ಶಿಮ್ಲಾ: ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ವಿದೇಶಿ ಮಹಿಳೆಯೊಬ್ಬಳು ರಸ್ತೆಯ ಮೇಲೆ ಕಸ ಎಸೆದ ಇಬ್ಬರು ಪುರುಷರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಳು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಹಿಮಾಚಲ ಪ್ರದೇಶದ ಲಾಪಾಸ್ ಜಲಪಾತಕ್ಕೆ ಭೇಟಿ ನೀಡಿದ ಖ್ಯಾತ ಇನ್‌ಸ್ಟಾಗ್ರಾಮರ್ ಒಬ್ಬಳು ಜನಪ್ರಿಯ ಪ್ರವಾಸಿ ತಾಣದ ಭಯಾನಕ ಸ್ಥಿತಿಯನ್ನು ಬಹಿರಂಗಪಡಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾಳೆ. ಇದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದು ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ, ಮಹಿಳೆ ಅಲ್ಲಿದ್ದ ಬಂಡೆಗಳ ಮೇಲೆ ಹರಡಿರುವ ಕಸದ ರಾಶಿಗಳು, ಬಹಿರಂಗವಾಗಿ ಕುಡಿಯುವ ಪುರುಷರ ಗುಂಪುಗಳು ಮತ್ತು ಅತಿಕ್ರಮವಾಗಿ ಪ್ರವೇಶಿಸಿದ ತಿಂಡಿ ತಿನ್ನಿಸು ಮಾರಾಟಗಾರರ ಅಂಗಡಿಗಳನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾಳೆ. ಹಾಗೇ ಭಾರತ ಅದ್ಭುತವಾಗಿದೆ. ಆದರೆ ಭಾರತೀಯರಿಗೆ ನಾಗರಿಕ ಪ್ರಜ್ಞೆಯ ಕೊರತೆ ಇದೆ ಎಂದು ಪೋಸ್ಟ್ ಮಾಡಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. "ಭಾರತದಲ್ಲಿ ನಾಗರಿಕ ಪ್ರಜ್ಞೆ ಒಂದು ತಮಾಷೆಯ ವಿಷಯವಾಗಿದೆ" ಎಂದು ನೆಟಟಿಗರೊಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು "ಈ ಮದ್ಯವ್ಯಸನಿಗಳು ಅತ್ಯಂತ ಸುಂದರವಾದ ಚಾರಣವನ್ನೇ ಹಾಳು ಮಾಡುತ್ತಾರೆ" ಎಂದು ಹೇಳಿದ್ದಾರೆ. "ಭಾರತದಲ್ಲಿ ಪ್ರಯಾಣಿಸುವುದು ಕಷ್ಟ" ಎಂದು ಮೂರನೆಯವರು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಮಾಲ್‌ನಲ್ಲಿದ್ದ ಶ್ವಾನವನ್ನು ನೋಡಿ ಗ್ರಾಹಕರು ಶಾಕ್ ಆಗಿದ್ದು ಯಾಕೆ?ವಿಡಿಯೊ ಇಲ್ಲಿದೆ ನೋಡಿ
ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ವಿದೇಶಿ ಮಹಿಳೆಯೊಬ್ಬಳು ಐಸ್ ಕ್ರೀಂ ಕವರ್‌ಗಳನ್ನು ರಸ್ತೆಗೆ ಎಸೆದ ಇಬ್ಬರು ಪುರುಷರನ್ನು ತರಾಟೆಗೆ ತೆಗೆದುಕೊಂಡ ವಿಡಿಯೊ ವೈರಲ್ ಆಗಿತ್ತು. ವಿಡಿಯೊದಲ್ಲಿ ಪುರುಷರು ಐಸ್‍ಕ್ರೀಂ ಕವರ್‌ಗಳನ್ನುರಸ್ತೆಗೆ ಎಸೆದಾಗ ಅದನ್ನು ನೋಡಿದ ಮಹಿಳೆ ಅದನ್ನು ಎತ್ತಿಕೊಂಡು ಕಸದ ಬುಟ್ಟಿಯನ್ನು ತೋರಿಸಿ ಅದರಲ್ಲಿ ಹಾಕುವಂತೆ ಹೇಳಿದ್ದಳು.