ಹರಿಯಾಣ,ಫೆ.20: ಇತ್ತೀಚೆಗೆ ಮಕ್ಕಳು ಪೋಷಕರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಮಗಳೊಬ್ಬಳು ವೃದ್ಧ ಮಹಿಳೆಯ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ (Viral Video) ಕಂಡು ಬಂದಿದೆ. ಹರಿಯಾಣದ ಅಂಬಾಲಾದಲ್ಲಿ ಈ ಘಟನೆ ನಡೆದಿದೆ. ವಯಸ್ಸಾದ ತಾಯಿಯ ಮೇಲೆ ಮಗಳು ಈ ರೀತಿಯಾಗಿ ಹಲ್ಲೆ ನಡೆಸಿದ್ದು ಕಂಡು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತ ವಾಗಿದೆ.
ಮಗಳು ತನ್ನ ವೃದ್ಧ ತಾಯಿಯ ಕೂದಲನ್ನು ಎಳೆದು ತಾಯಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ವೈರಲ್ ಆಗಿರುವ ವಿಡಿಯೋದಲ್ಲಿ, ವಯಸ್ಸಾದ ತಾಯಿಯೊಬ್ಬರು ವಾಕರ್ ಸಹಾಯದ ಮೂಲಕ ನಡೆಯುತ್ತಿದ್ದರು. ಈ ಸಂದರ್ಭದಲ್ಲಿ ತಾಯಿಗೆ ಆಸರೆ ಯಾಗಬೇಕಿದ್ದ ಮಗಳು ಸಿಟ್ಟಿನಿಂದ ತಾಯಿಯ ಕೂದಲನ್ನು ಎಳೆದು ಅಮಾನುಷವಾಗಿ ವರ್ತನೆ ಮಾಡಿದ್ದಾಳೆ.
ವಿಡಿಯೋ ನೋಡಿ:
ಈ ದೃಶ್ಯವನ್ನು ಹತ್ತಿರದ ಮನೆಯ ಮಹಿಳೆಯೊಬ್ಬರು ಚಿತ್ರೀಕರಿಸಿದ್ದು,ಇವಳ ತಾಯಿ, ನರಕದಲ್ಲಿ ಕೂಡ ಅವಳಿಗೆ ಸ್ಥಾನ ಕೊಡುವುದಿಲ್ಲ. ಎಂದು ಬರೆದುಕೊಂಡಿದ್ದಾರೆ. ಈ ಕ್ಲಿಪ್ ಆನ್‌ಲೈನ್‌ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ, ಹಲವಾರು ಬಳಕೆದಾರರು ವೀಡಿಯೊದಲ್ಲಿ ಕಂಡುಬರುವ ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಬಳಕೆದಾರ ರೊಬ್ಬರು ಎಂತಹ ಹೃದಯ ವಿದ್ರಾವಕ ಮತ್ತು ನಾಚಿಕೆಗೇಡಿನ ಕೃತ್ಯ ಎಂದಿದ್ದಾರೆ. ಹೆಚ್ಚಿನವರ ಹರಿಯಾಣ ಪೊಲೀಸರನ್ನು ಟ್ಯಾಗ್ ಮಾಡಿ, ಈ ಕೂಡಲೇ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.
ಇತ್ತೀಚೆಗೆ ಪಂಜಾಬ್ ನಲ್ಲಿ ಕೂಡ ಮನಕಲಕುವ ವಿಡಿಯೋ ವೈರಲ್ ಆಗಿತ್ತು. ಹೆತ್ತಮ್ಮನಿಗೆ ಮಗ ಹೊಡೆಯುವ ದೃಶ್ಯ ಕಂಡು ಬಂದಿದ್ದು ತನ್ನ 73 ವರ್ಷದ ತಾಯಿಗೆ ವಕೀಲನೊಬ್ಬ ಮತ್ತು ಆತನ ಪತ್ನಿ, ಮಗ ಸೇರಿ ಥಳಿಸುತ್ತಿರುವ ಘಟನೆ ಕಂಡು ಬಂದಿತ್ತು.