ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸೋ ಬೈಕ್‌ನಲ್ಲಿ ಜೋಡಿಯ ಫುಲ್‌ ರೊಮ್ಯಾನ್ಸ್‌! ಇಲ್ಲಿದೆ ವಿಡಿಯೊ

Cinematic style bike ride: ಅಪಾಯಕಾರಿ ಭಂಗಿಯಲ್ಲಿ ಯುವ ದಂಪತಿಯೊಂದು ಬೈಕ್ ಸವಾರಿ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಅಜ್ಮೀರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ದಾರಿಹೋಕರೊಬ್ಬರು ಈ ದೃಶ್ಯವನ್ನು ಚಿತ್ರೀಕರಿಸಿ, ವಿಡಿಯೊ ಹಂಚಿಕೊಂಡಿದ್ದಾರೆ.

ಚಲಿಸೋ ಬೈಕ್‌ನಲ್ಲಿ ಜೋಡಿಯ ಫುಲ್‌ ರೊಮ್ಯಾನ್ಸ್‌! ಇಲ್ಲಿದೆ ವಿಡಿಯೊ

-

Priyanka P Priyanka P Sep 27, 2025 3:48 PM

ಅಜ್ಮೀರ್‌: ಯುವ ದಂಪತಿಯೊಂದು ಅಪಾಯಕಾರಿ ಭಂಗಿಯಲ್ಲಿ ಬೈಕ್ ಸವಾರಿ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ರಾಜಸ್ಥಾನದ (Rajasthan) ಅಜ್ಮೀರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವೈರಲ್ ದೃಶ್ಯಗಳಲ್ಲಿ, ಮಹಿಳೆಯು ಬೈಕ್‌ನ ಇಂಧನ ಟ್ಯಾಂಕ್ ಮೇಲೆ ಕುಳಿತು, ತನ್ನ ಸಂಗಾತಿಗೆ ಎದುರಾಗಿ ಕುಳಿತಿದ್ದಾಳೆ. ಸವಾರನು ರಸ್ತೆಯಲ್ಲಿ ವೇಗವಾಗಿ ಬೈಕ್ ರೈಡ್ ಮಾಡುತ್ತಿರುವಾಗ ಅವನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾಳೆ.

ದಾರಿಹೋಕರೊಬ್ಬರು ಈ ದೃಶ್ಯವನ್ನು ಚಿತ್ರೀಕರಿಸಿ, ವಿಡಿಯೊ ಹಂಚಿಕೊಂಡಿದ್ದಾರೆ. ಸವಾರ ಹೆಲ್ಮೆಟ್ ಧರಿಸಿದ್ದಾನೆ. ಆದರೆ ಮಹಿಳೆಗೆ ಯಾವುದೇ ರಕ್ಷಣಾತ್ಮಕ ಸಾಧನಗಳಿಲ್ಲ. ಆದರೆ, ಅವರ ಈ ಭಂಗಿಯು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವಂತಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಇದು ಶೀಘ್ರ ಎಲ್ಲರ ಗಮನ ಸೆಳೆದಿದೆ. ಹಾಗೆಯೇ ಪೊಲೀಸ್ ಕ್ರಮಕ್ಕೂ ಕಾರಣವಾಯಿತು.

ರಾತ್ರಿ ವೇಳೆ ದಂಪತಿಗಳು ಅಜ್ಮೀರ್‌ನಲ್ಲಿ ಸವಾರಿ ಮಾಡುವುದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಮಹಿಳೆ ಬೈಕ್ ಟ್ಯಾಂಕ್ ಮೇಲೆ ಕುಳಿತು, ಸವಾರನನ್ನು ಬಿಗಿಯಾಗಿ ಅಪ್ಪಿಕೊಂಡಿದ್ದಾಳೆ. ವರದಿಗಳ ಪ್ರಕಾರ, ಈ ಘಟನೆ ಸೆಪ್ಟೆಂಬರ್ 25 ರಂದು ಸಂಭವಿಸಿದೆ ಎನ್ನಲಾಗಿಗೆ. ರಸ್ತೆಯಲ್ಲಿ ಬೇರೆ ವಾಹನ ಚಲಾಯಿಸುತ್ತಿದ್ದ ಜನರು, ಆ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ.

