ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೂಟ್‌ಕೇಸ್‌ನಲ್ಲಿ ರೈಲ್ವೆ ಬೆಡ್‌ಶೀಟ್ ಬಚ್ಚಿಟ್ಟ ಜೋಡಿ: ಟಿಟಿಇ ಹೆಚ್ಚುವರಿ ಮೊತ್ತ ಕೇಳಿದ್ದಕ್ಕೆ ಕದ್ದೆವು ಎಂದು ಸಮರ್ಥನೆ!

Viral News: ರೈಲು ಪ್ರಯಾಣವೊಂದರಲ್ಲಿ ರೈಲ್ವೆಗೆ ಸೇರಿದ ಬೆಡ್‌ಶೀಟ್ ಕವರ್‌ ಗಳನ್ನು ಜೋಡಿ ಯೊಂದು ಕದ್ದೊಯ್ದಿರುವ ಘಟನೆಯೊಂದು ನಡೆದಿದೆ‌. ಈ ಬಗ್ಗೆ ಪ್ರಶ್ನೆ ಮಾಡಿದಾಗ ಟಿಟಿಇ ತಮ್ಮಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ್ದರಿಂದಲೇ ತಾವು ಈಸಾಮಗ್ರಿಗಳನ್ನು ತೆಗೆದುಕೊಂಡಿದ್ದಾಗಿ ಮಹಿಳೆ ಸಮರ್ಥನೆ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಯಾಣಿಕರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಸೂಟ್‌ಕೇಸ್‌ನಲ್ಲಿ ರೈಲ್ವೆ ಬೆಡ್‌ಶೀಟ್ ಬಚ್ಚಿಟ್ಟ ಜೋಡಿ

ನವದೆಹಲಿ,ಸೆ.18: ಇತ್ತೀಚೆಗೆ ನಾಗರಿಕ ಪ್ರಜ್ಞೆ ಮರೆಯಾಗ್ತಿರುವ ಅನೇಕ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಅನ್ನುವಂತೆ ರೈಲು ಪ್ರಯಾಣವೊಂದರಲ್ಲಿ ರೈಲ್ವೆಗೆ ಸೇರಿದ ಬೆಡ್‌ಶೀಟ್ ಕವರ್‌ ಗಳನ್ನು ಜೋಡಿಯೊಂದು ಕದ್ದೊಯ್ದಿರುವ ಘಟನೆಯೊಂದು ನಡೆದಿದೆ‌. ಈ ಬಗ್ಗೆ ಪ್ರಶ್ನೆ ಮಾಡಿದಾಗ ಟಿಟಿಇ ತಮ್ಮಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ್ದರಿಂದಲೇ ತಾವು ಈ ಸಾಮಗ್ರಿಗಳನ್ನು ತೆಗೆದುಕೊಂಡಿದ್ದಾಗಿ ಮಹಿಳೆ ಸಮರ್ಥನೆ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಪ್ರಯಾಣಿಕರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಭಾರತೀಯ ರೈಲ್ವೆಯ ಎಸಿ ಬೋಗಿಗಳಲ್ಲಿ ಬೆಡ್‌ಶೀಟ್‌ಗಳು ಮತ್ತು ಟವೆಲ್‌ಗಳು ಕಳುವಾಗುವುದು ಹೊಸದೇನಲ್ಲ. ಎಸಿ ಕೋಚ್‌ಗಳಿಂದ ಬೆಡ್‌ಶೀಟ್‌ಗಳು ಮತ್ತು ಟವೆಲ್‌ಗಳಂತಹ ಸಾಮಗ್ರಿಗಳು ಕಾಣೆಯಾಗುತ್ತಿರುವುದು ಭಾರತೀಯ ರೈಲ್ವೆಗೆ ದೀರ್ಘಕಾಲದಿಂದ ಉಂಟಾದ ಸಮಸ್ಯೆಯಾಗಿದೆ. ಈ ಸಮಸ್ಯೆಯು ರೈಲ್ವೆಗೆ ನಷ್ಟವನ್ನು ಉಂಟುಮಾಡುವುದಲ್ಲದೆ, ಈ ವಸ್ತುಗಳು ಕಾಣೆಯಾದಾಗ ಅದರ ವೆಚ್ಚವನ್ನು ಯಾರು ಭರಿಸುತ್ತಾರೆ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ವಿಡಿಯೋ ನೋಡಿ;



ಇದೀಗ ವಿಶಾಲ್ ಪಟೇಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಜೋಡಿಯೊಂದನ್ನು ತಡೆದು ನಿಲ್ಲಿಸಿ ಸೂಟ್‌ಕೇಸ್ ಓಪನ್ ಮಾಡಲು ಹೇಳಲಾಗುತ್ತದೆ. ಸೂಟ್‌ಕೇಸ್ ತೆರೆದಾಗ ಅದರೊಳಗೆ ರೈಲ್ವೆಗೆ ಸೇರಿದ ಬೆಡ್‌ಶೀಟ್ ಕವರ್‌ಗಳು ಪತ್ತೆಯಾಗಿವೆ.

ತಮ್ಮ ವಿಡಿಯೊ ಚಿತ್ರೀಕರಿಸುವುದನ್ನು ವಿರೋಧಿಸಿದ ಮಹಿಳೆ ರೆಕಾರ್ಡಿಂಗ್ ನಿಲ್ಲಿಸುವಂತೆ ಪದೇ ಪದೇ ಹೇಳುತ್ತಾಳೆ. ಬೆಡ್‌ಶೀಟ್ ಏಕೆ ಕದ್ದೊಯುತ್ತಿದ್ದಿರಿ ಎಂದು ಕೇಳಿದ್ದಕ್ಕೆ, ಪ್ರಯಾಣದ ಸಮಯ ದಲ್ಲಿ ಟಿಕೆಟ್ ತಪಾಸಕರು (TTE) ನಮ್ಮ ಬಳಿ ಹೆಚ್ಚುವರಿ ಹಣ ವಸೂಲಿ ಮಾಡಿದ್ದರು, ಅದಕ್ಕಾಗಿಯೇ ನಾವು ಬೆಡ್‌ಶೀಟ್ ತೆಗೆದುಕೊಂಡೆವು ಎಂದು ವಾದಿಸಿದ್ದಾರೆ.

Viral Video: ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ: ಇದು ದೇವರ ನಾಡಿನ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶಿಷ್ಟ ಆಚರಣೆ

ಈ ವಿಡಿಯೋ ಆನ್‌ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ಬಳಕೆದಾರರು ಆ ದಂಪತಿಯ ಸಮರ್ಥನೆಯನ್ನು ಪ್ರಶ್ನಿಸಿದ್ದಾರೆ. ಈ ಕಾರಣ ನೀಡಿ ರೈಲು ಸೇವೆಯ ವಸ್ತುಗಳನ್ನು ಕದ್ದೊಯ್ಯುವುದು ಸರಿಯಲ್ಲ, ತಪ್ಪನ್ನೂ ಮಾಡಿ ವಾದ ಮಾಡುವುದು ಸರಿಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಟಿಇ ಹೆಚ್ಚುವರಿ ಹಣ ಪಡೆದಿದ್ದರೆ ಅದಕ್ಕೆ ದೂರು ನೀಡಬೇಕೇ ಹೊರತು ರೈಲ್ವೆ ಆಸ್ತಿಯನ್ನು ಕದಿಯುವುದು ಸರಿಯಲ್ಲ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಈ ಜೋಡಿಯ ಪಿಎನ್‌ಆರ್ ವಿವರಗಳನ್ನು ಆಧರಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.