ದಂತೆ ಚಾಲಕ ಕೂಡಲೇ ರಿಕ್ಷಾವನ್ನು ತೆಗೆದುಕೊಂಡು ಹೊರಟು ಹೋಗಿದ್ದಾನೆ. ಸದ್ಯ ಅವರ ಈ ವರ್ತನೆಗೆ ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಹಾಡಹಗಲೇ, ನಗರದಲ್ಲೇ ಜೋಡಿ ರೊಮ್ಯಾನ್ಸ್ ಮಾಡುತ್ತಿರುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಇಲ್ಲವೇ ಲಾಡ್ಜ್‌ಗೆ ಹೋಗಿ ರೊಮ್ಯಾನ್ಸ್ ಮಾಡಿ ಎಂದು ಕಿಡಿ ಕಾರಿದ್ದಾರೆ.
ನೆಟ್ಟಿಗರ ಆಕ್ರೋಶ
ಸದ್ಯ ಈ ವಿಡಿಯೊ ನೋಡಿದ ನೆಟ್ಟಿಗರು ಕೂಡ ಕಿಡಿಕಿಡಿಯಾಗಿದ್ದಾರೆ. ಇದೇನೂ ಆಟೋ ರಿಕ್ಷಾವಾ ಅಂದುಕೊಂಡಿದ್ದಾರಾ ಅಥವಾ ಓಯೊ ರೂಮ್ ಅಂದ್ಕೊಂಡಿದ್ದಾರ? ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಆಟೋ ಯಾರಿಗೆ ಸೇರಿದ್ದು, ಯುವ ಜೋಡಿ ಯಾರು ಎನ್ನುವುದು ಗೊತ್ತಾಗಿಲ್ಲ.
ಚಲಿಸೋ ಬೈಕ್‌ನಲ್ಲಿ ಜೋಡಿಯ ಫುಲ್ ರೊಮ್ಯಾನ್ಸ್! ಇಲ್ಲಿದೆ ವಿಡಿಯೊ
ಚಲಿಸುತ್ತಿದ್ದ ಕಾರಿನ ಟಾಪ್ ಮೇಲೆ ಕುಳಿತು ಜೋಡಿಯ ರೊಮ್ಯಾನ್ಸ್
ದೆಹಲಿಯಲ್ಲಿ ಚಲಿಸುತ್ತಿದ್ದ ಕಾರಿನ ಟಾಪ್‌ನಲ್ಲಿ ಕುಳಿತು ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್‌ಗೆ ಕಿಸ್ ಮಾಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದು ವೈರಲ್ ಆಗಿತ್ತು. ದೆಹಲಿಯ ಸಾಕೇತ್ ಜೆ ಬ್ಲಾಕ್‌ನಲ್ಲಿ ಈ ದೃಶ್ಯ ನಡೆದಿತ್ತು. ಮುಖ್ಯ ರಸ್ತೆಯಲ್ಲಿಯೇ ಯುವಕನು ಈ ರೀತಿ ಸ್ಟಂಟ್ ಮಾಡಿದ್ದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ವಿಡಿಯೊ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ವೈರಲ್ ಆದ ವಿಡಿಯೊದಲ್ಲಿ ಯುವಕನು ಕಾರಿನ ಟಾಪ್ ಮೇಲೆ ಹತ್ತಿ ಕೂತಿದ್ದಾನೆ. ಕಾರು ಚಲಿಸುತ್ತಿದ್ದಾಗಲೇ ಈ ಹುಡುಗ ಕಾರಿನ ಮೇಲೆ ಸಾಹಸ ಮೆರೆದಿದ್ದಾನೆ. ಬಳಿಕ ಟ್ರಾಫಿಕ್ ಸಿಗ್ನಲ್‌ನಲ್ಲಿ ಯುವತಿಯೊಬ್ಬಳು ಕಾರಿನ ಕಿಟಕಿಯಿಂದ ಹೊರಗೆ ಬಾಗಿದ್ದಾಳೆ. ಬಳಿಕ ಇಬ್ಬರು ಚುಂಬಿಸುತ್ತಿರುವುದು ಕಂಡು ಬಂದಿದೆ.