Most Expensive Poison: ವಿಶ್ವದ ಅತ್ಯಂತ ದುಬಾರಿ ವಿಷ ಯಾವುದು ಗೊತ್ತಾ? ಇಲ್ಲಿದೆ ನೋಡಿ ಅದರ ಮಾಹಿತಿ!
ನಮ್ಮ ಕೈಬೆರಳಿನಷ್ಟು ಉದ್ದವಾಗಿರುವ ಚೇಳನ್ನು ಸಾಮಾನ್ಯವೆಂದುಕೊಳ್ಳಬೇಡಿ. ಇದರ ವಿಷ(Most Expensive Poison) ತುಂಬಾ ದುಬಾರಿಯಂತೆ. ಒಂದು ಲೀಟರ್ ಚೇಳಿನ ವಿಷಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 87 ಕೋಟಿ ರೂಗಳಂತೆ.ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.


ನಮ್ಮ ಸುತ್ತಮುತ್ತ ಅನೇಕ ಜೀವಿಗಳಿವೆ. ಅದರಲ್ಲಿ ಕೆಲವೊಂದು ವಿಷಜಂತುಗಳಿವೆ. ಅವುಗಳಲ್ಲಿ ಕೆಲವೊಂದು ಕಚ್ಚಿದರೆ ಸಾವು ಸಂಭವಿಸಬಹುದು. ನಮಲ್ಲಿ ಹೆಚ್ಚಿನವರಿಗೆ ಗೊತ್ತಿರುವ ವಿಷಜಂತು ಎಂದರೆ ಅದು ಹಾವು. ಆದರೆ ಹಾವಿನಷ್ಟೇ ವಿಷಕಾರಿಯಾದ ಇನ್ನೊಂದು ಜೀವಿ ಇದೆ ಅದು ಚೇಳು!ಹೌದು ನಮ್ಮ ಕೈಬೆರಳಿನಷ್ಟು ಉದ್ದವಾಗಿರುವ ಈ ಚೇಳನ್ನು ಸಾಮಾನ್ಯವೆಂದುಕೊಳ್ಳಬೇಡಿ. ಇದರ ವಿಷ( Mosst Expensive Poison ) ತುಂಬಾ ದುಬಾರಿಯಂತೆ. ಅದಕ್ಕೆ ಕೋಟಿಗಟ್ಟಲೆ ಬೆಲೆ ಇದೆಯಂತೆ. ಹೌದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚೇಳಿನ ವಿಷಕ್ಕೆ ಚಿನ್ನದ ಬೆಲೆ ಇದೆಯಂತೆ. ಹಾಗಾದ್ರೆ ಯಾಕೆ ಚೇಳಿನ ವಿಷಕ್ಕೆಅಷ್ಟು ಬೆಲೆ ಎಂಬ ಮಾಹಿತಿ ಇಲ್ಲಿದೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.
ಚೇಳಿನ ಜೀವನಶೈಲಿ
8 ಕಾಲುಗಳಿರುವ ಈ ಚೇಳಿನ ಉದ್ದವು 1 ರಿಂದ 23 ಸೆಂಟಿಮೀಟರ್‌ವರೆಗೆ ಇರುತ್ತದೆ. ಇದರ ತೂಕ 56 ಗ್ರಾಂ. ಅನೇಕ ಬಾರಿ ಇನ್ನೂ ದೊಡ್ಡ ಚೇಳುಗಳು ಕಂಡುಬರುತ್ತವೆ. ಸಂಶೋಧನೆಯ ಪ್ರಕಾರ, ಗಂಡು ಮತ್ತು ಹೆಣ್ಣು ಚೇಳುಗಳು ಪರಸ್ಪರ ಭೇಟಿಯಾದಾಗ, ಅವು ಮೊದಲು ನೃತ್ಯ ಮಾಡುತ್ತವೆಯಂತೆ. ನೃತ್ಯ ಮಾಡಿದ ನಂತರ, ಗಂಡು ಚೇಳುಗಳು ಹೆಣ್ಣಿಗಾಗಿ ವೀರ್ಯವನ್ನು ನೆಲದಲ್ಲಿ ಚೆಲ್ಲಿಬಿಡುತ್ತದೆಯಂತೆ. ಅದನ್ನು ಹೆಣ್ಣು ಚೇಳು ಬಳಸಿಕೊಂಡು ಸಂತಾನೋತ್ಪತ್ತಿ ಮಾಡುತ್ತವೆಯಂತೆ.
