ಪಶ್ಚಿಮ ಬಂಗಾಳ,ಜು.17: ಮಹಿಳೆಯರ ಮೇಲಿನ ಕಿರುಕುಳ, ದೌರ್ಜನ್ಯ ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಲೇ ಇವೆ. ಈ ನಡುವೆ ವಿಕೃತಿ ಮೆರೆದ ಕಾಮುಕನೊಬ್ಬನಿಗೆ ಮಹಿಳಾ ಕಾನ್‌ಸ್ಟೆಬಲ್ ತಕ್ಕ ಪಾಠ ಕಲಿಸಿದ ಘಟನೆಯೊಂದು (Viral News) ಕಂಡು ಬಂದಿದೆ. ಕರ್ತವ್ಯದ ಹೊರಗಿದ್ದಾಗ ಪೊಲೀಸ್ ಕಾನ್‌ಸ್ಟೆಬಲ್ ಎಂದು ಅರಿಯದೆ ವ್ಯಕ್ತಿಯೊಬ್ಬ ಖಾಸಗಿ ಅಂಗ ತೋರಿಸಿ ಅಸಹ್ಯವಾಗಿ ವರ್ತಿಸಿದ್ದಾನೆ. ಆದರೆ ಮಹಿಳೆಯೂ ಇದಕ್ಕೆ ಹೆದರದೆ ಕಾಲರ್ ಹಿಡಿದೇ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಕಾನ್‌ಸ್ಟೆಬಲ್ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು ಇಂತಹ ಕಾಮುಕರಿಗೆ ಈ ರೀತಿಯ ಶಿಕ್ಷೆಯೇ ಆಗಬೇಕೆಂದು ನೆಟ್ಟಿಗರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಪೊಲೀಸ್ ಕಾನ್‌ಸ್ಟೆಬಲ್ ಎಂದು ಅರಿಯದೆ ಆಕಾಶ್ ಘೋಷ್ ಎಂಬಾತ ಮಹಿಳೆ ಖಾಸಗಿ ಅಂಗಗಳನ್ನು ತೋರಿಸಿ ಅಸಭ್ಯ ವರ್ತನೆ ತೋರಿದ್ದಾನೆ.ಆದರೆ ಮಹಿಳೆ ಇದಕ್ಕೆ ಹಿಂಜರಿತನ ತೋರದೆ ಆತನಿಗೆ ತಕ್ಕ ಶಿಕ್ಷೆ ನೀಡಿದ್ದಾರೆ.
ವಿಡಿಯೋ ನೋಡಿ:
ಮಧ್ಯಾಹ್ನ ಬಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಕಾನ್ಸ್‌ಟೇಬಲ್ ಶಂಕಿತನನ್ನು ಕಾಲ್ನಡಿಗೆಯಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸುಮಾರು 400ಮೀಟರ್ ದೂರದವರೆಗೆ ನಡೆದುಕೊಂಡೆ ಠಾಣೆಗೆ ಎಳೆದೊಯ್ದಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
Viral Video: ಸಮೋಸ ನೀಡಲು ತಡವಾಗಿದ್ದಕ್ಕೆ ರಣರಂಗವಾದ ಬೇಕರಿ; ನೌಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗ್ರಾಹಕರು
ಈ ಕೃತ್ಯ ಎಸಗಿದ ಆರೋಪಿ ಆಕಾಶ್ ಫೋಷ್ ಎಂದು ತಿಳಿದು ಬಂದಿದ್ದು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮಹಿಳಾ ಕಾನ್‌ಸ್ಟೆಬಲ್ ತಮ್ಮ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಆಗ ಆಕೆಗೆ ಅಶ್ಲೀಲ ಸನ್ನೆಗಳನ್ನು ಮಾಡಿ, ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆಯನ್ನು ಆಕೆ ನಿರ್ಲಕ್ಷಿಸುವ ಬದಲು, ತಕ್ಷಣ ಆ ವ್ಯಕ್ತಿಯನ್ನು ಎದುರಿಸಿದ್ದಾರೆ. ಸ್ಕೂಟರ್ ನಿಲ್ಲಿಸಿ ಆತನನ್ನು ತಡೆದಿದ್ದಾರೆ. ಆತ ತಪ್ಪಿಸಿಕೊಂಡು ಓಡಿಹೋಗದಂತೆ ಆತನ ಕಾಲರ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.
ಕಾನ್ಸ್‌ಟೇಬಲ್ ಶಂಕಿತನನ್ನು ಸುಮಾರು 400 ಮೀಟರ್ ದೂರದಲ್ಲಿದ್ದ ಖರ್ದಾ ಪೊಲೀಸ್ ಠಾಣೆಯವರೆಗೆ ಆತನನ್ನು ನಡೆದುಕೊಂಡೇ ಎಳೆದೊಯ್ದಿದ್ದಾರೆ. ರಸ್ತೆಯಲ್ಲಿದ್ದ ವಾಹನ ಸವಾರರು ಈ ದೃಶ್ಯವನ್ನು ನೋಡಿ ಶಾಕ್ ಆಗಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ನಿಜಕ್ಕೂ ಧೈರ್ಯವಂತ ಮಹಿಳೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂತಹ ಕಾಮುಕರನ್ನು ಸುಮ್ಮನೆ ಬಿಡಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ..