ಜೋಧಪುರ: ಸೊಸೆಯಂದಿರು ಹಾಗೂ ಯುವತಿಯರು ಕ್ಯಾಮೆರಾ ಹೊಂದಿರುವ ಫೋನ್‍ಗಳನ್ನು ಬಳಸದಂತೆ ನಿಷೇಧಿಸಲಾಗಿದೆ. ಈ ವಿಚಿತ್ರ ನಿಯಮವನ್ನು ರಾಜಸ್ಥಾನದ (Rajasthan) ಜಾಲೋರ್ ಜಿಲ್ಲೆಯ ಗ್ರಾಮ ಪಂಚಾಯತ್ ಹೊರಡಿಸಿದೆ. ಜನವರಿ 26 ರಿಂದ 15 ಹಳ್ಳಿಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ. ಅಲ್ಲದೆ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಥವಾ ನೆರೆಹೊರೆಯವರ ಮನೆಗೆ ಫೋನ್ (phone) (viral news) ತೆಗೆದುಕೊಂಡು ಹೋಗುವುದನ್ನು ಸಹ ನಿಷೇಧಿಸಲಾಗುವುದು. ಸ್ಮಾರ್ಟ್‌ಫೋನ್‌ಗಳ ಬದಲಿಗೆ ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಲು ಅನುಮತಿಸಲಾಗುವುದು.
14 ಉಪವಿಭಾಗಗಳ ಅಧ್ಯಕ್ಷ ಸುಜ್ನಾರಾಮ್ ಚೌಧರಿ ಅಧ್ಯಕ್ಷತೆಯಲ್ಲಿ ಜಲೋರ್ ಜಿಲ್ಲೆಯ ಗಾಜಿಪುರ ಗ್ರಾಮದಲ್ಲಿ ಭಾನುವಾರ ನಡೆದ ಚೌಧರಿ ಸಮುದಾಯದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಂಚ ಹಿಮ್ತಾರಾಮ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ಚೌಧರಿ ಹೇಳಿದರು.
Spying for Pakistan: ಐಎಸ್‌ಐ ಪರ ಬೇಹುಗಾರಿಕೆ, ಪಾಕಿಸ್ತಾನಕ್ಕೆ 7 ಬಾರಿ ಭೇಟಿ; ರಾಜಸ್ಥಾನ ಸರ್ಕಾರಿ ನೌಕರನ ಬಂಧನ
ಹಿಮ್ಮತಾರಾಮ್ ಅವರ ಪ್ರಕಾರ, ಪಂಚ ಸದಸ್ಯರು ಮತ್ತು ಸಮುದಾಯದ ಸದಸ್ಯರ ನಡುವಿನ ಚರ್ಚೆಯ ನಂತರ, ಸೊಸೆಯಂದಿರು ಮತ್ತು ಯುವತಿಯರು ಕರೆ ಮಾಡಲು ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಬೇಕೆಂದು ನಿರ್ಧರಿಸಲಾಯಿತು.
ಶಾಲಾ ಬಾಲಕಿಯರು ತಮ್ಮ ಅಧ್ಯಯನಕ್ಕಾಗಿ ಮೊಬೈಲ್ ಫೋನ್‌ಗಳ ಅಗತ್ಯವಿರುವಾಗ ಅವುಗಳನ್ನು ಮನೆಯಲ್ಲಿ ಮಾತ್ರ ಬಳಸಬಹುದು. ಮದುವೆಗಳು, ಸಾಮಾಜಿಕ ಕಾರ್ಯಕ್ರಮಗಳು ಅಥವಾ ನೆರೆಹೊರೆಯವರ ಮನೆಗೆ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಹೋಗಲು ಅವರಿಗೆ ಅವಕಾಶವಿಲ್ಲ ಎಂದು ಚೌಧರಿ ವಿವರಿಸಿದರು.
ಪಂಚಾಯತ್‍ನ ಈ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಚೌಧರಿ, ಮಕ್ಕಳು ತಮ್ಮ ಮನೆಗಳಲ್ಲಿ ಮಹಿಳೆಯರ ಮೊಬೈಲ್ ಫೋನ್‌ಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಇದು ಅವರ ದೃಷ್ಟಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಕಾರಣಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಕೆಲವು ಮಹಿಳೆಯರು ಮಕ್ಕಳಿಗೆ ತಮ್ಮ ಫೋನ್‌ಗಳನ್ನು ನೀಡಿ ಅವರನ್ನು ವಿಚಲಿತರನ್ನಾಗಿ ಮಾಡುತ್ತಾರೆ. ದಿನನಿತ್ಯದ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಲು ಮಹಿಳೆಯರು ಮಕ್ಕಳಿಗೆ ಮೊಬೈಲ್ ಫೋನ್‌ಗಳನ್ನು ನೀಡುತ್ತಾರೆ ಎಂದು ಅವರು ಹೇಳಿದರು.
ಈ ನಿಯಮಗಳು ಜನವರಿ 26ರಿಂದ ಜಾರಿಗೆ ಬರಲಿದೆ. ಗಾಜಿಪುರ, ಪಾವಲಿ, ಕಲ್ರಾ, ಮನೋಜಿಯಾ ವಾಸ್, ರಾಜಿಕವಾಸ್, ದತ್ಲಾವಾಸ್, ರಾಜ್‌ಪುರ, ಕೋಡಿ, ಸಿದ್ರೋಡಿ, ಅಲ್ದಿ, ರೋಪ್ಸಿ, ಖಾನದೇವಾಲ್, ಸವಿಧರ್ ಮತ್ತು ಭಿನ್‌ಮಲ್‌ನ ಹತ್ಮಿ ಕಿ ಧನಿ ಮತ್ತು ಖಾನ್‌ಪುರ ಜಿಲ್ಲೆಗಳಿಗೆ ಅನ್ವಯಿಸುತ್ತವೆ. ಪಂಚಾಯತ್‍ನ ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಹಲವರು ಇದನ್ನು ಟೀಕಿಸಿದ್ದಾರೆ.
ಅತ್ತಿಗೆಯ ಮೇಲೆ ಪ್ರೇಮಾಂಕುರ, ಮೊಬೈಲ್ ಟವರ್ ಹತ್ತಿದ ವ್ಯಕ್ತಿ
ತನ್ನ ಅತ್ತಿಗೆಯನ್ನು ಹುಚ್ಚನಂತೆ ಪ್ರೀತಿಸಿದ ಯುವಕನೊಬ್ಬ ಮೊಬೈಲ್ ಟವರ್ ಹತ್ತಿ ಸುಮಾರು ಮೂರು ಗಂಟೆಗಳ ಕಾಲ ಹೈ-ವೋಲ್ಟೇಜ್ ಡ್ರಾಮಾ ಪ್ರದರ್ಶಿಸಿದ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ. ಅವನಿಗೆ ಹೆಂಡತಿ ಮತ್ತು ಚಿಕ್ಕ ಮಗುವಿದೆ. ಆದರೆ, ಅವನ ಅತ್ತಿಗೆಯ ಮೇಲೆ ಪ್ರೀತಿ ಉಂಟಾಗಿತ್ತು. ಸಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.