Viral Video: ರೈಲನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ; ಪ್ರಯಾಣಿಕರ ಮುಂದೆಯೇ ರೊಮ್ಯಾನ್ಸ್: ವಿಡಿಯೊ ವೈರಲ್
Couple turns train into OYO room: ಜೋಡಿಯೊಂದು ಭಾರತೀಯ ರೈಲ್ವೆಯನ್ನೇ ತಮ್ಮ ಓಯೋ ರೂಮ್ ಮಾಡಿಕೊಂಡಿದೆ. ರೈಲಿನಲ್ಲಿ ಇತರ ಪ್ರಯಾಣಿಕರ ಮುಂದೆಯೇ ರೊಮ್ಯಾನ್ಸ್ ಮಾಡುತ್ತಾ ಅಸಭ್ಯವಾಗಿ ವರ್ತಿಸಿದೆ. ಇದೀಗ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

-

ದೆಹಲಿ: ಕೆಲವೊಮ್ಮೆ ಜೋಡಿಗಳು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತವೆ. ಇಂತಹ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳು ಆಗಾಗ ವೈರಲ್ ಆಗುತ್ತವೆ. ಕೆಲವು ಜೋಡಿಗಳು ಓಯೋ ರೂಮ್ ಬುಕ್ ಮಾಡಿ ಸರಸ ಸಲ್ಲಾಪದಲ್ಲಿ ತೊಡಗುತ್ತವೆ ಎಂಬ ವಿಚಾರ ಗುಟ್ಟಾಇ ಉಳಿದಿಲ್ಲ. ಇದೀಗ ಅಂತಹದ್ದೆ ಯುವ ಜೋಡಿಯೊಂದು ಭಾರತೀಯ ರೈಲ್ವೆಯನ್ನೇ (Indian Railway) ಓಯೋ ರೂಮ್ ತರಹ ಮಾಡಿಕೊಂಡಿದೆ. ಈ ದೃಶ್ಯದ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಹೌದು ರೈಲಿನಲ್ಲಿ ಪ್ರೇಮಿಗಳು ಸಾರ್ವಜನಿಕವಾಗಿ ಪರಸ್ಪರ ಅಪ್ಪಿಕೊಂಡು ಮುದ್ದಾಡಿದ್ದಾರೆ. ಸುತ್ತಮುತ್ತ ಜನರಿದ್ದರೂ ಕೇರ್ ಮಾಡದ ಈ ಜೋಡಿ ಅಸಭ್ಯವಾಗಿ ವರ್ತಿಸಿದೆ. ಸೈಡ್ ಲೋವರ್ ಬರ್ತ್ ಸೀಟ್‍ನಲ್ಲಿ ಯುವಕ ಯುವತಿ ಮೇಲೆ ಮಲಗಿದ್ದಾನೆ. ರೈಲನ್ನೇ ಬೆಡ್‍ರೂಮ್ ಆಗಿ ಪರಿವರ್ತಿಸಿದ ಯುವಕ-ಯುವತಿ ವಿರುದ್ಧ ಇದೀಗ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇವರಿಗೆ ಬೇರೆಲ್ಲೂ ಜಾಗ ಸಿಗಲಿಲ್ಲವೆ ಎಂದು ಜನರು ಪ್ರಶ್ನಿಸಿದ್ದಾರೆ.
ರೈಲಿನ ಸೈಡ್ ಲೋವರ್ ಬರ್ತ್ ಸೀಟ್‍ನಲ್ಲಿ ಮಲಗಿರುವ ಈ ಜೋಡಿ, ಸರಸ ಸಲ್ಲಾಪದಲ್ಲಿ ತೊಡಗಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ರೈಲಿನಲ್ಲಿದ್ದ ಇತರ ಪ್ರಯಾಣಿಕರು ಈ ಜೋಡಿಯ ನವರಂಗಿ ಆಟವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ವಿಡಿಯೊ ವೀಕ್ಷಿಸಿ:
OYO Train
— दिव्या कुमारी (@divyakumaari) September 6, 2025
ऐसे लोगों ने अब टट्रैन को भी oyo बना दिया 🤦♀️🤦♀️ pic.twitter.com/ZZCZ3nADdj
ರೈಲಿನ ಸೈಡ್ ಲೋವರ್ ಬರ್ತ್ ಸೀಟ್‍ನಲ್ಲಿ ಈ ಜೋಡಿ ಮಲಗಿತ್ತು. ಮೊದಲಿಗೆ ಯುವತಿಗೆ ಕಿಸ್ ಮಾಡಿದ ಯುವಕ ನಂತರ ತಬ್ಬಿಕೊಂಡು ಮುದ್ದಿಸಿದ್ದಾನೆ. ಈ ವೇಳೆ ಈ ಜೋಡಿಯ ಪಕ್ಕದಲ್ಲಿ ಯುವಕನೊಬ್ಬ ಹಾದು ಹೋಗಿದ್ದಾನೆ. ಈ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದು. ಈ ಘಟನೆ ಎಲ್ಲಿ, ಯಾವಾಗ ನಡೆದಿದ್ದು ಎಂಬ ಬಗ್ಗೆ ತಿಳಿದಿಲ್ಲ. ಯಾವ ರೈಲಿನಲ್ಲಿ ಈ ಘಟನೆ ನಡೆದಿದೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ. ಆದರೆ ವಿಡಿಯೊ ಮಾತ್ರ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಈ ಜೋಡಿಯ ಹಸಿಬಿಸಿ ದೃಶ್ಯ ಕಂಡು ಜನರು ರೊಚ್ಚಿಗೆದ್ದಿದ್ದಾರೆ. ಕೂಡಲೇ ಇಬ್ಬರನ್ನೂ ಪತ್ತೆ ಹಚ್ಚಿ ಕ್ರಮ ಕೈಗಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ದಿವ್ಯಾ ಕುಮಾರಿ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಜೋಡಿಯ ರೊಮ್ಯಾನ್ಸ್ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಸೆಪ್ಟೆಂಬರ್ 6ರಂದು ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಈವರೆಗೆ 5 ಲಕ್ಷಕ್ಕೂ ಅಧಿಕ ವೀವ್ಸ್ ಹಾಗೂ ಕಾಮೆಂಟ್‍ಗಳು ಬಂದಿವೆ. ಕೆಲವು ನೆಟ್ಟಿಗರು ಕಿಡಿಕಾರಿದ್ರೆ, ಇನ್ನು ಕೆಲವರು ವ್ಯಂಗ್ಯ ಮಾಡಿದ್ದಾರೆ. ಮನೆಯಲ್ಲಿ ಇವರಿಗೆ ಸಮಯ ಸಿಗಲಿಲ್ಲವೇ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಇದೆಲ್ಲ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: Viral Video: ಬಂಗೀ ಜಂಪಿಂಗ್‍ಗೆ ಹೋಗಿ ಹೀಗ್ ಭಯ ಪಟ್ರೆ ಹೆಂಗಮ್ಮ? ಸಖತ್ ಫನ್ನಿ ಆಗಿದೆ ಈ ವಿಡಿಯೊ