ಮುಂಬೈ, ಏ. 30: ಧಾರ್ಮಿಕ ಉಪನ್ಯಾಸ ಮೂಲಕವೇ ಗಮನ ಸೆಳೆದವರು ಪ್ರಸಿದ್ಧ ಯುವ ಹಿಂದೂ ಧಾರ್ಮಿಕ ಪ್ರವಚನಕಾರ ಧೀರೇಂದ್ರ ಶಾಸ್ತ್ರಿ (Dhirendra Shastri). ಆದರೆ ಇದೀಗ ಅವರು ವಿವಾದಾತ್ಮಕ ಹೇಳಿಕೆ ಮೂಲಕ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ನಾಗ್ಪುರದ ನಡೆದ ಧಾರ್ಮಿಕ ಪ್ರವಚನದಲ್ಲಿ ಭಾಗವಹಿಸಿದ ವಾರು ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಪುರುಷರಲ್ಲದೆ ಮಹಿಳೆಯರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯ ಅಭ್ಯಾಸವನ್ನು ಅವರು ಟೀಕಿಸಿದ್ದಾರೆ.
ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಶ್ರೀಮಂತ ಮಹಿಳೆಯರು ಮದ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಸಮಾಜದಲ್ಲಿ ಇತ್ತೀಚೆಗೆ ಸಂಸ್ಕೃತಿ ಮರೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಪುರುಷರು ಬಿಡಿ ಮಹಿಳೆಯರೂ ಕೂಡ ಮದ್ಯಪಾನಿಗಳಾಗಿ ಬದಲಾಗುತ್ತಿದ್ದಾರೆ. ಅವರನ್ನು ಭಜರಂಗಬಲಿಯೇ ಕಾಪಾಡಬೇಕು ಎಂದಿದ್ದಾರೆ.
ವಿಡಿಯೊ ನೋಡಿ:
ಇಂತಹ ಅಭ್ಯಾಸಗಳು, ಮಕ್ಕಳ ಪಾಲನೆಯ ಮೇಲೆ ಪರಿಣಾಮ ಬೀರಬಹುದು. ಮುಂದಿನ ದಿನದಲ್ಲಿ ಮಗುವಿಗೆ ನಿದ್ರೆ ಬರಿಸಲು, ಅತ್ತರೆ ಸಮಾಧಾನ ಪಡಿಸಲು ಮದ್ಯ ಕುಡಿಸಿ ಮಲಗಿಸುವ ಸಂದರ್ಭ ಬರಬಹುದು ಎಂದು ಟೀಕಿಸಿದ್ದಾರೆ. ಹಿಂದೆ ಜನರು ತಪ್ಪು ಮಾಡಲು ಹೆದರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದಿದ್ದಾರೆ. ಸದ್ಯ ಈ ಹೇಳಿಕೆ ಸೋಷಿಯಲ್ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ.
ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್ ಕೆಳಗೆ ಬೈಕ್ ಓಡಿಸಿದ ಯುವಕ
ಕೆಲವರು ಇದನ್ನು ಸಾಮಾಜಿಕ ಮೌಲ್ಯಗಳನ್ನು ಬದಲಾಯಿಸುವ ಎಚ್ಚರಿಕೆ ಎಂದು ಬೆಂಬಲಿಸಿದರೆ, ಇನ್ನು ಕೆಲವರು ಇದನ್ನು ಮಹಿಳೆಯರ ನೀಡಿದ ಅಗೌರವ ಎಂದು ಟೀಕಿಸಿದ್ದಾರೆ. ಮಹಿಳಾ ಕಾಂಗ್ರೆಸ್ ನಾಯಕಿ ದೀಪ್ತಿ ಪಾಂಡೆ ಇದನ್ನು ವಿರೋಧಿಸಿದ್ದು, ಇಂತಹ ಹೇಳಿಕೆ ಸ್ವೀಕಾರಾರ್ಹವಲ್ಲ. ಧೀರೇಂದ್ರ ಶಾಸ್ತ್ರಿ ತಮ್ಮ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
''ತಾಯಂದಿರು ಮಗುವಿನ ಮೊದಲ ಗುರು ಆಗಿದ್ದಾರೆ. ಆದ್ದರಿಂದ ಈ ಮಾತು ಅಗೌರವದ ಸೂಚನೆ. ಇದಕ್ಕೆ ಅವರು ಕ್ಷಮೆಯಾಚಿಸಬೇಕು" ಎಂದು ಆಗ್ರಹಿಸಿದ್ದಾರೆ. ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧೀರೇಂದ್ರ ಕೃಷ್ಣ ಶಾಸ್ತ್ರಿ, ಜನರು 4 ಮಕ್ಕಳನ್ನು ಹೊಂದಬೇಕು. ಅವರಲ್ಲಿ ಒಬ್ಬರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಅರ್ಪಿಸಬೇಕು ಎಂದು ಹೇಳಿದ್ದರು.