ವಿಡಿಯೊ ವೀಕ್ಷಿಸಿ:



ರಾಜಸ್ಥಾನ ಪೊಲೀಸರು ಈ ವಿಡಿಯೊವನ್ನು ಗಮನಿಸಿದ್ದು, ದಂಪತಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿಯನ್ನು ಕಳುಹಿಸಲಾಗುತ್ತಿದೆ ಎಂದು ಅಜ್ಮೀರ್ ಪೊಲೀಸ್ ಖಾತೆಯು ಎಕ್ಸ್‌ಗೆ ಉತ್ತರಿಸಿದೆ. ವಿಡಿಯೊದ ಸಹಾಯದಿಂದ ದಂಪತಿಯನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುರಕ್ಷತಾ ಕಾಳಜಿಗಳ ಜೊತೆಗೆ, ಈ ವಿಡಿಯೊ ಸಾರ್ವಜನಿಕ ಸಭ್ಯತೆ ಮತ್ತು ಜವಾಬ್ದಾರಿಯುತ ನಡವಳಿಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು. ದಂಪತಿಗಳು ಸವಾರಿ ಮಾಡುವಾಗ ದಾರಿಹೋಕರು ಪ್ರತಿಕ್ರಿಯಿಸುವುದನ್ನು ಕೇಳಬಹುದು. ತುಂಬಾ ರೋಮ್ಯಾಂಟಿಕ್ ಆಗಿದೆ ಎಂದು ಬಳಕೆದಾರನೊಬ್ಬ ಪ್ರತಿಕ್ರಿಯಿಸಿದ್ದಾನೆ. ಇದೆಲ್ಲಾ ಸಿನಿಮಾ ಪ್ರಭಾವ ಎಂದು ಮತ್ತೊಬ್ಬರು ಹೇಳಿದ್ದಾರೆ. ತಲೆಗೆ ಏರಿರುವ ನಶೆ ಸದ್ಯದಲ್ಲೇ ಇಳಿಯಲಿದೆ, ನಿಮಗಾಗಿ ಪೊಲೀಸರು ಹುಡುಕುತ್ತಿದ್ದಾರೆ ಎಂದು ಮಗದೊಬ್ಬರು ವ್ಯಂಗ್ಯವಾಡಿದ್ದಾರೆ.

ಸಂಚಾರ ಅಥವಾ ಸಾರ್ವಜನಿಕ ಸುವ್ಯವಸ್ಥೆಯ ಕಾನೂನುಗಳನ್ನು ಉಲ್ಲಂಘಿಸಲಾಗಿದೆಯೇ ಎಂದು ತನಿಖೆ ನಡೆಸುವುದಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಾಗರಿಕರು ಅಂತಹ ಸಾಹಸಗಳನ್ನು ಪ್ರಯತ್ನಿಸಬಾರದು ಅಥವಾ ಪ್ರೋತ್ಸಾಹಿಸಬಾರದು ಎಂದು ಒತ್ತಾಯಿಸಿದರು. ಇಂತಹ ಅಪಾಯಕಾರಿ ವಿಧಾನವು ಅವರ ಜೀವಕ್ಕೆ ಅಪಾಯವನ್ನುಂಟುಮಾಡುವುದಲ್ಲದೆ, ಬೇರೆಯವರಿಗೂ ತೊಂದರೆಯನ್ನುಂಟು ಮಾಡುತ್ತದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಇದನ್ನೂ ಓದಿ: Surrogacy: ಬಯಲಾಯ್ತು ಅಕ್ರಮ ಬಾಡಿಗೆ ತಾಯ್ತನ! ಈ ಸ್ಕ್ಯಾಮ್‌ಗೆ ಬಲಿಯಾದ ದಂಪತಿಗಳ ಗೋಳಾಟ ಕೇಳೋರಿಲ್ಲ