ಬೆಂಗಳೂರು,ಮಾ.27: ಮಾರ್ಚ್ 19 ರಂದು ರಣವೀರ್ ಸಿಂಗ್ ಅಭಿನಯದ ಧುರಂದರ್ 2 (Dhurandhar Movie) ಸಿನಿಮಾ ಬಿಡುಗಡೆಗೊಂಡಿದೆ. ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಕೂಡ ಮಾಡುತ್ತಿದೆ. ಸದ್ಯ ಈ ಚಿತ್ರದ ಕ್ರೇಜ್ ಚಿತ್ರ ಮಂದಿರಕ್ಕೆ ಮಾತ್ರ ಆಯ್ಕೆ ಯಾಗಿರದೇ ಟಾಪ್ ಬ್ರ್ಯಾಂಡ್‌ಗಳು, ಸರ್ಕಾರಿ ಸೇವೆಗಳು ಇದರ ಡೈಲಾಗ್ ಅನ್ನು ಬಳಸಿಕೊಂಡಿದೆ. ಧುರಂದರ್ 2 ಚಿತ್ರದ ಒಂದು ಸಂಭಾಷಣೆ ಈಗ ದೇಶದ್ಯಾಂತ ಭಾರೀ ವೈರಲ್ ಆಗಿದ್ದು ಖಾಸಗಿ ಕಂಪನಿಗಳು ಅಲ್ಲದೆ ಸರ್ಕಾರಿ ಸಂಸ್ಥೆಗಳು ಕೂಡ ಇದನ್ನು ಬಳಸಿಕೊಂಡಿವೆ.
ಅಭಿಮಾನಿಗಳ ನೆಚ್ಚಿನ ಪಾತ್ರ ಜಮೀಲ್ ಜಮಾಲಿ ಮಾತನಾಡುವ "ಬಚ್ಚಾ ಹೈ ತು ಮೇರಾ" ನೀನು ನನ್ನ ಮಗು ಇದ್ದಂತೆ ಎಂಬ ಡೈಲಾಗ್ ಭಾರೀ ವೈರಲ್ ಆಗಿದೆ. ಭಾರತದಾದ್ಯಂತ ಕೆಲವು ಬ್ರ್ಯಾಂಡ್ ಗಳು ಕೂಡ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಸೃಜನಾತ್ಮಕವಾಗಿ ಇದನ್ನು ಅಳವಡಿಸಿಕೊಳ್ಳುತ್ತಿವೆ.
ಇಂಡಿಯಾ ಪೋಸ್ಟ್ ಪೋಸ್ಟಲ್ ಲೈಫ್ ಇನ್ಶುರೆನ್ಸ್ ಅನ್ನು ಉತ್ತೇಜಿಸುವ ಹಾಸ್ಯಮಯ ಪೋಸ್ಟ್ ಅನ್ನು ಹಂಚಿಕೊಂಡಿದೆ, ಬಳಕೆದಾರರು ತಮ್ಮ ಭವಿಷ್ಯವನ್ನು ಮೊದಲೇ ಭದ್ರಪಡಿಸಿ ಕೊಳ್ಳಲು ಪ್ರೋತ್ಸಾಹಿಸುವ ತಮಾಷೆಯ ಸಂದೇಶದೊಂದಿಗೆ ನೀಡಿದೆ.
Viral Video: ಸಿಎಂ ಯೋಗಿ- ಬಾಲಕನ ಮಧ್ಯೆ ನಡೆದ 'ಚಿಪ್ಸ್ ಡೀಲ್' ಸಕ್ಸಸ್; ವೈರಲ್ ಆಗ್ತಿರೋ ವಿಡಿಯೋ ನೋಡಿ
ಅದೇ ರೀತಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇದನ್ನು ಅನುಸರಿಸಿದೆ. ಆಕರ್ಷಕ ಟೆಲಿಕಾಂ ಕೊಡುಗೆಗಳ ಮೇಲೆ ವಿಶ್ವಾಸಾರ್ಹತೆಯನ್ನು ಎತ್ತಿ ತೋರಿಸುವ ಸಂದೇಶ ನೀಡಿದೆ. ಕೇವಲ ಖಾಸಗಿ ಕಂಪನಿಗಳು ಸರಕಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ ಕೂಡ ಈ ಡೈಲಾಗ್ ಬಳಸಿಕೊಂಡಿದೆ. ಆಹಾರ ಪದಾರ್ಥಗಳಿಂದ ಹಿಡಿದು ಹಣಕಾಸು ಸಂಸ್ಥೆಗಳವರೆಗೆ ಅಪ್ಸರಾ ಐಸ್ ಕ್ರೀಮ್‌ಗಳು, ವಡಿ ಲಾಲ್, ಕ್ಯಾಶ್‌ಕಾರೊ, ಬುಕ್‌ಮೈಶೋ, ಬಾನ್, ಬಾಂಡ್‌ಟೈಟ್, ರಾಜಸ್ಥಾನ ಪ್ರವಾಸೋದ್ಯಮ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಬಳಸಿದೆ. ಅದೇ ರೀತಿ ದೆಹಲಿ, ಉತ್ತರ ಪ್ರದೇಶ ಮತ್ತು ಗುರುಗ್ರಾಮ್ ಪೊಲೀಸ್ ಇಲಾಖೆಗಳು ರಸ್ತೆ ಸುರಕ್ಷತೆಗಾಗಿ ಕೂಡ ಈ ಡೈಲಾಗ್ ಬಳಸಿದೆ.
ಮಾರ್ಚ್ 19, 2026 ರಂದು ಬಿಡುಗಡೆಯಾದ ಧುರಂಧರ್: ದಿ ರಿವೆಂಜ್ ತ್ವರಿತವಾಗಿ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿದೆ. ರಾಕೇಶ್ ಬೇಡಿ, ಸಾರಾ ಅರ್ಜುನ್, ಆರ್. ಮಾಧವನ್ ಮತ್ತು ಸಂಜಯ್ ದತ್ ಜೊತೆಗೆ ರಣವೀರ್ ಸಿಂಗ್ ತಾರಾಬಳಗವನ್ನು ಒಳಗೊಂಡ ಈ ಚಿತ್ರವು ವಿಶ್ವಾದ್ಯಂತ ಭಾರಿ ಸದ್ದು ಮಾಡುತ್ತಿದೆ.