ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ಯ ಮತ್ತೊಂದು ಅಸಭ್ಯ ವರ್ತನೆ; ಕುಡಿತದ ಮತ್ತಿನಲ್ಲಿ ಮಹಿಳೆಯ ಮನೆಗೆ ನುಗ್ಗಲು ಯತ್ನ: ಭಯಾನಕ ವಿಡಿಯೊ ವೈರಲ್‌

Viral Video: ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಿಸುವ ಮಾಡುವ ಮತ್ತೊಂದು ಅಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಮನೆಗೆ ಬಂದ ಉಬರ್ ಪಾರ್ಸಲ್ ಡೆಲಿವರಿ ಬಾಯ್ ಕುಡಿತದ ಮತ್ತಿನಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಚಾರ ಶೇರ್ ಮಾಡಿದ ಮಹಿಳೆ ಆತನ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡೆಲಿವರಿ ಬಾಯ್‌ಯ ಅಸಭ್ಯ ವರ್ತನೆ ವಿವರಿಸಿದ ಇನ್‌ಫ್ಲುಯೆನ್ಸರ್ ಅನೇರಿ ಠಕ್ಕರ್

ಬೆಂಗಳೂರು, ಆ. 3: ಇತ್ತೀಚಿನ ದಿನದಲ್ಲಿ ಡೆಲಿವರಿ ಸಿಬ್ಬಂದಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿರುವ ಘಟನೆ ಪದೇ ಪದೆ ನಡೆಯುತ್ತಿದೆ. ಇದೀಗ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನಿಸುವ ಮತ್ತೊಂದು ಅಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಮನೆಗೆ ಬಂದ ಉಬರ್ ಪಾರ್ಸಲ್ ಡೆಲಿವರಿ ಬಾಯ್ ಒಬ್ಬ ಕುಡಿದ ಮತ್ತಿನಲ್ಲಿ ಮಹಿಳೆ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಚಾರ ಶೇರ್ (Viral News) ಮಾಡಿದ ಮಹಿಳೆ ಆತನ ನಡವಳಿಕೆ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಡೆಲಿವರಿ ಬಾಯ್‌ ಒಬ್ಬ ಮಹಿಳೆಯೊಬ್ಬರ ಮನೆಗೆ ನುಗ್ಗಿ ಅಸಭ್ಯವಾಗಿ ನಡೆದುಕೊಂಡಿದ್ದ. ಆ ಘಟನೆಯ ನೆನಪು ಮಾಸುವ ಮುನ್ನ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.

ಇನ್‌ಫ್ಲುಯೆನ್ಸರ್ ಅನೇರಿ ಠಕ್ಕರ್ ತಮಗಾದ ಈ ಕಹಿ ಘಟನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ. ʼʼರಾತ್ರಿ 9:30ರ ಸುಮಾರಿಗೆ ನನ್ನ ಸ್ನೇಹಿತೆ ಜಾಕೆಟ್ ಪಾರ್ಸೆಲ್ ಮಾಡಿದ್ದಳು. ಆದರೆ ಮನೆಗೆ ಬಂದ ಡೆಲಿವರಿ ಬಾಯ್, ಮೊಬೈಲ್ ಚಾರ್ಜ್ ಇಲ್ಲ ಎಂಬ ನೆಪ ಹೇಳಿ ಮನೆಯ ಒಳ ಪ್ರವೇಶಿಸಲು ಯತ್ನಿಸಿದ್ದಾನೆ. ಬಳಿಕ ನಾನು ಧೂಮಪಾನ ಮಾಡಬೇಕು, ಮನೆಯ ಒಳಗಿರುವ ಬಾಲ್ಕನಿಗೆ ಬರಬಹುದೇ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಭಯಗೊಂಡು ಸ್ನೇಹಿತೆ ಮಲಗಿದ್ದಾಳೆ ಎಂದು ಹೇಳಿ ಆತನನ್ನು ಸಾಗ ಹಾಕಿದೆʼʼ ಎಂದು ಹೇಳಿದ್ದಾರೆ.

ವಿಡಿಯೊ ನೋಡಿ:



ಭಯಗೊಂಡ ಅನೇರಿ ಠಕ್ಕರ್ ತಕ್ಷಣವೇ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌ಗೆ ಫೋನ್ ಮಾಡಿ ಮೇಲೆ ಕರೆಸಿಕೊಂಡಿದ್ದಾರೆ. ಆತನ ಮೊಬೈಲ್‌ ಪರಿಶೀಲಿಸಿದಾಗ ಬ್ಯಾಟರಿ ಶೇಕಡಾ 45ರಷ್ಟು ಇತ್ತು. ʼʼಆತನ ಉದ್ದೇಶಗಳ ನನ್ನನ್ನು ಚಿಂತೆಗೀಡು ಮಾಡಿತು. ನಂಬರ್ ಎನ್‌ಕ್ರಿಪ್ಟ್ ಆಗಿರುವುದರಿಂದ ನೇರವಾಗಿ ಕರೆ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದʼʼ ಎಂದು ವಿವರಿಸಿದ್ದಾರೆ.

ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!

ಈ ವಿಚಾರವನ್ನು ಪರಿಶೀಲಿಸುವಂತೆ ಉಬರ್ ಸಂಸ್ಥೆಯನ್ನು ಅವರು ಆಗ್ರಹಿಸಿದ್ದಾರೆ. ಆದಾಗ್ಯೂ ಈ ಬಗ್ಗೆ , ಉಬರ್ ಸಂಸ್ಥೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಒಬ್ಬರಂತು ಡೆಲಿವರಿ ಸಿಬ್ಬಂದಿಯ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸುವಂತೆ ಕೇಳಿಕೊಂಡಿದ್ದಾರೆ.