ನಾಗ್ಪುರ: ಪಾನಿಪುರಿ ಅಥವಾ ಗೋಲ್‍ಗಪ್ಪ ಎಂದರೆ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಎಷ್ಟೇ ಹೊಟ್ಟೆ ತುಂಬಿದರೂ ಗೋಲ್‌ಗಪ್ಪ ನೋಡಿದ್ರೆ ಯಾರು ತಾನೇ ಬೇಡ ಅಂತಾರೆ ಹೇಳಿ...? ರಸ್ತೆ ಬದಿಯ ಈ ತಿಂಡಿ ಈಗ ಮದುವೆ ಮನೆಯ ತನಕ ಬಂದಿದೆ. ಈ ಗೋಲ್‌ಗಪ್ಪ ಜೀವಪರ್ಯಂತ ಫ್ರೀಯಾಗಿ ಸಿಕ್ಕರೆ ಯಾರ ತಾನೇ ಬೇಡ ಅಂತಾರೆ ಹೇಳಿ...? ಅರೆ... ಗೋಲ್‌ಗಪ್ಪ ಉಚಿತವಾಗಿ ಸಿಗಲಿದೆಯಾ ಎಂದ ಬಾಯಿಬಿಟ್ಟಿರಿ ಜೋಕೆ. ಇದಕ್ಕೊಂದು ಕಂಡಿಷನ್ ಕೂಡ ಇದೆಯಂತೆ. ನಾಗ್ಪುರದಲ್ಲಿ ಗೋಲ್‌ಗಪ್ಪ ಮಾರಾಟಗಾರನೊಬ್ಬನಿಗೆ 99,000 ನೀಡಿದ್ರೆ ಜೀವನಪರ್ಯಂತ ಫ್ರಿಯಾಗಿ ಯಾವಾಗ ಬೇಕಾದ್ರೂ ಗೋಲ್‌ಗಪ್ಪ ನೀಡಲಿದ್ದಾನಂತೆ. ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಪೋಸ್ಟ್‌ವೊಂದರಲ್ಲಿ ತಿಳಿಸಿದ ಪ್ರಕಾರ, ನಾಗ್ಪುರದ ಗೋಲ್‍ಗಪ್ಪ ವಾಲಾ ಗುಪ್ತಾ ಜನರ ಪಾನಿಪುರಿ ಕ್ರೇಜ್‍ನ ಲಾಭವನ್ನು ಪಡೆಯಲು ಸ್ಕೆಚ್ ಹಾಕಿದ್ದಾರೆ. ಅದೇನು ಎಂದರೆ ಗ್ರಾಹಕರು ಒಮ್ಮೆಗೆ 99,000 ರೂಪಾಯಿ ನೀಡಿದರೆ ಈತ ಅವರ ಜೀವಮಾನವಿಡೀ ಗೋಲ್‍ಗಪ್ಪ ನೀಡುತ್ತಾನಂತೆ. ಇದು ಮಾತ್ರವಲ್ಲ, ಅವರು ಯಾವುದೇ ಸಮಯದಲ್ಲಿ ಬಂದು ತಮಗೆ ಬೇಕಾದಷ್ಟು ಗೋಲ್‍ಗಪ್ಪಗಳನ್ನು ತಿನ್ನಬಹುದು. ಈ ವಿಶಿಷ್ಟ ಒಪ್ಪಂದವು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಚರ್ಚೆಯ ವಿಷಯವಾಗಿದೆ.
ಈ ಪೋಸ್ಟ್ ಅನ್ನು ಮಾರ್ಕೆಟಿಂಗ್ ಗ್ರೋಮ್ಯಾಟಿಕ್ಸ್ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಇದಕ್ಕೆ 16,000 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಹಾಗೇ ಅನೇಕರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮಾಡಿದ್ದಾರೆ. "ಈ ಆಫರ್ ನನ್ನ ಜೀವಮಾನಕ್ಕೆ ಮಾತ್ರವೇ?" ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ಇನ್ನೊಬ್ಬ ನೆಟ್ಟಿಗರು "ಯಾರೂ ಅವರಿಗೆ ಹಣವನ್ನು ನೀಡುವುದಿಲ್ಲ ಎಂದು ಅವರಿಗೆ ತಿಳಿದಿದೆ. ಹಾಗಾಗಿ ಈ ಆಫರ್ ನೀಡಿದ್ದಾರೆ" ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಗೋಲ್‍ಗಪ್ಪ ಮಾರಾಟಗಾರನು ಹಣದೊಂದಿಗೆ ಓಡಿಹೋಗಬಹುದು ಎಂಬ ಭಯದಿಂದ ಅನೇಕ ಜನರು ಒಪ್ಪಂದದ ಸತ್ಯಾಸತ್ಯತೆಯ ಬಗ್ಗೆ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: 'ಕಾಳಿ ಮಾತಾ' ವೇಷ ಧರಿಸಿ ಪಾನಿಪುರಿ ತಿಂದ ಮಹಿಳೆ; ವಿಡಿಯೊ ನೋಡಿ ನೆಟ್ಟಿಗರು ಫುಲ್ ಗರಂ
ಕಾಳಿ ಮಾತಾ ವೇಷ ಧರಿಸಿದ ಮಹಿಳೆಯೊಬ್ಬರು ಬೀದಿ ಬದಿ ಫುಡ್ ಕೌಂಟರ್ ಬಳಿ ನಿಂತು 'ಪಾನಿಪುರಿ' ತಿಂದು ಆನಂದಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆ ಮೇಲೆ ಕಿಡಿಕಾರಿದ್ದಾರೆ. ವೈರಲ್ ವಿಡಿಯೊದಲ್ಲಿ ಕಾಳಿ ಮಾತೆಯ ವೇಷದಲ್ಲಿರುವ ಮಹಿಳೆ ಪಾನಿಪುರಿ ಅಂಗಡಿಯ ಬಳಿ ನಿಂತು ಪ್ಲೇಟ್ ಹಿಡಿದುಕೊಂಡು ಪಾನಿಪುರಿ ತಿಂದಿದ್ದಾರೆ. ಇದನ್ನು ಅಲ್ಲಿದ್ದವರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.