ಚೇಳಿನ ವಿಷವು ಎಷ್ಟು ದುಬಾರಿ ಗೊತ್ತಾ?
ವರದಿಗಳ ಪ್ರಕಾರ, ಚೇಳಿನ ವಿಷವು ಸಾಕಷ್ಟು ದುಬಾರಿಯಾಗಿದೆ. ಚೇಳಿನ ವಿಷವನ್ನು ಹೊರತೆಗೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಒಂದು ಲೀಟರ್ ವಿಷದ ಬೆಲೆ 10 ಮಿಲಿಯನ್ ಡಾಲರ್ ಅಂದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 87,41,54,000 ರೂಪಾಯಿಗಳು. ಒಂದು ಚೇಳಿನಿಂದ ಸುಮಾರು 2 ಮಿಲಿ ವಿಷವನ್ನು ಹೊರತೆಗೆಯಲಾಗುತ್ತದೆ. ಅಂದರೆ ಒಂದು ಲೀಟರ್ ವಿಷವನ್ನು ಸಂಗ್ರಹಿಸಲು ಸಾವಿರಾರು ಚೇಳುಗಳು ಬೇಕಾಗುತ್ತದೆ.
ಚೇಳಿನ ವಿಷವನ್ನು ಎಲ್ಲಿ ಬಳಸಲಾಗುತ್ತದೆ?
ಚೇಳಿನ ವಿಷವನ್ನು ಅನೇಕ ವಿಷಯಗಳಲ್ಲಿ ಬಳಸಲಾಗುತ್ತದೆ. ಇದನ್ನು ಔಷಧದಲ್ಲಿ ಪ್ರತಿಜೀವಕಗಳು ಮತ್ತು ನೋವು ನಿವಾರಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದಲ್ಲದೆ, ಇದನ್ನು ಸೌಂದರ್ಯ ಉತ್ಪನ್ನಗಳು, ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ರಕ್ತನಾಳಗಳಲ್ಲಿ ಜೀವಕೋಶಗಳ ರಚನೆಯ ಜೊತೆಗೆ ಚೇಳಿನ ವಿಷವನ್ನು ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದನ್ನು ಮೂಳೆಗಳ ಚಿಕಿತ್ಸೆಯಲ್ಲಿ ಸ್ಪ್ರೇ ಆಗಿಯೂ ಬಳಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ:Viral Video: 'ಡಿಂಗ್ ಡಾಂಗ್ ಡಿಂಗ್' ಸಾಂಗ್‌ಗೆ ಸಖತ್ ಆಗಿ ಹೆಜ್ಜೆ ಹಾಕಿದ ಗರ್ಭಿಣಿ; ನೆಟ್ಟಿಗರು ಫುಲ್ ಶಾಕ್
ಈ ಚೇಳುಗಳು ಒಂದು ಅಪರೂಪದ ಜೀವಿಗಳಲ್ಲ. ಮತ್ತು ಇವು ಯಾವುದೋ ಕಾಡುಗಳಲ್ಲಿ ಮಾತ್ರ ಸಿಗುವಂಥದಲ್ಲ. ಇವು ದೇಶದ ಹಲವಾರು ಭಾಗಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ವಿಶೇಷವಾಗಿ ಮಳೆಗಾಲದಲ್ಲಿ ಇವು ಅಲ್ಲಲ್ಲಿ ಓಡಾಡುತ್ತಿರುತ್ತವೆ. ಆದರೆ ಅದರ ವಿಷವನ್ನು ತೆಗೆಯುವವರು ತುಂಬಾ ಪರಿಣತರಾಗಿರಬೇಕು, ಬುದ್ಧಿವಂತರಾಗಿರಬೇಕು. ಚೇಳು ಕಂಡು ಭಯಪಡುವವರು ಈ ಕೆಲಸಕ್ಕೆ ಹೋಗದಿರುವುದೇ ಒಳ್ಳೆಯದು. ಯಾಕೆಂದರೆ ಚೇಳನ್ನು ಹಿಡಿಯುವಾಗ ಅಥವಾ ಅದರ ವಿಷ ತೆಗೆಯುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಇಲ್ಲವಾದರೆ ಇದರಿಂದ ಗಾಯ, ಅಪಾಯವನ್ನು ಅನುಭವಿಸಬೇಕಾಗಬಹುದು.