ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ಯಾಂಟೀನ್ ಸಾಂಬಾರಿನಲ್ಲಿ ಸತ್ತ ಹಲ್ಲಿ ಪತ್ತೆ: ಸುಳ್ಳೆಂದು ಸಾಬೀತು ಪಡಿಸಲು ತಿಂದೇ ಬಿಟ್ಟ ಕ್ಯಾಂಟೀನ್ ಸಿಬ್ಬಂದಿ

Viral Video: ಮಧ್ಯ ಪ್ರದೇಶದ ಭೋಪಾಲ್‌ನ ರಾಜೀವ್ ಗಾಂಧಿ ಕ್ಯಾಂಟೀನ್‌ನ ಆಹಾರದಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿರುವ ಘಟನೆ ನಡೆದಿದೆ. ಬಡಿಸಿದ ಆಹಾರದಲ್ಲಿ ವಿದ್ಯಾರ್ಥಿಗಳು ಸತ್ತ ಹಲ್ಲಿಯನ್ನು ಕಂಡು ವಿಡಯೊ ಮಾಡಿದ್ದಾರೆ. ಅವರು ಅಡುಗೆ ಸಿಬ್ಬಂದಿ ಬಳಿ ದೂರು ನೀಡಲು ಹೋದಾಗ ಅವರು ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಕ್ಯಾಂಟೀನ್ ಸಾಂಬಾರಿನಲ್ಲಿ ಸತ್ತ ಹಲ್ಲಿ ಪತ್ತೆ

ಭೋಪಾಲ್, ಮಾ. 24: ಹೋಟೆಲ್ ಆಹಾರದ ಗುಣಮಟ್ಟದ ಬಗ್ಗೆ ಆಗಾಗ ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಅಶುಚಿತ್ವ, ಕೊಳೆತ ಆಹಾರ ಪದಾರ್ಥಗಳ ಬಳಕೆ ಬಗ್ಗೆ ಅನೇಕರು ದೂರುತ್ತಾರೆ. ಇದನ್ನು ಸಾಕ್ಷಿ ಸಮೇತ ಬಯಲಿಗೆಳೆಯುತ್ತಾರೆ. ಅದೇ ರೀತಿಯ ಘಟನೆಯೊಂದು ಮಧ್ಯ ಪ್ರದೇಶದ ಭೋಪಾಲ್‌ನ ರಾಜೀವ್ ಗಾಂಧಿ ಕ್ಯಾಂಟೋನ್‌ ಒಂದರಲ್ಲಿ ನಡೆದಿದೆ. ಆಹಾರದಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದೆ. ಬಡಿಸಿದ ಆಹಾರದಲ್ಲಿ ವಿದ್ಯಾರ್ಥಿಗಳು ಸತ್ತ ಹಲ್ಲಿಯನ್ನು ಗಮನಿಸಿ ಅದನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದಾರೆ. ಈ ಬಗ್ಗೆ ಅಡುಗೆ ಸಿಬ್ಬಂದಿಗೆ ಬಳಿ ದೂರು ನೀಡಿದಾಗ ಅವರು ಹಲ್ಲಿ ಬಿದ್ದಿರುವುದನ್ನು ಒಪ್ಪಿಕೊಂಡಿಲ್ಲ. ಅದು ಕ್ಯಾಪ್ಸಿಕಂನ ತುಂಡು ಎಂದಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ಭೋಪಾಲ್‌ನ RGPV ಕ್ಯಾಂಟೀನ್‌ನಲ್ಲಿ ಈ ಪ್ರಕರಣ ನಡೆದಿದೆ. ಮಾಹಿತಿಯ ಪ್ರಕಾರ, ರಾಜೀವ್ ಗಾಂಧಿ ಪ್ರೌಢಿಕಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕ್ಯಾಂಟೀನ್‌ಗೆ ಊಟಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬಡಿಸಿದ ಅಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ.

ವಿಡಿಯೊ ನೋಡಿ:



ತಟ್ಟೆಯನ್ನು ಅಡುಗೆ ಸಿಬ್ಬಂದಿಗೆ ಈ ಬಗ್ಗೆ ದೂರು ನೀಡಿದಾಗ ಅವರು ನಿರಾಕರಿಸಿದ್ದಾರೆ. ಸಿಬ್ಬಂದಿ ಹಲ್ಲಿಯ ಆರೋಪಗಳನ್ನು ತಳ್ಳಿ ಹಾಕಿದ್ದು ಅದು ಕ್ಯಾಪ್ಸಿಕಂನ ತುಂಡು ಎಂದು ವಾದಿಸಿದ್ದಾರೆ. ಅನುಮಾನಗೊಂಡು ವಿದ್ಯಾರ್ಥಿಗಳು ತಕ್ಷಣವೇ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದಾರೆ. ಆಗ ಆ ಸಿಬ್ಬಂದಿ ಆ ತುಂಡನ್ನು ವಿದ್ಯಾರ್ಥಿಗಳ ಎದುರೇ ತಿಂದು ಹಾಕಿದ್ದಾರೆ. ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಬಗ್ಗೆ ಈ ಹಿಂದೆ ದೂರುಗಳನ್ನು ನೀಡಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಇಂತಹ ನಿರ್ಲಕ್ಷ್ಯವು ವಿದ್ಯಾರ್ಥಿಗಳ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಬಹುದು ಎಂಬ ಆತಂಕ ಮೂಡಿದೆ.

ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್‌ ಕೆಳಗೆ ಬೈಕ್‌ ಓಡಿಸಿದ ಯುವಕ

ಕ್ಯಾಂಟೀನ್‌ಗೆ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿದಿನ ಊಟಕ್ಕೆ ಆಗಮಿಸುತ್ತಾರೆ. ಇಂತಹ ಕ್ಯಾಂಟೀನ್‌ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಕುಲಪತಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.