ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಾಣ್ಯ ಎಸೆಯಬೇಡಿ ಎಂದು ಬೋರ್ಡ್ ಇದ್ದರೂ ಜನರು ಮಾಡುವುದು ಅದೇ ಕೆಲಸ; ತಾಜ್‍ಮಹಲ್‍ನ ದೃಶ್ಯ ಚಿತ್ರೀಕರಿಸುತ್ತ ವ್ಲಾಗರ್ ಬೇಸರ

Vlogger Upset in Taj Mahal: ವ್ಲಾಗರ್ ಒಬ್ಬರು ತಾಜ್‍ಮಹಲ್ ಬಗ್ಗೆ ಮಾಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಯವಿಟ್ಟು ಇಲ್ಲಿ ನಾಣ್ಯಗಳನ್ನು ಎಸೆಯಬೇಡಿ ಎಂದು ಅಲ್ಲಿ ಸ್ಪಷ್ಟವಾಗಿ ಬರೆಯಲಾಗಿದ್ದರೂ, ಪ್ರವಾಸಿಗರು ನಾಣ್ಯಗಳನ್ನು ಎಸೆದಿದ್ದಾರೆ. ಇದಕ್ಕೆ ವ್ಲಾಗರ್ ಬೇಸರಗೊಂಡಿದ್ದಾರೆ.

ಲಖನೌ: ತಾಜ್‍ಮಹಲ್‍ಗೆ ಭೇಟಿ ನೀಡಬೇಕೆಂಬುದು ಬಹುತೇಕರ ಕನಸು. 1600ರ ಸಮಯದಲ್ಲಿ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲ್‍ ನೆನಪಿಗಾಗಿ ತಾಜ್‍ಮಹಲ್ (Taj Mahal) ಅನ್ನು ನಿರ್ಮಿಸಿದ್ದು, ವಿಶ್ವದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆಗ್ರಾದ ಯಮುನಾ ನದಿಯ (Yamuna River) ದಡದಲ್ಲಿರುವ ತಾಜ್‍ಮಹಲ್ ಅನ್ನು ನೋಡುವುದು ಕಣ್ಣಿಗೆ ಹಬ್ಬ ಎನ್ನುವುದು ಬಹುತೇಕರ ಅಭಿಮತ.

ಇದೀಗ ವ್ಲಾಗರ್ ಒಬ್ಬರು ತಾಜ್ ಬಗ್ಗೆ ಮಾಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಗಾಯಕ ಮಿಕಾ ಸಿಂಗ್ ಅವರನ್ನೇ ಹೋಲುವ ಈ ವ್ಯಕ್ತಿಯು ಇನ್‌ಸ್ಟಾಗ್ರಾಂನಲ್ಲಿ ಬಳಕೆದಾರರ ಗಮನ ಸೆಳೆದಿದ್ದಾರೆ. ವಿಡಿಯೊದಲ್ಲಿ ಅವರು, ಯಮುನಾ ನದಿಯ ಬಳಿಯಿರುವ ತಾಜ್‌ನ ಹಿಂಭಾಗದ ಕಡೆಗೆ ಗಮನ ಸೆಳೆದರು. ದಯವಿಟ್ಟು ಇಲ್ಲಿ ನಾಣ್ಯಗಳನ್ನು ಎಸೆಯಬೇಡಿ ಎಂದು ಅಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಆದರೂ ಪ್ರವಾಸಿಗರು ನಾಣ್ಯಗಳನ್ನು ಎಸೆದಿದ್ದಾರೆ. ಬೇಸರಗೊಂಡ ವ್ಲಾಗರ್, ಜನರು ನಾಣ್ಯಗಳನ್ನು ಹೇಗೆ ಎಸೆಯುತ್ತಲೇ ಇರುತ್ತಾರೆ ಎಂಬುದನ್ನು ತೋರಿಸಿದ್ದಾರೆ.

