ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮನುಷ್ಯನಿಗೆ ಮಾತ್ರ ಅಲ್ಲ ಪ್ರಾಣಿಗಳಿಗೂ ತಪ್ಪಿಲ್ಲ ಈ ಗೋಳು; ಸಂಗಾತಿಯೊಂದಿಗೆ ಜಗಳವಾಡಿದ ಗೋರಿಲ್ಲಾದ ಎಕ್ಸ್ ಪ್ರೇಷನ್ ಹೇಗಿತ್ತು ಗೊತ್ತಾ?

Viral News: ಗೊರಿಲ್ಲಾವೊಂದು ಡೀಪ್ ಆಗಿ ಯೋಚನೆಯಲ್ಲಿ ಮಗ್ನರಾಗಿರುವ ದೃಶ್ಯವೊಂದು ವೈರಲ್ ಆಗಿದೆ. ತನ್ನ ಬಲಗೈಯನ್ನು ದೇಹದಾದ್ಯಂತ ಮಡಚಿ ಎಡಗೈಯನ್ನು ಬಾಯಿಯ ಮೇಲೆ ಇಟ್ಟು ಕೊಂಡು ಗೊರಿಲ್ಲಾ ಕುಳಿತಿದೆ. ತನ್ನ ಸಂಗಾತಿ ಜೊತೆ ಜಗಳವಾಡಿದ ನಂತರ ಮನುಷ್ಯರಂತೆ ಗೊರಿಲ್ಲಾ ಈ ರೀತಿ ಆಲೋಚನೆಯಲ್ಲಿ ಕುಳಿತಿದೆ ಎಂದು ಹೇಳಲಾಗುತ್ತಿದೆ.

ಸಂಗಾತಿಯೊಂದಿಗೆ ಜಗಳವಾಡಿ ಆಲೋಚನೆಯಲ್ಲಿ ಮುಳುಗಿದ ಗೊರಿಲ್ಲಾ

ನವದೆಹಲಿ, ಜೂ.10: ಸೋಷಿಯಲ್ ಮೀಡಿಯಾದಲ್ಲಿ ಹಲವು ಪ್ರಾಣಿಗಳ ಮುದ್ದಾದ ವಿಡಿಯೊ ವೈರಲ್ (Viral News) ಆಗುತ್ತವೆ. ಆದರೆ ಕೆಲವು ನಮ್ನನ್ನು ಆಕರ್ಷಣೆ ಮಾಡಿದರೆ ಇನ್ನು ಕೆಲವು ನಗೆಯಲ್ಲಿ ತೇಲಿಸಿ ಬಿಡುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಗೊರಿಲ್ಲಾ ವೊಂದು ಡೀಪ್ ಆಗಿ ಯೋಚನೆ ಯಲ್ಲಿ ಮಗ್ನರಾಗಿರುವ ದೃಶ್ಯವೊಂದು ವೈರಲ್ ಆಗಿದೆ. ತನ್ನ ಬಲಗೈಯನ್ನು ದೇಹದಾದ್ಯಂತ ಮಡಚಿ ಎಡಗೈಯನ್ನು ಬಾಯಿಯ ಮೇಲೆ ಇಟ್ಟುಕೊಂಡು ಗೊರಿಲ್ಲಾ ಕುಳಿತಿದೆ. ತನ್ನ ಸಂಗಾತಿ ಜೊತೆ ಜಗಳವಾಡಿದ ನಂತರ ಮನುಷ್ಯ ರಂತೆ ಗೊರಿಲ್ಲಾ ಈ ರೀತಿ ಆಲೋಚನೆಯಲ್ಲಿ ಕುಳಿತಿದೆ ಎಂದು ಹೇಳಲಾಗುತ್ತಿದೆ.

ಈ ವಿಡಿಯೋದಲ್ಲಿರುವ ಗೊರಿಲ್ಲಾದ ಹೆಸರು ಕಿಯೋಮಾಸಾ..13 ವರ್ಷದ ಗಂಡು ಪಶ್ಚಿಮ ತಗ್ಗು ಪ್ರದೇಶದ ಗೊರಿಲ್ಲಾ, ನವೆಂಬರ್ 1, 2012 ರಂದು ಜಪಾನ್‌ನ ನಾಗೋಯಾದಲ್ಲಿರುವ ಹಿಗಾಶಿ ಯಾಮಾ ಮೃಗಾಲಯದಲ್ಲಿ ಜನಿಸಿತು. ಇದರ ಆಕರ್ಷಕ ಲುಕ್ ಅನ್ನೇ ಹೆಚ್ಚಿನವರು ಇಷ್ಟ ಪಡುತ್ತಾರೆ‌. ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ ಕಿಯೋಮಾಸಾ ಗೊರಿಲ್ಲಾ ಒಬ್ಬಂಟಿಯಾಗಿ ಕುಳಿತಿರುವುದು ಕಂಡು ಬಂದಿದೆ.

ವಿಡಿಯೋ ನೋಡಿ:



ತನ್ನ ಬಲಗೈಯನ್ನು ದೇಹದಾದ್ಯಂತ ಮಡಚಿ ಎಡಗೈಯನ್ನು ಬಾಯಿಯ ಮೇಲೆ ಇಟ್ಟುಕೊಂಡು ಎಲ್ಲೋ ದೂರದ ಕಡೆಗೆ ದೃಷ್ಟಿ ದೃಷ್ಟಿ ಇಟ್ಟು ನೋಡುತ್ತಿದೆ. ಮನುಷ್ಯರು ಯಾರೊಂದಿಗೂ ಜಗಳ ಮಾಡಿದಾಗ ಅಥವಾ ಕೋಪಗೊಂಡಾಗ ಈ ರೀತಿ ಕುಳಿತು ಕೊಳ್ಳುತ್ತಾರೆ.​ ವರದಿಗಳ ಪ್ರಕಾರ, ತನ್ನ ಸಂಗಾತಿಯೊಂದಿಗೆ ಜೋರಾಗಿ ಜಗಳವಾಡಿದ ಕೆಲವೇ ಕ್ಷಣಗಳಲ್ಲಿ ಕಿಯೋಮಾಸಾ ಈ ರೀತಿ ಬಂದು ಕುಳಿತಿದ್ದಾನೆ ಎಂದು ಹೇಳಲಾಗಿದೆ‌

Viral Video: ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ!

​ಈ ಬಗ್ಗೆ ನೆಟ್ಟಿಗರು ಕೂಡ ತಮಾಷೆಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು ನನ್ನ ಹೆಂಡತಿಯೊಂದಿಗೆ ಜೋಕ್ ಮಾಡಿ ಸಿರೀಯಸ್ ಆದರೆ ನಾನು ಹೀಗೆ ಕುಳಿತು ಕೊಳ್ಳುತ್ತೇನೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ಪತಿ ನನ್ನೊಂದಿಗೆ ಸೋತಾಗ ಇದೇ ರೀತಿಯ ನೋಟ ಇರುತ್ತದೆ ಎಂದು ಮಹಿಳೆಯೊಬ್ಬರು ಕಾಲೆಳೆದಿದ್ದಾರೆ. ಕಿಯೋಮಾಸಾ ಮಾನವನಂತೆಯೇ ಪೋಸ್ ನೀಡಿದ್ದು ಈ ಕ್ಲಿಪ್ ಆನ್‌ಲೈನ್‌ನಲ್ಲಿ ಎಲ್ಲರ ಗಮನ ಸೆಳೆದಿದೆ.