ವಿಡಿಯೊ ವೀಕ್ಷಿಸಿ:



ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ನಮಗೆ ಬೇಕಾಗಿದ್ದ ಇತಿಹಾಸ ಶಿಕ್ಷಕರು ಎಂಬ ಶೀರ್ಷಿಕೆ ನೀಡಲಾಗಿದೆ. ಆತ ಮಿಕಾ ಸಿಂಗ್ ತರಹವೇ ಇದ್ದಾನೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ನನಗೆ ಈ ವಿಡಿಯೊ ತುಂಬಾ ಇಷ್ಟವಾಯಿತು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಅಲ್ಲಿ ನಾಣ್ಯಗಳನ್ನು ಏಕೆ ಎಸೆಯುತ್ತಾರೆಂದು ಯಾರಿಗೂ ನಿಜವಾಗಿಯೂ ತಿಳಿದಿಲ್ಲ. ಬೇರೆ ಯಾರಾದರೂ ನಾಣ್ಯ ಎಸೆದಿರುವುದನ್ನು ನೋಡುವ ಕೆಲವರು ತಾವು ಹಾಗೆಯೇ ವರ್ತಿಸುತ್ತಾರೆ. ಅದೃಷ್ಟಕ್ಕಾಗಿ ಜನರು ರೈಲಿನಿಂದ ನದಿಗಳಿಗೆ ನಾಣ್ಯಗಳನ್ನು ಎಸೆಯುವ ರೀತಿಯಲ್ಲಿಯೇ ಇಲ್ಲಿಯೂ ಎಸೆದಿರಬಹುದು ಎಂದು ಮಗದೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ, ಆ ಸ್ಥಳವು ವಾಸ್ತವವಾಗಿ ಇತಿಹಾಸಕಾರರು ಮತ್ತು ಪುರಾತತ್ತ್ವಜ್ಞರು ತಾಜ್ ಮಹಲ್‌ನ ಭೂಗತ ಕೋಣೆಗಳು ಎಂದು ಕರೆಯುವ ಪ್ರವೇಶದ್ವಾರ. ಈ ಕೋಣೆಗಳು ಮೂಲ ವಿನ್ಯಾಸದ ಭಾಗವಾಗಿದ್ದರೂ ಸಾರ್ವಜನಿಕರಿಗೆ ಮುಚ್ಚಲ್ಪಟ್ಟಿದೆ. ಭಾರತೀಯ ಪುರಾತತ್ವ ಸಮೀಕ್ಷೆ (ASI) ಅಧಿಕಾರಿಗಳು ಮಾತ್ರ ಸಾಂದರ್ಭಿಕವಾಗಿ ಅವುಗಳನ್ನು ತೆರೆಯುತ್ತಾರೆ.

ತಾಜ್‌ನಲ್ಲಿರುವ ಹಳೆಯ ಪುಸ್ತಕಗಳು ಅವುಗಳನ್ನು ಸುಮಾರು 120 ಗಜಗಳಷ್ಟು ವಿಸ್ತರಿಸಿರುವ ಭೂಗತ ಕೋಣೆಗಳ ಸರಣಿಯೆಂದು ವಿವರಿಸುತ್ತವೆ. ಇವು ಸುರಂಗದಂತಹ ಕಾರಿಡಾರ್‌ನಿಂದ ಸಂಪರ್ಕ ಹೊಂದಿವೆ. ಕೆಂಪು ಕೋಟೆಗೆ ಇಲ್ಲಿಂದ ಸಂಪರ್ಕಿಸಬಹುದು. ಶತ್ರುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಇದನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ ಅಥವಾ ಅವುಗಳನ್ನು ಅಡಿಪಾಯ ವ್ಯವಸ್ಥೆಯ ಭಾಗವಾಗಿ ಮತ್ತು ಬಹುಶಃ ರಚನಾತ್ಮಕ ಬೆಂಬಲಕ್ಕಾಗಿ ನಿರ್ಮಿಸಲಾಗಿದೆ. ಆದರೂ ಅವುಗಳ ನಿಖರವಾದ ಉದ್ದೇಶವು ಬಹಳ ಹಿಂದಿನಿಂದಲೂ ಸಂಶೋಧಕರು ಮತ್ತು ಪ್ರವಾಸಿಗರನ್ನು ಆಕರ್ಷಿಸಿದೆ.

ಇದನ್ನೂ ಓದಿ: Viral Video: ಭಾರತೀಯ ಪತಿಯನ್ನು ಹುಡುಕುತ್ತಿದ್ದೇನೆ; ಟೈಮ್ಸ್ ಸ್ಕ್ವೇರ್‌ನಲ್ಲಿ ಭಿತ್ತಿಪತ್ರ ಹಿಡಿದು ನಿಂತ ಅಮೆರಿಕದ ಮಹಿಳೆ: ವಿಡಿಯೊ ವೈರಲ್